ಮಾರ್ಗಸೂಚಿಯಂತೆಯೇ ಶಾಲೆಗಳ ಪ್ರಾರಂಭ

ಶಾಲಾ ಕಾಲೇಜು ಆರಂಭದಿಂದ ವಿದ್ಯಾರ್ಥಿಗಳಿಗೆ ಸಂತಸವಾಗಿದೆ: ಜ್ಯೋತಿಗಣೇಶ್

269

Get real time updates directly on you device, subscribe now.

ತುಮಕೂರು: ಕೊರೋನಾ ಲಾಕ್ ಡೌನ್ ನಿಂದ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದು ವಿದ್ಯಾರ್ಥಿಗಳು, ಭೌತಿಕ ತರಗತಿಗಳಿಗೆ ಹಾಜರಾಗದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಪುನಾರಂಭವಾಗಿದ್ದು, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ನಗರ ಶಾಸಕ ಜ್ಯೋತಿಗಣೇಶ್‌ ತಿಳಿಸಿದರು.
ನಗರದ ಎಂಪ್ರೆಸ್‌ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಶಾಲಾ-ಕಾಲೇಜು ಪುನರಾಂಭವಾಗಿದ್ದು, ಸರ್ಕಾರ ತಜ್ಞರ ಸಲಹೆ ಪಡೆದು ಕೊರೋನಾ ನಡುವೆಯೇ ಶಾಲಾ ಕಾಲೇಜು ಪ್ರಾರಂಭಕ್ಕೆ ಚಿಂತನೆ ನಡೆಸಿತ್ತು, ಆತಂಕದ ನಡುವೆಯೇ ಬದುಕಬೇಕಿರುವ ಅನಿವಾರ್ಯತೆ ಇದ್ದು, ಸರ್ಕಾರ ವಿದ್ಯಾರ್ಥಿ ಸ್ನೇಹಿಯಾಗಿಯೇ ಮಾರ್ಗಸೂಚಿ ರೂಪಿಸಿದೆ ಎಂದು ಅಭಿಪ್ರಾಯಪಟ್ಟರು.
ಶಾಲಾ ಕಾಲೇಜು ಭೌತಿಕವಾಗಿ ಪ್ರಾರಂಭವಾದರು ಕೊರೊನಾ ಭಯದಿಂದಾಗಿ ಹಾಜರಾಗದ ವಿದ್ಯಾರ್ಥಿಗಳು ಆನ್ ಲೈನ್‌ ಮೂಲಕವೇ ಹಾಜರಾಗಲು ಅವಕಾಶ ಕಲ್ಪಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಬಡತನದ ಹಿನ್ನೆಲೆಯಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್‌ ಮತ್ತು ಸ್ಮಾರ್ಟ್ ಫೋನ್‌ ಸಮಸ್ಯೆ ಇರುವುದು ಅರಿವಿಗೆ ಬಂದಿದ್ದು, ಅವರಿಗೆ ನೆರವು ಬರುವುದಾಗಿ ತಿಳಿಸಿದರು.
ಶಾಲಾ ಕಾಲೇಜು ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಇನ್ನೊಂದು ವಾರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ ಅವರು ಸುದೀರ್ಘವಾದ ಲಾಕ್ ಡೌನ್ ನಿಂದ ಎದುರಾಗಿರುವ ಸಮಸ್ಯೆ ಎದುರಿಸಲು ವಿದ್ಯಾರ್ಥಿಗಳು ಚಿಂತನೆ ಮಾಡಬೇಕು, ಬದಲಾದ ಸನ್ನಿವೇಶದಲ್ಲಿ ಹೊಂದಾಣಿಕೆ ಮಾಡಿಕೊಂಡು ವ್ಯಾಸಂಗ ಮಾಡುವಂತೆ ಸಲಹೆ ನೀಡಿದರು.
ಆನ್ ಲೈನ್‌ ಶಿಕ್ಷಣಕ್ಕೂ ಅವಕಾಶವಿದೆ ಆದರೆ ಭೌತಿಕ ತರಗತಿಗಳಿಗೆ ಭಯಮುಕ್ತರಾಗಿ ಹಾಜರಾಗಬೇಕು, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾಗುತ್ತಿರುವ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು, ಇಂತಹ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುವ ಸಮಸ್ಯೆ ಮತ್ತು ಖಿನ್ನತೆಗೆ ಒಳಗಾಗದೇ ಉತ್ತಮವಾಗಿ ವ್ಯಾಸಂಗ ಮಾಡುವ ಮೂಲಕ ಸಾಧನೆ ಮಾಡಬೇಕು ಎಂದು ಹೇಳಿದರು.
ಶಾಲಾ-ಕಾಲೇಜು ಪುನಾರಂಭವಾಗಿದ್ದು ಪೂರ್ಣಾವಧಿಯಲ್ಲಿ ಭೋದನೆ ಮಾಡಬೇಕು, ತರಗತಿ ಅವಧಿಯಲ್ಲಿ ಹಿಂದಿನ ವಿದ್ಯಾರ್ಥಿಗಳಿಗೆ ಕೇಳಿಸುವಂತೆ ಮಾಡಬೇಕು ಹಾಗೂ ಸ್ಮಾರ್ಟ್ ಫೋನ್‌ ಮತ್ತು ಟ್ಯಾಬ್‌ ಕೊರತೆಯಿರುವ ಸ್ನೇಹಿತರಿಗೆ ಸಹಾಯ ಮಾಡುವಂತೆ ಶಾಸಕ ಜ್ಯೋತಿಗಣೇಶ್‌ ಅವರಿಗೆ ಮನವಿ ಸಲ್ಲಿಸಿದರು. ದಾನಿಗಳು ಅಥವಾ ವೈಯಕ್ತಿಕವಾಗಿ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳ ಪಟ್ಟಿ ಮಾಡುವಂತೆ ಸೂಚಿಸಿದರು. ಈ ವೇಳೆ ಬಿಇಒ ಹನುಮನಾಯ್ಕ್ ಶಾಲಾ ಸಿಬ್ಬಂದಿ ಇದ್ದರು.

Get real time updates directly on you device, subscribe now.

Comments are closed.

error: Content is protected !!