ಒಗ್ಗಟ್ಟಾದರೆ ಸಮಾಜ ಬಲಿಷ್ಠವಾಗುತ್ತೆ: ಜ್ಯೋತಿಗಣೇಶ್

493

Get real time updates directly on you device, subscribe now.

ತುಮಕೂರು: ಎಲ್ಲರೂ ಒಗ್ಗೂಡಿ ನಡೆದರೆ ಸಮಾಜ ಬಲಿಷ್ಟವಾಗಲಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸಮಾಜ ಸುಧಾರಣೆಗಾಗಿ ಹೋರಾಟ ಮಾಡಿದ್ದ ನಾರಾಯಣ ಗುರುಗಳ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ತಿಳಿಸಿದರು.
ಹತ್ತೊಂಬತ್ತನೇ ಶತಮಾನದಲ್ಲೇ ನಾರಾಯಣ ಗುರುಗಳು ಸಮುದಾಯಗಳ ಒಗ್ಗಟ್ಟಿಗೆ ಶ್ರಮಿಸಿ, ಸಮಾಜ ಸುಧಾರಣೆಗಾಗಿ ಸಮಾನ ಅವಕಾಶ ಸಿಗಬೇಕೆಂದು ಸಾರಿದ್ದರು. ಇಂತಹ ಮಹಾನ್‌ ವ್ಯಕ್ತಿ ಕುರಿತು ಹಲವು ಪುಸ್ತಕಗಳು ಪ್ರಕಟವಾಗಿರುವುದು ಸಂತಸದ ವಿಷಯವಾಗಿದ್ದು, ಈ ಪುಸ್ತಕಗಳ ಅಧ್ಯಯನದಿಂದ ನಾರಾಯಣ ಗುರುಗಳು ಅನುಸರಿಸಿದ ಸಮಾನತೆ ಮಂತ್ರ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಬೆಳೆಯುವಂತಾಗಬೇಕು ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವ ರಮೇಶ್‌ ಸಾಲಿಯಾನ್‌ ಮಾತನಾಡಿ, ಪ್ರೀತಿಯಿಂದ ನಾನು ಎಂಬ ಹೆಸರಿನಿಂದ ಕರೆಯಲ್ಪಡುವ ನಾರಾಯಣ ಗುರುಗಳು ಜಾತೀಯತೆಯ ವಿರುದ್ಧ ಹೋರಾಟ ಮಾಡಿ, ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಯುವ ಮೂಲಕ ಸಮಾಜದ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ನಾರಾಯಣ ಗುರು ಸಮಾಜದ ಅಧ್ಯಕ್ಷ ಮಾಧವನ್‌, ಉಪಾಧ್ಯಕ್ಷ ರಾಜನ್‌, ಮಣಿ, ಕಾರ್ಯದರ್ಶಿ ಬಿ.ಪಿ.ರಾಜೇಶ್‌, ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ವೆಂಕಟಸ್ವಾಮಿ, ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್‌ ಕೆ. ಮೇಲ್ವಿಚಾರಕ ಸುರೇಶ್‌ ಕುಮಾರ್‌ ಹಾಗೂ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!