ತಾಯಿ, ಗುರು ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು: ಚಿದಾನಂದ ಗೌಡ

ಹೊಸಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ 20 ಲಕ್ಷ ಅನುದಾನ

218

Get real time updates directly on you device, subscribe now.

ಬರಗೂರು: ಒಳ್ಳೆಯ ಮಾರ್ಗದಲ್ಲಿ ನಡೆಯುವ ವ್ಯಕ್ತಿ ಸಮಾಜದಲ್ಲಿ ಉನ್ನತಿ ಹೊಂದಿ ಯಶಸ್ಸಿಯತ್ತ ಮುನ್ನಡೆಯುತ್ತಾನೆ, ಹೊಸಹಳ್ಳಿಯಂತ ಪುಟ್ಟ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿದ ಗುರುವಿನ ಮಾರ್ಗದರ್ಶನ ಹೆತ್ತ ತಾಯಿ ಆರ್ಶೀವಾದ, ನೂರಾರು ಹಿತೈಶಿಗಳ ಸ್ನೇಹ ಪೂರಕ ಪ್ರೋತ್ಸಾಹ ನನ್ನನ್ನು ವಿಧಾನ ಪರಿಷತ್‌ ಸ್ಥಾನದವರೆಗೆ ತಂದು ನಿಲ್ಲಿಸಿದೆ, ನನ್ನ ಹುಟ್ಟೂರ ಜನರ ಶ್ರೇಯೋಭಿವೃದ್ಧಿ ಹಿತ ದೃಷ್ಟಿಯಿಂದ ಗ್ರಾಮಕ್ಕೆ ಸರ್ಕಾರಿ ಆಸ್ಪತ್ರೆ ಜೊತೆಗೆ ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ ಮಕ್ಕಳ ಶೈಕ್ಷಣಿಕ ಗುಣ ಮಟ್ಟ ಸುಧಾರಣೆ ಮಾಡುವ ಉದ್ದೇಶದಿಂದ ಮಾದರಿ ಶಾಲೆ ಆರಂಭಿಸಿ 1 ರಿಂದ 12ನೇ ತರಗತಿ ವರೆಗೆ ಉಚಿತ ಶಿಕ್ಷಣ ನೀಡುವ ಸಂಕಲ್ಪ ಮಾಡಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.
ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಗ್ರಾಮ ಪಂಚಾಯತಿ ಹಾಗೂ ಚಿದಾನಂದ ಗೌಡ ಆಭಿಮಾನಿಗಳು ಹಮ್ಮಿ ಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊರೊನಾ ನಿರಾಶ್ರಿತರಿಗೆ ಉಚಿತ ಶಿರಾ ತಾಲೂಕಿನಲ್ಲಿ ಕಳೆದ ವರ್ಷ ಕೊರೊನಾ ಸಂಕಷ್ಟ ಬಂದಾಗ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳಲು ಸಾಧ್ಯವಾಗದಷ್ಟು ಹೊಡೆತ ಕೊಟ್ಟಿವೆ, ಇದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ, ಕೋವಿಡ್‌ ನಿಂದ ತಂದೆ, ತಾಯಿ ಕಳೆದುಕೊಂಡ ಮಕ್ಕಳಿಗೆ 1 ರಿಂದ 12ನೇ ತರಗತಿ ವರೆಗೆ ನನ್ನ ಸ್ವಂತ ವೆಚ್ಚ ಭರಿಸಿ ಗುಣಮಟ್ಟದ ಶಿಕ್ಷಣ ಆ ಮಕ್ಕಳಿಗೆ ಕೊಡುವ ಗುರಿ ಹೊಂದಲಾಗಿದ್ದು, ನಾವು ಅಂತಹ ಮಕ್ಕಳಿಗೆ ಕೊಟ್ಟ ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಹಳ್ಳಿಯಲ್ಲಿ ಹುಟ್ಟಿದ ನನಗೆ ಶಿಕ್ಷಣದ ದೊಡ್ಡ ಮಾರ್ಗ ತೋರಿಸಿ ಪ್ರೋತ್ಸಾಹ ನೀಡಿದವರು ಸರ್ಕಾರಿ ಶಾಲೆಯ ಗೋಪಿಕುಂಟೆ ಈರಣ್ಣ ಮೇಷ್ಟ್ರು ನನ್ನ ಪ್ರತಿಭೆ ಗುರ್ತಿಸಿ ತನ್ನ ಮನೆಯಲ್ಲಿಯೇ ಆಶ್ರಯ ನೀಡಿ ಭವಿಷ್ಯ ರೂಪಿಸಿ ದೈವಿ ಸ್ವರೂಪ ಪಡೆದುಕೊಂಡು ಗುರುವಿನ ಸ್ಥಾನದ ಮಹತ್ವ ತೋರಿಸಿ ಮಾದರಿಯಾದವರು, ಈರಣ್ಣ ಮೇಷ್ಟ್ರು ಮಕ್ಕಳ ಏಳಿಗೆ ಬಯಸುವ ತಾಯಿ, ಬಡತನದಲ್ಲೂ ಮಕ್ಕಳನ್ನು ಉನ್ನತ ಸ್ಥಾನದಲ್ಲಿ ನೋಡ ಬೇಕೆಂಬ ಆಸೆಯಿಂದ ಬೆನ್ನುತಟ್ಟಿ ನೀನು ರಾಜ್ಯ ಗುರ್ತಿಸುವಂತಹ ಜನ ಸೇವೆ ಮಾಡುವ ವ್ಯಕ್ತಿಯಾಗುತ್ತಿಯ ಎಂದು ಆರ್ಶೀವದಿಸಿದ ಪರಿಣಾಮ ಪ್ರಿಸಿಡೆನ್ಸಿಯಂತ ಶಿಕ್ಷಣ ಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದರ ಪರಿಶ್ರಮದ ಹಿಂದೆ ನನ್ನ ತಾಯಿ ರಂಗಮ್ಮನವರ ಆರ್ಶೀವಾದ ಇದೆ ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಭಾವುಕರಾಗಿ ನುಡಿದರು.
ಇದೇ ಸಂದರ್ಭದಲ್ಲಿ ಹೊಸಹಳ್ಳಿ ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿಧಾನ ಪರಿಷತ್‌ ಸದಸ್ಯ ಚಿದಾನಂದ ಗೌಡ 20 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದರು. ಸ್ವಗ್ರಾಮಕ್ಕೆ ಆಗಮಿಸಿದ ವಿಧಾನ ಪರಿಷತ್‌ ಸದಸ್ಯ ಚಿದಾನಂದಗೌಡರಿಗೆ ಗ್ರಾಮಸ್ಥರು ಡೋಲು ಭಾರಿಸಿ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೊರಿದರು.
ನಿವೃತ್ತ ಆರ್‌ಟಿಓ ತಿಮ್ಮರಾಯಪ್ಪ, ಮುಖಂಡರಾದ ಮಹಲಿಂಗಪ್ಪ, ಟಿ.ರಾಮಚಂದ್ರಪ್ಪ, ಗ್ರಾಪಂ ಅಧ್ಯಕ್ಷ ರಂಗನಾಥಪ್ಪ, ಸದಸ್ಯರಾದ ಮಲ್ಲಿಕಾರ್ಜುನ, ನಾಗೇಶ್‌, ನಾಗರಾಜು, ಹೊಸ್ಮನೆ ರಂಗನಾಥ್‌, ಲಕ್ಷ್ಮಣ್‌, ದಾಸಪ್ಪ, ಸುಬ್ರಮಣ್ಯ ಸ್ವಾಮಿ, ಸಿದ್ದಲಿಂಗಪ್ಪ, ಶೇಖರ್‌, ಜಯಣ್ಣ, ಪ್ರಕಾಶ್‌, ದೇವಿಗುಡಿ ಶಶಿಧರ, ರಂಗನಾಥ್‌, ಚಿದಾನಂದ್‌, ಜೋಗಣ್ಣ, ಈರಣ್ಣ, ಮಹಲಿಂಗಪ್ಪ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!