ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಶಂಕರ್‌ ಬದರಿ

493

Get real time updates directly on you device, subscribe now.

ತುಮಕೂರು: ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಶಂಕರ್‌ ಬಿದರಿ ಅವರು ತಮ್ಮ 67 ವಸಂತ ಪೂರೈಸಿ 68ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನಗರದ ಶ್ರೀಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಶುಕ್ರವಾರ ದಂಪತಿ ಭೇಟಿ ನೀಡಿ ಡಾ.ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆ ದರ್ಶನ ಪಡೆದು ನಂತರ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಕೆಪಿಸಿಸಿ ವಕ್ತಾರರಾದ ಮುರಳೀಧರ ಹಾಲಪ್ಪ ಅವರ ಜೊತೆಯಲ್ಲಿ ಸಿದ್ಧಗಂಗಾ ಮಠಕ್ಕೆ ಆಗಮಿಸಿದ ಶಂಕರ್‌ ಬಿದರಿಯವರು ಶ್ರೀಗಳ ಆಶೀರ್ವಾದ ಪಡೆದ ನಂತರ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಂಕರ್‌ ಬಿದರಿ, ಕಳೆದ ಎರಡು ವರ್ಷಗಳಿಂದ ಕೋವಿಡ್‌ ಮಹಾಮಾರಿಯಿಂದ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸದೆ ಶ್ರೀಗಳ ಆಶೀರ್ವಾದ ಪಡೆಯುವ ಮೂಲಕ ಸರಳವಾಗಿ ಆಚರಿಸಲಾಗಿದೆ. ಕೋವಿಡ್‌ ಮಹಾಮಾರಿಯಿಂದ ಈ ದೇಶ ಮುಕ್ತವಾಗಬೇಕು, ಜನಸಾಮಾನ್ಯರು ಸರಿಯಾದ ರೀತಿಯಲ್ಲಿ ಜೀವನ ನಡೆಸುವಂತಾಗಬೇಕು ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕು, ದೇಶದಲ್ಲಿ ನಮ್ಮ ಧರ್ಮ ರಕ್ಷಣೆಯಾಗಬೇಕು, ದುಷ್ಟಶಕ್ತಿಗಳು ನಾಶವಾಗಬೇಕು, ನಮ್ಮ ರಾಜ್ಯ ಸುಭೀಕ್ಷೆಯಿಂದ ಕೂಡಿರಬೇಕು, ಒಳ್ಳೆಯ ಆಡಳಿತ ಬರಬೇಕು, ಒಳ್ಳೆಯ ಜನ ಅಧಿಕಾರಕ್ಕೆ ಬರಬೇಕು, ಮತ್ತು 100 ಕ್ಕೆ ಶೇ.5 ಕ್ಕಿಂತ ಕಡಿಮೆ ಸರ್ಕಾರದ ಆದಾಯದಲ್ಲಿ ಸೋರಿಕೆ, ವಸೂಲಿ ಕೆಲಸಗಳು ಸಂಪೂರ್ಣವಾಗಿ ಆಗದಿದ್ದರೂ 100ಕ್ಕೆ ಶೇ.5 ಕ್ಕಿಂತ ಕಡಿಮೆಯಾದರೆ ನಮ್ಮ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ರಾಜ್ಯಕ್ಕೆ ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಯೋಜನೆ ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳನ್ನು ಮಾಡಿ, ಸುಮಾರು 40 ರಿಂದ 50 ಲಕ್ಷ ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಬೇಕಿದೆ. ಈ ಸೌಲಭ್ಯ ದೊರಕಬೇಕೆಂದರೆ ದೇವರ ಆಶೀರ್ವಾದ ಇರಬೇಕು, ಜೊತೆಗೆ ಶಕ್ತಿಯೂ ಇರಬೇಕು ಎಂದರು.
ಈಗಾಗಲೇ 3ನೇ ಅಲೆ ಬಗ್ಗೆ ತಜ್ಞರು ಸಾಕಷ್ಟು ಸೂಚನೆ ನೀಡುತ್ತಿದ್ದಾರೆ, ಈಗಿರುವ ಮುಂಜಾಗ್ರತೆಯಂತೆ ಮುಂದೆಯೂ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು, ಸಾಧ್ಯವಾದಷ್ಟು ಕೊರೊನ ನಮ್ಮಿಂದ ದೂರವಾಗಬೇಕು, 3ನೇ ಅಲೆ ಬಗ್ಗೆ ತಜ್ಞರು ಸಲಹೆ ಮತ್ತು ಊಹಾಪೋಹ ಹೇಳುತ್ತಿದ್ದಾರೆಯೇ ಹೊರತು, ನಿಖರವಾಗಿ ಹೇಳುತ್ತಿಲ್ಲ, ಆದ್ದರಿಂದ ಯಾವುದೇ ಮೂರನೇ ಅಲೆ ಬರುವುದಿಲ್ಲ ಎಂಬ ವಿಶ್ವಾಸ ನನಗಿದೆ. ಆದಷ್ಟು ಬೇಗ ಇನ್ನೆರಡ್ಮೂರು ತಿಂಗಳಲ್ಲಿ ಸಾಮಾನ್ಯ ಪರಿಸ್ಥಿತಿಗೆ ಮರಳಲಿದೆ. ಮಕ್ಕಳು ಭಯ ಪಡುವ ಅವಶ್ಯಕತೆ ಇಲ್ಲ, ದಸರಾ ಹಬ್ಬ ಮುಗಿದ ಮೇಲೆ ಜನಜೀವನ ಸಾಮಾನ್ಯ ಪರಿಸ್ಥಿತಿಗೆ ಮರುಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಮಾತನಾಡಿ, ಹೊಸದಾಗಿ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಎಲ್ಲರೂ ಧೈರ್ಯವಾಗಿ ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟು, ಉತ್ತಮ ವಿದ್ಯಾಭ್ಯಾಸ ಮಾಡಿ, ನಿಮ್ಮ ರಕ್ಷಣೆಗೆ ನಾವಿದ್ದೇವೆ, ಸರ್ಕಾರವಿದೆ, ಪೋಷಕರಿದ್ದಾರೆ, ಯುವಕರಿದ್ದಾರೆ, ನಿಮಗೆ ಆತ್ಮಸ್ಥೈರ್ಯ, ಆತ್ಮಸ್ಫೂರ್ತಿ ತುಂಬುವುದಕ್ಕೆ ನಾವೆಂದೂ ನಿಮ್ಮ ಜೊತೆಯಲ್ಲಿರುತ್ತೇವೆ ಎಂದು ಮಕ್ಕಳಲ್ಲಿ ಧೈರ್ಯ ತುಂಬಿದರು.
ನಿವೃತ್ತ ಐಜಿಪಿ ಶಂಕರ್‌ ಬಿದರಿ ಅವರ ಕುಟುಂಬಕ್ಕೆ ಆರೋಗ್ಯ, ಆಯುಷ್ಯ ಆ ದೇವರು ಇನ್ನೂ ಹೆಚ್ಚಿನದಾಗಿ ನೀಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರೇವಣಸಿದ್ಧಪ್ಪ, ಚಿಕ್ಕನಾಯಕನಹಳ್ಳಿ ಬಸವರಾಜು, ಡಾ.ರಾಘವೇಂದ್ರ, ಸಂಜೀವ್‌ಕುಮಾರ್‌, ಗಣೇಶ್‌ ಹಾಜದ್ದರು.

Get real time updates directly on you device, subscribe now.

Comments are closed.

error: Content is protected !!