ಕುಣಿಗಲ್: ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಅವರು ಶೋಷಿತರ, ದಮನಿತರ ಧ್ವನಿಯಾಗಿ ಅವರ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಶ್ರಮಿಸಿದ್ದು ಇಂದಿಗೂ ಮಾರ್ಗದರ್ಶನವಾಗಿದ್ದಾರೆ ಎಂದು ತಹಶೀಲ್ದಾರ್ ಮಹಾಬಲೇಶ್ವರ್ ತಿಳಿಸಿದರು.
ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಮಾಜಿ ಸಿಎಂ ದಿ.ಡಿ.ದೇವರಾಜು ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅರಸು ಅವರು ಉಳುವವನೆ ಭೂಮಿ ಒಡೆಯ ಎಂಬ ಧ್ಯೇಯದೊಂದಿಗೆ ಜಾರಿಗೆ ತಂದ ಭೂ ಸುಧಾರಣೆ ಕಾಯಿದೆ ಇಡೀ ದೇಶದಲ್ಲೆ ಸಂಚಲನ ಮೂಡಿಸಲು ಕಾರಣವಾಯಿತು. ಅರಸು ಅವರ ಈ ಶ್ರಮದ ಹಿಂದೆ ತಾಲೂಕಿನ ಹೆಮ್ಮೆಯ ರಾಜಕಾರಣಿ ಕಂದಾಯ ಸಚಿವರಾಗಿದ್ದ ಹುಚ್ಚಮಾಸ್ತಿಗೌಡರು ಇದ್ದರು, ಹಿಂದುಳಿದ, ಶೋಷಿತ, ದಮನಿತರ ಪರವಾಗಿ ಅರಸು ಅವರು ಜಾರಿಗೆ ತಂದ ಹಲವಾರು ಕ್ರಾಂತಿಕಾರಕ ಕ್ರಮಗಳು ಎಲ್ಲರಿಗೂ ಸಮಾನವಾದ ಹಕ್ಕು ಕಲ್ಪಿಸಿದವು, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಅರಸು ಅವರು ಹಲವು ಕಾಯಿದೆಗಳ ಜಾರಿಗೊಳಿಸಿದ್ದರು ಎಂದರು.
ಬಿಸಿಎಂ ಅಧಿಕಾರಿ ಪಾರ್ವತಮ್ಮ ಹಡಗಿನಹಾಳ್, ಹಿಂದುಳಿದ ವರ್ಗಗಳ ಸಮುದಾಯದವರಿಗೆ ಅರಸು ಅವರು ನೀಡಿದ ಕೊಡುಗೆ ಸ್ಮರಿಸಿ ಗೌರವಿಸಲು ನಿಗಮ ಸ್ಥಾಪಿಸುವ ಜೊತೆಯಲ್ಲಿ ವರ್ಗದ ಜನರಿಗೆ ಹಲವು ಸವಲತ್ತು ನೀಡುತ್ತಿದೆ ಎಂದರು.
ಪರಿಸರ ಇಂಜಿನಿಯರ್ ಚಂದ್ರಶೇಖರ್, ಇಸಿಒ ಧನಂಜಯ, ದಲಿತ ಮುಖಂಡ ವರದರಾಜು, ಪ್ರಮುಖರಾದ ಶ್ರೀನಿವಾಸ್, ಉಮೇಶ್, ರಾಮಚಂದ್ರು ಇತರರು ಇದ್ದರು.
ಅರಸು ರಾಜ್ಯ ಕಂಡ ಶ್ರೇಷ್ಠ ನಾಯಕ: ಮಹಾಬಲೇಶ್ವರ್
Get real time updates directly on you device, subscribe now.
Prev Post
Next Post
Comments are closed.