ಕರೆಂಟ್ ಶಾಕ್ ಗೆ ವೃದ್ಧೆ, ನಾಲ್ಕು ಎಮ್ಮೆ ಸಾವು

676

Get real time updates directly on you device, subscribe now.

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕಸಾಗ್ಗೆರೆ ಗ್ರಾಮದಲ್ಲಿ ಎಮ್ಮೆ ಮೇಸಲು ಹೋಗಿದ್ದ ವೃದ್ಧೆ ಸೇರಿ 4 ಎಮ್ಮೆ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವಿಗೀಡಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಚಿಕ್ಕಸಾಗ್ಗೆರೆ ಗ್ರಾಮದ ಖಾಸಗಿ ಜಮೀನಿನಲ್ಲಿ ಎಮ್ಮೆ ಮೇಯಿಸಿಲು ಹೋಗಿದ್ದ ಗೌರಮ್ಮ (70) ಸೇರಿ 4 ಎಮ್ಮೆ ಅಸುನೀಗಿದ್ದು, ಚಿಕ್ಕಸಾಗ್ಗೆರೆ ಗ್ರಾಮದಲ್ಲಿ ಖಾಸಗಿ ಜಮೀನಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರಂನಿಂದ ಕಂಬಕ್ಕೆ ಹಾದು ಹೋಗಿದ್ದ ತಂತಿ ನೆಲಕ್ಕೆ ತಾಕಿದಂತೆ ಜೋತು ಬಿದ್ದಿದ್ದರಿಂದ ಜಮೀನಿನಲ್ಲಿ ಹಾದು ಹೋಗುತ್ತಿದ್ದ ಎಮ್ಮೆ ಮತ್ತು ವೃದ್ಧೆ ವಿದ್ಯುತ್ ತಂತಿಯನ್ನು ಕಾಣದೆ ಮೊದಲು ಎಮ್ಮೆಯ ಕೊಂಬಿಗೆ ತಗುಲಿ ಹಾಕಿಕೊಂಡು ನಂತರ ವೃದ್ಧೆ ಮತ್ತು ಇತರೆ ಎಮ್ಮೆಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಶಾಸಕ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಇಂತಹ ಈ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಅಧಿಕಾರಿಗಳು ಎಚ್ಚರವಹಿಸುವಂತೆ ಆದೇಶಿಸಿ ಪ್ರಕರಣ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು ನೊಂದವರಿಗೆ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಘಟನಾ ಸ್ಥಳದಲ್ಲಿ ಮಾಜಿ ಶಾಸಕ ಸುಧಾಕರ್ಲಾಲ್, ತಹಶೀಲ್ದಾರ್ ನಾಹಿದಾಜಮ್ಜಮ್, ಸಿಪಿಐ ಸಿದ್ಧರಾಮೇಶ್ವರ, ಕೋಳಾಲ ಪಿಎಸ್ಐ ಮಹಾಲಕ್ಷ್ಮಮ್ಮ ಬೆಸ್ಕಾಂ ಎಇಇ ಮಲಣ್ಣ, ಎಇ ಪ್ರಸನ್ನಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!