ಹುಟ್ಟೂರು ಅಭಿವೃದ್ಧಿಗಾಗಿ ಗ್ರಾಪಂ ದತ್ತು ಪಡೆದ ಚಿದಾನಂದ ಗೌಡ

ಹುಟ್ಟಿದ ಊರಿನ ಋಣ ತೀರಿಸಲು ಎಂಎಲ್ಸಿ ಪಣ

258

Get real time updates directly on you device, subscribe now.

ಬರಗೂರು: ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ ಶಿಕ್ಷಣ ತಜ್ಞ, ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಅವರು ತಮ್ಮ ಸ್ವಗ್ರಾಮದ ಗ್ರಾಮ ಪಂಚಾಯಿತಿಯನ್ನು ದತ್ತು ಪಡೆದುಕೊಂಡಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕಂಡ ಸ್ವಚ್ಛ ಭಾರತ ಸ್ವಸ್ಥ ಭಾರತ ಕನಸನ್ನು ನನಸಾಗಿಸುವುದು ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ, ಪ್ರಸ್ತುತ ಗ್ರಾಮಗಳು ಸೊರಗುತ್ತಿವೆ, ನೂರಾರು ಯೋಜನೆ ಜಾರಿಗೆ ಬಂದರೂ ಶ್ರೀಸಾಮಾನ್ಯರಿಗೆ ಪರಿಪೂರ್ಣವಾಗಿ ಪ್ರಾಮಾಣಿಕವಾಗಿ ಅವು ತಲುಪುವುದು ದೂರವೆ ಇದೆ, ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮಗಳ ಮುಗ್ಧ ಜನರ ಬದುಕು ಬರಡಾಗಿದೆ, ಒಂದು ಕಡೆ ಸಾಲದ ಸುಳಿಯಲ್ಲಿ, ಒಂದು ಕಡೆ ಬಡತನ, ಹಸಿವು, ಆಕಾಶದತ್ತ ಮುಖ ಮಾಡಿ ಕಣ್ಣೀರಿಟ್ಟರೂ ಬಾರದ ಮಳೆ, ಇದನ್ನು ಅರಿತ ಶಾಸಕ ಚಿದಾನಂದ್ ಎಂ ಗೌಡರು ಹಳ್ಳಿಗಳು ಉದ್ಧಾರವಾಗದ ಹೊರತು ದೇಶ ಉದ್ಧಾರವಾಗದು ಎಂಬ ಗಾಂಧೀಜಿಯವರ ತತ್ವದಂತೆ ಪ್ರತಿ ಹಳ್ಳಿಗಳು ಸ್ವಾವಲಂಭಿಗಳಾಗಬೇಕು ಎಂದು ನಿರ್ಧರಿಸಿ ಗ್ರಾಪಂ ದತ್ತು ಪಡೆದಿದ್ದಾರೆ.
ಭಾರತದ ಭವಿಷ್ಯವು ಹಳ್ಳಿಗಳಲ್ಲಿ ಅಡಗಿದೆ ಎಂದ ಮಾನ್ಯರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಧ್ಯಕ್ಷರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಾ ನಮ್ಮ ಮೋದಿಜಿ ಯವರು ಕನಸು ಕಂಡಂತೆ ಒಬ್ಬೊಬ್ಬ ಗ್ರಾಮ ಪಂಚಾಯತಿ ಸದಸ್ಯರ ಮೇಲೆ ನಂಬಿಕೆ ಇಟ್ಟು ನಿಮ್ಮನ್ನು ಚುನಾಯಿಸಿದ್ದಾರೆ, ಗ್ರಾಮಗಳ ನೈರ್ಮಲ್ಯ, ಆರೋಗ್ಯ, ಶಾಲೆಗಳ ನಿರ್ವಹಣೆ, ಶೌಚಾಲಯ, ಊರಿನ ಸ್ವಚ್ಛತೆ, ರಸ್ತೆಗಳ ಬಗ್ಗೆ ಸದಸ್ಯರಿಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಇವೆಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರ ಇರುತ್ತೆ, ಗ್ರಾಮಗಳಲ್ಲಿ ತಾರತಮ್ಯ ಮಾಡದೆ ಗ್ರಾಮಸ್ಥರ ಕೆಲಸ ಮಾಡುವುದು ಜನರನ್ನು ಅಲೆದಾಡಿಸದೆ ಅವರ ಮನೆ ಬಾಗಿಲಿಗೆ ಹೋಗಿ ಅವರ ಕಷ್ಟಕ್ಕೆ ಸ್ಪಂದಿಸಿ ಅವರ ಕುಂದುಕೊರತೆಗಳನ್ನು ಆಲಿಸಿ ಸರ್ಕಾರದಿಂದ ಬರುವ ಸೌಲಭ್ಯಗಳ ಬಗ್ಗೆ, ಕೃಷಿ ಇಲಾಖೆಗಳಿಂದ ಬರುವ ಪ್ರಯೋಜನಗಳಾದ ಬಿತ್ತನೆ ಬೀಜ, ಔಷಧಗಳು, ಕೃಷಿ ಉತ್ಪನ್ನಗಳನ್ನು ಜನರಿಗೆ ತಿಳುವಳಿಕೆ ಹೇಳುವುದು ನಿಮ್ಮಗಳ ಕರ್ತವ್ಯವಾಗಿದೆ ಎಂದು ಚಿದಾನಂದಗೌಡ ತಿಳಿಸಿದರು.
ಚುನಾಯಿತ ಪ್ರತಿನಿಧಿಗಳ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳುವುದು, ಸರ್ಕಾರದಿಂದ ಬರುವ ನರೇಗಾ ಯೋಜನೆ, ಉಜ್ವಲ್ ಯೋಜನೆ, ರೈತರ ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯಗಳನ್ನು ಜನರಿಗೆ ತಿಳಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ, ನಿಮಗೆ ಅಧಿಕಾರ ಬರುತ್ತೆ ಹೋಗುತ್ತೆ, ನಿಮ್ಮನ್ನು ನಂಬಿರುವ ಜನರಿಗೆ ವಂಚನೆ ಮಾಡದೆ ಸೇವೆ ಸಲ್ಲಿಸಿ ಎಂದರು.
ತನ್ನ ಹುಟ್ಟೂರು ನೆನಪಿನೊಂದಿಗೆ ಹೊಸಹಳ್ಳಿ ಜನರ ಶ್ರೇಯೋಭಿವೃದ್ಧಿ ಹಿತದೃಷ್ಟಿಯಿಂದ ಹೊಸಹಳ್ಳಿ ಗ್ರಾಮ ಪಂಚಾಯಿತಿಯನ್ನು ದತ್ತು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷರಾದ ರಮ್ಯ ಹನುಮಂತರಾಯ, ಮಲ್ಲಿಕಾರ್ಜುನ್, ಗೋವಿಂದರಾಜು, ರಾಮಚಂದ್ರಪ್ಪ, ಮುಖಂಡರಾದ ಕ್ಯಾದಿಗುಂಟೆ ನರಸಿಂಹಯ್ಯ, ಸಿದ್ಧಲಿಂಗಪ್ಪ , ನಾಗರಾಜಪ್ಪ, ಪುಟ್ಟಯ್ಯ, ನಾಗರಾಜು, ಜಯಣ್ಣ, ರಂಗನಾಥ್, ಪ್ರೆಸಿಡೆನ್ಸಿ ಲಿಂಗಣ್ಣ , ತಿಪ್ಪೇಸ್ವಾಮಿ, ರಂಗನಾಥ್, ಪಿಡಿಓ ಸತೀಶ್, ಕಾರ್ಯದರ್ಶಿ ಹಾಲಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!