ಬೆಸ್ಕಾಂ ಅಧಿಕಾರಿಗಳ ಚೆಲ್ಲಾಟ- ರೈತರ ಪರದಾಟ

153

Get real time updates directly on you device, subscribe now.

ಕುಣಿಗಲ್‌: ಬೆಸ್ಕಾಂ ಅಧಿಕಾರಿಗಳ ಚೆಲ್ಲಾಟದಿಂದ, ಗ್ರಾಹಕರು, ರೈತರ ಪರದಾಡುವಂತಾಗಿದ್ದು ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಹಕರು, ರೈತರು ಇಲಾಖೆಯ ಮೇಲಾಧಿಕಾರಿಗಳು ಬೆಸ್ಕಾಂ ಗ್ರಾಹಕ, ರೈತ ಸ್ನೇಹಿಯಾಗಿ ಕೆಲಸಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ ಈ ಮೊದಲು ವಿದ್ಯುತ್‌ ಪೂರೈಕೆ, ಸರಬರಾಜು ನಿಟ್ಟಿನಲ್ಲಿ ತೊಂದರೆ ಆದರೆ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ದೂರು ಸ್ವೀಕರಿಸಿ ಕಾರ್ಯ ನಿರ್ವಹಿಸಲು ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು ಇದೀಗ ಗುತ್ತಿಗೆ ಅವಧಿ ಮುಗಿದಿದೆ ಎಂದು ದೂರು ನಿರ್ವಹಣೆಗೆ ಬೆಸ್ಕಾಂ ಆಯಕಟ್ಟಿನ ಅಧಿಕಾರಿಗಳೆ ಮಾಡಬೇಕಿದೆ. ಆದರೆ ಬೆಸ್ಕಾಂ ಅಧಿಕಾರಿಗಳು ಸೇರಿದಂತೆ ಪವರ್ ಮನ್ ಗಳ ಪೈಕಿ ಬಹುತೇಕರ ಫೋನ್‌ ಸಂಜೆಯಾಗುತ್ತಿದ್ದಂತೆ ನಿಷ್ಕ್ರೀಯವಾಗಿರುತ್ತೆ. ರಾತ್ರಿ ವೇಳೆ ವಿದ್ಯುತ್‌ ಸಮಸ್ಯೆ ಆದರಂತೂ ಇಡೀ ರಾತ್ರಿ ವಿದ್ಯುತ್‌ ಇಲ್ಲದೆ ಕಳೆಯುವ ಸ್ಥಿತಿ ಇದೆ. ಇಲಾಖೆಯ ಸಹಾಯವಾಣಿ 1912ಕ್ಕೆ ಕರೆ ಮಾಡಿದರೆ ಈ ಲೈನ್ ಅಸ್ತಿತ್ವದಲ್ಲಿ ಇಲ್ಲ ಎಂದು ಮೂರು ಭಾಷೆಯಲ್ಲಿ ಬರುತ್ತದೆ. ಸಮಸ್ಯೆ ಯಾರಿಗೆ ಹೇಳೋದು ಅನ್ನೋದೆ ದೊಡ್ಡ ಸಮಸ್ಯೆಯಾಗಿದೆ.
ನಾಗರಿಕ ಮಂಜು, ಬೆಸ್ಕಾಂ ವತಿಯಿಂದಲೆ ಎಲ್ಲರಿಗೂ ದೂರವಾಣಿ ಸಿಮ್‌ ನೀಡಿರುತ್ತಾರೆ. ಅದೂ ನಾವು ಕಟ್ಟುವ ಹಣದಿಂದ, ವಿದ್ಯುತ್‌ ದರ ಮಾತ್ರ ಮನಬಂದಂತೆ ಏರಿಕೆ ಮಾಡುತ್ತಾರೆ, ಸೇವೆ ಮಾತ್ರ ತೀರಾ ಕಳಪೆ, ಜನಪ್ರತಿನಿಧಿಗಳಿಗೆ ಸಮಸ್ಯೆ ಅರಿವಾಗುವುದಿಲ್ಲ, ಕಾರಣ ಅವರ ಮನೆಯಲ್ಲಿ ಯುಪಿಎಸ್‌ ಇರುತ್ತದೆ, ದಿನಾಲೂ ಮನಬಂದಂತೆ ಕರೆಂಟ್‌ ತೆಗೆಯುತ್ತಾರೆ, ಯಾರಿಗೂ ಸರಿಯಾಗಿ ಸ್ಪಂದಿಸುವುದಿಲ್ಲ, ಪರಿಸ್ಥಿತಿ ಹೇಗಾಗಿದೆ ಎಂದರೆ ಬೆಸ್ಕಾಂ ಅಧಿಕಾರಿಗಳ ಚೆಲ್ಲಾಟ ಗ್ರಾಹಕರಿಗೆ ಪ್ರಾಣ ಸಂಕಟ ಎಂಬಾತಾಗಿದೆ ಎಂದು ದೂರಿದ್ದಾರೆ.
ಇನ್ನು ರೈತ ಗುರು ಮಾತನಾಡಿ, ಚಿಕ್ಕಕೆರೆ ಅಚ್ಚುಕಟ್ಟು ಪ್ರದೇಶದ ಸುಮಾರು 80 ಎಕರೆ ಪ್ರದೇಶದಲ್ಲಿ ಮೊದಲಿನಿಂದಲೂ ನಗರ ಕರೆಂಟ್‌ ಇತ್ತು 30ಕ್ಕೂ ಹೆಚ್ಚು ರೈತರು ಬೆಳೆ ಬೆಳೆಯುತ್ತಿದ್ದರು. ಇದೀಗ ರೈತರಿಗೆ ಕನಿಷ್ಟ ನೋಟಿಸ್‌ ನೀಡದೆ ಏಕಾಏಕಿ ನಗರಕ್ಕೆ ಕರೆಂಟ್‌ ಕಡಿತ ಮಾಡಿ ಗ್ರಾಮಾಂತರದಲ್ಲಿ ಕರೆಂಟ್‌ ನೀಡಿದ್ದಾರೆ. ಇದು ದಿನಕ್ಕೆ ಒಂದುವರೆ ಗಂಟೆ ಮಾತ್ರ, ಯಾವಾಗ ಬರುತ್ತೆ ಹೋಗುತ್ತೆ ಅನ್ನೋದು ಗೊತ್ತಿಲ್ಲ, ಕೇಳಲು ಹೋದರೆ ಕಚೇರಿಯಲ್ಲಿ ಯಾರು ಇರೊಲ್ಲ, ಕೆಳಹಂತದ ಲೈನ್‌ಮನ್‌ಗಳಿಗೆ ಕೇಳಿದರೆ ಮೀಟರ್‌ ಹಾಕಿಸಿಕೊಳ್ಳಿ ಅಂತಾರೆ, ಜನಪ್ರತಿನಿಧಿಗಳಿಗೆ ಸಮಸ್ಯೆ ಹೇಳಿದರೂ ಅರ್ಥವಾಗುತ್ತಿಲ್ಲ, ತಾಲೂಕು ಬೆಸ್ಕಾಂ ಆಡಳಿತ ಅವ್ಯವಸ್ಥೆಯ ಆಗರವಾಗಿದೆ ಎಂದು ಅರೋಪಿಸಿದ್ದಾರೆ.
ದೂರು ನಿರ್ವಹಣೆಗೆ ಏಜೆನ್ಸಿ ಇತ್ತು, ಈಗ ಗುತ್ತಿಗೆ ಮುಗಿದಿದೆ, ಹೊಸಗುತ್ತಿಗೆ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ, ಅಲ್ಲಿವರೆಗೂ ಸಮಸ್ಯೆ ನಿವಾರಣೆಗೆ ಸೆಕ್ಷನ್‌ ಆಫೀಸರ್ ಗಳನ್ನೆ ಸಂಪರ್ಕಿಸಬೇಕು ಅಥವಾ 1912ಕ್ಕೆ ಕರೆ ಮಾಡಬೇಕು ಎನ್ನುತ್ತಾರೆ.
ದೂರು ನಿರ್ವಹಣೆಗೆ ಲ್ಯಾಂಡ್ ಲೈನ್‌ ವ್ಯವಸ್ಥೆ ಮಾಡಿ ಎಂದರೆ ಅದಕ್ಕೆ ಇಇ ಸ್ಪಷ್ಟ ಉತ್ತರ ನೀಡದೆ ಎಸ್‌ಒ ಅವರನ್ನು ಸಂಪರ್ಕಿಸಬೇಕು ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!