ಕುಣಿಗಲ್: ಎಟಿಎಂನಲ್ಲಿ ನಗದು ಪಡೆಯಲು ಬಂದ ಗ್ರಾಹಕನ ವಂಚಿಸಿದ ಅಪರಿಚಿತ ವ್ಯಕ್ತಿ, ಗ್ರಾಹಕನ ಖಾತೆಯಿಂದ ಒಂದು ಲಕ್ಷರೂ. ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಕೆಂಪನಹಳ್ಳಿಯ ನರಸಿಂಹಯ್ಯ ಎಂಬಾತ ಕಳೆದ ಬುಧವಾರ ಗ್ರಾಮೀಣ ಬ್ಯಾಂಕ್‌ನ ಎಟಿಎಂ ಕಾರ್ಡ್ ಬಳಸಿ ಮಗಳ ವಿದ್ಯಾಭ್ಯಾಸಕ್ಕೆ ಹಣ ನಗದೀಕರಿಸಲು ಎಸ್‌ಬಿಐ ಬ್ಯಾಂಕ್ ಎಟಿಎಂನಲ್ಲಿ ಪ್ರಯತ್ನಿಸುವಾಗ, ಅಲ್ಲೆ ಇದ್ದ ಅಪರಿಚಿತ ವ್ಯಕ್ತಿ ಸಹಾಯ ಮಾಡುವ ನೆಪದಲ್ಲಿ ಗ್ರಾಹಕನಿಂದ ಎಟಿಎಂ ಕಾರ್ಡ್ ಗುಪ್ತಸಂಖ್ಯೆ ಪಡೆದು, ನಂತರ ಕಾರ್ಡ್ ಸರಿ ಇಲ್ಲ ಎಂದು ಹೇಳಿ, ಗ್ರಾಹಕನಿಗೆ ನಕಲಿ ಎಟಿಎಂ ಕಾರ್ಡ್ ನೀಡಿ ಕಳಿಸಿದ್ದಾನೆ. ಗ್ರಾಹಕ ತೆರಳಿದ ಬಳಿಕ ಅಪರಿಚತ ವ್ಯಕ್ತಿ ನಲವತ್ತು ಸಾವಿರ ರೂ. ನಗದೀಕರಿಸಿಕೊಂಡು, ಪಟ್ಟಣದ ಕೋಟೆ ಪ್ರದೇಶದ ಚಿನ್ನಾಭರಣ ಮಳಿಗೆಯಲ್ಲಿ ಹತ್ತು ಗ್ರಾಂ ಚಿನ್ನಾಭರಣ, ಮೊಬೈಲ್ ಅಂಗಡಿಯಲ್ಲಿ ನಾಕುವರೆ ಸಾವಿರ ರೂ. ಮೊಬೈಲ್ ಖರೀದಿಸಿ, ಒಟ್ಟಾರೆ ಗ್ರಾಹಕನ ಖಾತೆಯಲ್ಲಿ ಒಂದು ಲಕ್ಷದ ನಾಲ್ಕು ಸಾವಿರದ ಪೈಕಿ ಒಂದು ಲಕ್ಷರೂ. ಲಪಟಾಯಿಸಿದ್ದಾನೆ. ಗ್ರಾಹಕ ಮನೆಗೆ ಬಂದು ಬ್ಯಾಂಕ್ ಮೆಸೇಜ್ ನೋಡಿದಾಗ ವಂಚನೆಯಾಗಿರುವುದು ಗೊತ್ತಾಗಿ ತಡವಾಗಿ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾನೆ.
ವಂಚಿಸಿ ಎಟಿಎಂನಲ್ಲಿ ಹಣ ಡ್ರಾ ಮಾಡಿದ ಅಪರಿಚಿತ
Get real time updates directly on you device, subscribe now.
Comments are closed.