ಮಧುಗಿರಿ: ಬರಗಾಲದ ಬದುಕನ್ನೆ ಕಂಡಂತಹ ಉಪವಿಭಾಗದ ರೈತರಿಗೆ ಭರ್ಜರಿ ತಳಿ ಪರಿಚಯಿಸಿದ ಯುವ ಪ್ರಗತಿಪರ ರೈತ ರಂಗನಾಥ್ ಯಾದವ್ ಸಹೋದರರು ತಾವು ಬೆಳೆದ ಹೆಚ್ಚಿನ ಬಿತ್ತನೆ ಬೀಜವನ್ನು ಮಾರಾಟ ಮಾಡುತ್ತಿದ್ದು, ರೈತರಿಗೆ ನೇರವಾಗಿ ಮಾರಾಟ ಮಾಡಲು ಉತ್ಸುಕರಾಗಿದ್ದಾರೆ.
ತಾಲೂಕಿನ ಮಿಡಿಗೇಶಿ ಹೋಬಳಿಯ ಚೀಲನಹಳ್ಳಿಯ ರೈತರಾದ ರಂಗನಾಥ್ ಯಾದವ್ ಕುಟುಂಬ ಕಳೆದ ಬಾರಿ ಆಂಧ್ರದ ಲೇಪಾಕ್ಷಿಯಿಂದ ತಂದು ಕದ್ರಿ ಲೇಪಾಕ್ಷಿ 18/12 ತಳಿಯ ಶೇಂಗಾ ಬೆಳೆ ಪರಿಚಯಿಸಿದ್ದರು. ಈ ತಳಿಯು ಅಪರೂಪದ್ದಾಗಿದ್ದು, ಹೆಚ್ಚಿನ ಇಳುವರಿ ನೀಡಿದ್ದು, ಗಿಡವೊಂದಕ್ಕೆ 150 ರಿಂದ 180 ಶೇಂಗಾ ಉತ್ಪತ್ತಿಯಾಗಿತ್ತು. ಈ ಬೆಳೆ ವೀಕ್ಷಿಸಲು ಜಿಲ್ಲಾ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿದ್ದು, ರೈತರಿಗೆ ಶಬ್ಬಾಸ್ ಗಿರಿ ನೀಡಿದ್ದರು. ಉಪ ವಿಭಾಗದ ರೈತರಿಗಾಗಿಯೇ ಇಲಾಖೆಯಿಂದ ಸುಮಾರು 30 ಕ್ವಿಂಟಾಲ್ ಶೇಂಗಾ ಖರೀದಿಸಿದ್ದರು. ಈಗಲೂ ಈ ಕದ್ರಿ 18/12 ತಳಿಯ ಶೇಂಗವನ್ನು ರೈತ ರಂಗನಾಥ್ ಯಾದವ್ ಮಾರಾಟ ಮಾಡಲು ಮುಂದಾಗಿದ್ದು, ಆಸಕ್ತರು 9900995386 ನಂಬರಿಗೆ ಸಂಪರ್ಕಿಸಲು ಕೋರಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ರೈತ ರಂಗನಾಥ್ ಯಾದವ್ ನಾನು ವಿವಿಧ ತರಕಾರಿ ಬೆಳೆ ಬೆಳೆಯುತ್ತಿದ್ದು, ಕಳೆದ ಬಾರಿ ಕದ್ರಿ 18/12 ತಳಿಯ ಶೇಂಗಾ ತಂದು ಬೆಳೆಯಲಾಯಿತು. ಅಚ್ಚರಿಯೆಂಬಂತೆ ಹೆಚ್ಚಿನ ಇಳುವರಿ ಬಂದಿದ್ದು, ಕೃಷಿ ಅಧಿಕಾರಿಗಳೇ ಬಂದು ಪ್ರಶಂಸೆ ವ್ಯಕ್ತಪಡಿಸಿ ಇಲಾಖೆಗೂ ಶೇಂಗಾ ಖರೀದಿಸಿದರು. ಈ ಶೇಂಗಾದಲ್ಲಿ ಹೆಚ್ಚಿನ ಎಣ್ಣೆ ಅಂಶವಿದ್ದು ಬೆಲೆ ದುಪ್ಪಟ್ಟಾಗಿದೆ. ಈಗ ಸ್ಥಳೀಯ ರೈತರಿಗೂ ಶೇಂಗಾ ಬಿತ್ತನೆಗಾಗಿ ನೀಡಿದ್ದೇನೆ. ಈ ತಳಿ ಉಳಿಸುವ ಉದ್ದೇಶದಿಂದ ಈಗಲೂ ಬಿತ್ತನೆ ಬೀಜ ಬೆಳೆದಿದ್ದು, ಯಾರಿಗಾದರೂ ಸರಿ ರೈತರಿಗೆ ನೇರವಾಗಿ ಮಾರಾಟ ಮಾಡಲು ಮುಂದಾಗಿದ್ದೇನೆ, ನಮ್ಮ ರೈತರು ಇಂತಹ ಬೆಳೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಕದ್ರಿ ಲೇಪಾಕ್ಷಿ ಬಿತ್ತನೆ ಶೇಂಗಾ ರೈತರಿಂದ ನೇರ ಮಾರಾಟ
Get real time updates directly on you device, subscribe now.
Next Post
Comments are closed.