ಶಾಲೆಗಳು ಆರಂಭ- ಹಸಿರು ತೋರಣಗಳಿಂದ ಸಿಂಗಾರ

ಎಲ್ಲೆಡೆ ಸಿಹಿ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ

223

Get real time updates directly on you device, subscribe now.

ಮಧುಗಿರಿ: ಕೋವಿಡ್‌ ಮಹಾಮಾರಿಯ ಸಂಕಷ್ಟಕ್ಕೆ ಹೆದರಿ ಶಾಲೆಗಳು ಮುಚ್ಚಿ ಆನ್ ಲೈನ್‌ ತರಗತಿಗಳಲ್ಲೇ ಪಾಠ ಪ್ರವಚನ ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ಸೋಮವಾರ ಶಾಲೆಗಳು ಆರಂಭವಾಗಿದ್ದು ಶಾಲೆಗಳಲ್ಲಿ ಹಬ್ಬದ ವಾತಾವರಣ ಮೂಡಿತ್ತು.
ತಾಲೂಕಿನ ದಬ್ಬೇಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಹಸಿರು ತೋರಣಗಳಿಂದ ಸಿಂಗರಿಸಿ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಿಹಿ ಹಂಚುವ ಮೂಲಕ ಸ್ವಾಗತ ಕೋರಿ ಶಾಲೆಗೆ ಬರಮಾಡಿಕೊಂಡರು.
ಈ ವೇಳೆ ಮುಖ್ಯ ಶಿಕ್ಷಕಿ ಪುಷ್ಪಲತಾ ಮಾತನಾಡಿ, ಸರ್ಕಾರದ ಆದೇಶದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದ್ದು, ಶಾಲೆಗೆ ಸ್ಯಾನಿಟೈಸ್‌ ಮಾಡಲಾಗಿದೆ. ಪ್ರತಿ ಇಪ್ಪತ್ತು ವಿದ್ಯಾರ್ಥಿಗಳಿಗೆ ಒಂದು ಕೊಠಡಿ ಮೀಸಲಿದ್ದು ಎಲ್ಲರಿಗೂ ಸಾಮಾಜಿಕ ಅಂತರ ಪಾಲಿಸುವಂತೆ ನಿಗಾವಹಿಸಿದ್ದೇವೆ. ಕಡ್ಡಾಯವಾಗಿ ಪ್ರತಿ ವಿದ್ಯಾರ್ಥಿಗಳು ಮಾಸ್ಕ್, ಸ್ಯಾನಿಟೈಸರ್‌, ಶುಚಿತ್ವ ಪಾಲಿಸಿ ಕೊರೊನಾ ಮಾರ್ಗಸೂಚಿ ಅನುಸರಿಸಲು ಅರಿವು ಮೂಡಿಸಲಾಗಿದೆ. ಉತ್ಸಾಹದಿಂದಲೇ 186 ವಿದ್ಯಾರ್ಥಿಗಳಲ್ಲಿ 146 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದು ಖುಷಿ ತಂದಿದೆ ಎಂದರು.
ಗ್ರಾಪಂ ಸದಸ್ಯ ಶ್ರೀಧರ್‌, ಶಿಕ್ಷಕರಾದ ಕೃಷ್ಣಪ್ಪ, ಮೋಹನ್‌, ನಿರ್ಮಲ, ರಮ್ಯಾ, ವಿನೋದ, ಲತಾ, ಹುಸೇನ್‌, ಹೊನ್ನಮ್ಮ ಸೇರಿದಂತೆ ಶಾಲಾ ಸಿಬ್ಬಂದಿ ಮತ್ತು ಪೋಷಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!