ಮಗು ಎತ್ತಿಕೊಂಡು ಹೋಗುತ್ತಿದ್ದವನಿಗೆ ಧರ್ಮದೇಟು

470

Get real time updates directly on you device, subscribe now.


ಕುಣಿಗಲ್‌: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನನ್ನು ಎತ್ತಿಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಸಾರ್ವಜನಿಕರು ಥಳಿಸಿ, ಚಿಕಿತ್ಸೆ ಕೊಡಿಸಿ ಕಳಿಸಿರುವ ಘಟನೆ ನಡೆದಿದೆ.
ಪಟ್ಟಣದ ಎರಡನೇ ವಾರ್ಡ್ ನ ಮಲ್ಲಾಘಟ್ಟ ಪ್ರದೇಶದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನನ್ನು ಅಪರಿಚತ ವ್ಯಕ್ತಿ ಎತ್ತಿಕೊಂಡು ಪಟ್ಟಣದ ಮುಖ್ಯರಸ್ತೆಯ ನೀಲತ್ತಹಳ್ಳಿ ಕ್ರಾಸ್‌ ಬಳಿ ಹೋಗುವಾಗ ಬಾಲಕ ಅಳುತ್ತಿದ್ದನ್ನು ಕಂಡ ಸಾರ್ವಜನಿಕರು ಅಪರಿಚಿತನನ್ನು ತಡೆದು ಮಗುವಿನ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದರು. ಮನೆಯ ಹತ್ತಿರ ಮಗು ಇಲ್ಲದನ್ನು ಕಂಡ ಮಗುವಿನ ತಾಯಿ ಅಕ್ಕಪಕ್ಕದವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಮಗುವನ್ನು ಹುಡುಕಲು ಮುಖ್ಯರಸ್ತೆಗೆ ಬಂದಾಗ ಅಪರಿಚಿತ ಯುವಕ ಮಗುವಿನೊಂದಿಗೆ ಇದ್ದುದನ್ನು ಕಂಡು, ಮಗುವನ್ನು ವಶಕ್ಕೆ ಪಡೆದು, ಯುವಕನಿಗೆ ಧರ್ಮದೇಟು ನೀಡಿ ಆತನನ್ನು ಠಾಣೆ ಬಳಿಗೆ ಕರೆತಂದರು. ಪೊಲೀಸರು ಮೊದಲು ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಆತನಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆತನಬಳಿ ಇದ್ದ ಮೊಬೈಲ್‌ ಕಸಿದು ಮನೆಯವರಿಗೆ ಕರೆ ಮಾಡಿದರು. ಈ ವೇಳೆ ಈತ ಮಾನಸಿಕ ಅಸ್ವಸ್ಥನೆಂದು ತಿಳಿದು ಬಂದ ಮೇರೆಗೆಯಾವುದೇ ದೂರು ನೀಡದೆ ಮನೆಗೆ ಕಳಿಸಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!