ಕೊರಟಗೆರೆ: ಅಕ್ರಮವಾಗಿ ಮನೆಯಲ್ಲಿ ಶೇಖರಣೆ ಮಾಡಲಾಗಿದ್ದ ಮದ್ಯವನ್ನು ಕೊರಟಗೆರೆ ಅಬಕಾರಿ ನಿರೀಕ್ಷಕಿ ಶ್ರೀಲತಾ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಸಿಂಗ್ರೀಹಳ್ಳಿ ಗ್ರಾಮದ ಮುನಿಕೃಷ್ಣ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಶೇಖರಣೆ ಮಾಡಿದ್ದ ಸುಮಾರು 7800 ರೂ. ಮೌಲ್ಯದ 18 ಲೀಟರ್ ಮದ್ಯ ಹಾಗೂ ಆರೋಪಿ ಮುನಿಕೃಷ್ಣ ಎಂಬಾತನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಕೊರಟಗೆರೆ ಅಬಕಾರಿ ಇಲಾಖೆಯಲ್ಲಿ ಮುನಿಕೃಷ್ಣನ ಮೇಲೆ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕಿ ಶ್ರೀಲತಾ, ಉಪನಿರೀಕ್ಷಕಿ ವೈಷ್ಣವಿ ಕುಲಕರ್ಣಿ, ಸಿಬ್ಬಂದಿ ರಂಗಧಾಮಯ್ಯ, ಮಧು ಸೇರಿದಂತೆ ಇತರರು ಕಾರ್ಯಾಚರಣೆ ನಡೆಸಿದ್ದಾರೆ.
ಅಕ್ರಮವಾಗಿ ಮದ್ಯ ಶೇಖರಣೆ- ಆರೋಪಿ ಅರೆಸ್ಟ್
Get real time updates directly on you device, subscribe now.
Comments are closed.