ಸಭೆಗೆ ಉಪ ವಿಭಾಗಾಧಿಕಾರಿಗಳೇ ಚಕ್ಕರ್

ದಲಿತರ ಕುಂದು ಕೊರೆತೆ ಸಭೆ ಬಹಿಷ್ಕರಿಸಿದ ದಲಿತ ಮುಖಂಡರು

153

Get real time updates directly on you device, subscribe now.

ಮಧುಗಿರಿ: ಪಟ್ಟಣದ ಶಿರಾಗೇಟ್‌ ಬಳಿ ಇರುವ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯ ಅನುಪಾಲನಾ ವರದಿಯನ್ನು ಸರಿಯಾಗಿ ಮಾಡಿಲ್ಲ ಮತ್ತು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸುತ್ತಿರುವ ಸಭೆಗೆ ಉಪ ವಿಭಾಗಾಧಿಕಾರಿಗಳೇ ಇಲ್ಲವೆಂದು ಆರೋಪಿಸಿ ದಲಿತರು ಸಭೆ ಬಹಿಷ್ಕರಿಸಿದ ಘಟನೆ ಗುರುವಾರ ನಡೆಯಿತು.
ದಲಿತರ ಕುಂದು ಕೊರೆತೆಗಳನ್ನು ಮಧುಗಿರಿ ಉಪ ವಿಭಾಗದಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು, ಆದರೆ ಸಭೆಯಲ್ಲಿ ಅನುಪಾಲನ ವರದಿ ಸಮರ್ಪಕವಾದ ರೀತಿಯಲ್ಲಿ ಉತ್ತರ ಸಿಗದೆ ಇರುವುದು ಹಾಗೂ ಮಧುಗಿರಿ ಉಪ ವಿಭಾಗಧಿಕಾರಿಗಳು ಗೈರು ಹಾಜರಿ ಇರುವುದನ್ನು ಪರಿಗಣಿಸಿ ಸಭೆ ಬಹಿಷ್ಕರಿಸಿ ಕೆಲ ಸಮಯ ರಸ್ತೆ ತಡೆ ನಡೆಸಿ, ಅಧಿಕಾರಿಗಳ ಕ್ರಮ ವಿರೋಧಿಸಿ ಘೋಷಣೆ ಕೂಗಿ ಕ್ರಾಂತಿಗೀತೆಗಳನ್ನು ದಲಿತ ಮುಖಂಡರು ಹಾಡಿದರು.
ಸಭೆಗೆ ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಆಗಮಿಸಿದ ಉಪ ವಿಭಾಗಾಧಿಕಾರಿ ಸೋಮಪ್ಪಕಡಕೋಳ ಪ್ರತಿಭಟನಾಕಾರರನ್ನು ಮನವೊಲಿಸಿ ಸಭೆಗೆ ಆಗಮಿಸಿದರು. ಆದರೆ ಎಷ್ಟೊತ್ತು ಕಾದರೂ ದಲಿತ ಮುಖಂಡರು ಮಾತ್ರ ಒಳ ಬರಲೇ ಇಲ್ಲ, ಕೊನೆಗೆ ಮತ್ತೊಮ್ಮೆ ಉಪ ವಿಭಾಗಾಧಿಕಾರಿಗಳು ಧರಣಿನಿರತರ ಬಳಿ ಬಂದು ಮಾತನಾಡಿದರು. ಅನುಪಾಲನಾ ವರದಿ ಸರಿಯಿಲ್ಲ ಎಂದು ದಲಿತ ಮುಖಂಡರು ಹಠಕ್ಕೆ ಬಿದ್ದು ಪ್ರತಿಭಟನೆ ಮುಂದುವರಿಸಿದರು.
ಸಭಾ ಸ್ಥಳಕ್ಕೆ ಆಗಮಿಸಿ ಸಭೆ ಮುಂದೂಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಸೋಮಪ್ಪಕಡಕೊಳ ಘೋಷಿಸಿದರು.
ಸಭೆ ಆರಂಭಕ್ಕೂ ಮುನ್ನಾ ತಹಶೀಲ್ದಾರ್‌ ವೈ.ರವಿ ಅವರು ಉಪವಿಭಾಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಾವಗಡಕ್ಕೆ ಸ್ಥಳ ಪರಿಶೀಲನೆ ಹೋಗಿರೋದ್ರಿಂದ ಸಭೆಯ ಮಧ್ಯೆ ಬಂದು ಸೇರಿಕೊಳ್ಳುತ್ತಾರೆ ಎಂದು ಹೇಳಿ ಸಭೆ ಆರಂಭಿಸಿದರು. ಸಭೆ ಆರಂಭದಲ್ಲೇ ಪಾವಗಡದ ವಿಚಾರವಾಗಿ ನಾಗಲಮಡಿಕೆ ಹೋಬಳಿ ಪಳವಳ್ಳಿ ಗ್ರಾಮದ ಜಮೀನು ತಳವಾರಿಕೆ ಇನಾಮಿಗೆ ಬಂದಿದ್ದು, ಈ ಜಮೀನನ್ನು ಕಂದಾಯ ಅಧಿಕಾರಿಗಳು ದಾಖಲೆಗಳನ್ನು ತಿರುಚಿ ಭೂ ಪರಿವರ್ತನೆ ಮಾಡಿರುತ್ತಾರೆ. ಇದನ್ನು ರದ್ದು ಪಡಿಸುವಂತೆ ಹಾಗೂ ಭೂ ಪರಿವರ್ತನೆ ಎಂದು ತಿರುಚಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಕೃಷ್ಣಮೂರ್ತಿ ಆರೋಪಿಸಿದರು. ಅನುಪಾಲನಾ ವರದಿಯಲ್ಲಿ ಗಿರಿಯಮ್ಮ ಎಂಬುವವರಿಗೆ ಪವತಿ ವಾರಸ್ಸು ಮೈಲೆ ಖಾತೆ ಪಹಣಿ ಬದಲಾವಣೆಯಾಗಿದ್ದು, ಹಿಡುವಳಿ ಜಮೀನು ಆಗಿರುತ್ತದೆ, ಈ ಸರ್ವೆ ನಂಬರ್‌ನಲ್ಲಿ ಯಾವುದೇ ರೀತಿಯ ಭೂ ಪರಿವರ್ತನೆಯಾಗಿ ಕಂಡು ಬರುವುದಿಲ್ಲ ಎಂದು ತಹಸೀಲ್ದಾರ್‌ ವರದಿ ಸಲ್ಲಿಸಿದ್ದಾರೆಂದು ಅನುಪಾಲನಾ ವರದಿಯೇ ಸಭೆಯ ಬಹಿಷ್ಕಾರವಾಗಲು ಕಾರಣವಾಯಿತು.
ಮಧುಗಿರಿ ಉಪವಿಭಾಗದ ಸಭೆಗೆ ಮಧುಗಿರಿ, ಪಾವಗಡ ಮತ್ತು ಶಿರಾ ಹಾಗೂ ಕೊರಟಗೆರೆ ತಾಲೂಕುಗಳನ್ನು ಪ್ರತ್ಯೇಕವಾಗಿ ಮಾಡಿದ್ದರ ಉದ್ದೇಶವಾದರೂ ಏನು? ಮಧುಗಿರಿ ಜಿಲ್ಲೆಯಾಗುವ ಎಲ್ಲಾ ಅರ್ಹತೆ ಇದ್ದರೂ ಅಧಿಕಾರಿಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ ಎಂದು ಆರೋಪಿಸಿದಾಗ, ತಹಶೀಲ್ದಾರ್‌ ವೈ.ರವಿ ಉತ್ತರಿಸಿ ನಮಗೆ ಯಾವುದೇ ಉದ್ದೇಶ ಇಲ್ಲ, ಕೊರೊನಾ ನಿಯಮಾವಳಿಯಲ್ಲಿ ಸಭೆ ಬೇರ್ಪಡಿಸಿದ್ದೇವೆ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ, ಆಗ ಶಿರಾದಲ್ಲಿ ರಾಜಕೀಯ ಸಭೆಗಳ ಅದ್ದೂರಿಯಾಗಿ ನಡೆದವು, ಆಗ ಕೊರೊನಾ ಅಡ್ಡ ಬರಲಿಲ್ಲವೇ ಎಂದು ಮರು ಉತ್ತರ ಕೇಳಿ ಬಂದಾಗ ನಾವು ಕಾನೂನಿನ ಅಡಿಯಲ್ಲೇ ಕೆಲಸ ಮಾಡುತ್ತಿದ್ದೇವೆ ಎಂದು ತಹಶೀಲ್ದಾರ್‌ ವೈ.ರವಿ ಉತ್ತರಿಸಿದರು.
ಹಾಜರಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಪರಿಚಯಿಸಲಾಯಿತು. ಈ ವೇಳೆ ಪಾವಗಡ ಪಟ್ಟಣ ಪಂಚಾಯಿತಿ ದ್ವಿತೀಯ ದರ್ಜೆ ಗುಮಾಸ್ತ ಹಾಜರಿದ್ದುದ್ದನ್ನು ಕಂಡು ಪಾವಗಡ ತಹಶೀಲ್ದಾರ್‌ ಮುಖ್ಯಾಧಿಕಾರಿಗಳು ಬರದಿರುವುದಕ್ಕೆ ಕಾರಣ ಕೇಳಿದಾಗ, ಸಾಮಾನ್ಯಸಭೆ ಇರೋದರಿಂದ ನನ್ನನ್ನು ಕಳಿಸಿದ್ದಾರೆ, ಸಭೆಗೆ ಹಾಜರಾಗಲು ಆದೇಶವಿದೆಯೇ ಎಂದರು.
ಸಭೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ತಾಪಂ ಇಒ ದೊಡ್ಡಸಿದ್ದಯ್ಯ, ತಾಲ್ಲೂಕು ಮಟ್ಟದ ಅಧಿಕಾರಿಗಳು, ದಲಿತ ಮುಖಂಡರಾದ ಡಿ.ಟಿ.ಸಂಜೀವಮೂರ್ತಿ, ಎಂ.ವೈ.ಶಿವಕುಮಾರ್‌, ಭರತ್‌, ಜಿವಿಕೆ ಮಂಜುನಾಥ್‌, ಸಿದ್ಧಾಪುರ ರಂಗಶಾಮಣ್ಣ, ಮಹಾರಾಜು, ರಾಜಗೋಪಾಲ್‌ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!