ಯಶಸ್ಸಿನ ಹಾದಿಯಲ್ಲಿ ಯುವ ನಟ ಯಶವಂತ್ ಕುಚಬಾಳ

85

Get real time updates directly on you device, subscribe now.


ತುಮಕೂರು: ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ಸಿನೆಮಾಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಈ ಭಾಗದ ಕಲಾವಿದರಿಗೆ ಅವಕಾಶಗಳು ಕಡಿಮೆ ಎನ್ನುವ ಮನೋಭಾವ ದೂರವಾಗಿದ್ದರಿಂದ ಯುವಕರ ಕಣ್ಣಗಳಲ್ಲಿ ತಾನು ತೆರೆಯ ಮೇಲೆ ಮಿಂಚಬೇಕು ಎನ್ನುವ ಉತ್ಸಾಹ ಕನಸು ಹೆಚ್ಚುತ್ತಲೇ ಇದೆ. ಅಂತಹವರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ನಿವಾಸಿ, ಯುವ ನಟ ನೀನಾಸಂ ಯಶವಂತ್ ಕುಚಬಾಳ ಕೂಡ ಒಬ್ಬರು.

ಯಶವಂತ್ ಕುಚಬಾಳ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನವರು. ಇವರ ತಂದೆ ಎಸ್ ಬಿ ಕುಚಬಾಳ ಈಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ ಶಾರದಾಬಾಯಿ ಗೃಹಿಣಿ, ದೊಡ್ಡಣ್ಣ ಜೈಭೀಮ್, ಅಕ್ಕ ಮೀರಾಬಾಯಿ, ಅಣ್ಣ ಪ್ರಕಾಶ್ ಕುಟುಂಬದವರು.

ಯಶವಂತ್ ಕುಚಬಾಳ ಸದ್ಯ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಾಸವಿದ್ದು, ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ, ಕಲೆಯಲ್ಲಿ ಅಪಾರ ಒಲವು ಹೊಂದಿದ್ದಾರೆ, ಚಿಕ್ಕ ವಯಸ್ಸಿನಿಂದಲೇ ತಾನೊಬ್ಬನೇ ನಟಯಾಗಬೇಕು ಎಂದು ಕನಸು ಕಟ್ಟಿಕೊಂಡವರು.
ಹಾಗೆ ಆ ಕನಸನ್ನ ನನಸಾಗಿಸಿಕೊಂಡ ಕನಸುಗಾರ ಈ ಯಶವಂತ್.

ಸಿನಿಮಾದ ಹುಚ್ಚು ಅಭಿಮಾನಿ ಅಂದ್ರೆ ತಪ್ಪನಿಸದು. ಮುಂದೊಂದು ದಿನ ತಾನು ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಂಪಾದಿಸಬೇಕು ಎನ್ನುವ ಕನಸು ಕಾಣುತ್ತಿದ್ದಾರೆ, ತಾನು ಕಂಡ ಕನಸಿನತ್ತ ಮುನ್ನುಗ್ಗುತ್ತಿರುವ ಯಶವಂತ್, ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.
ಈಗಾಗಲೇ ಡಾಲಿ ಧನಂಜಯ ಅಭಿನಯದ ರತ್ನನ್ ಪ್ರಪಂಚ ಚಲನಚಿತ್ರದ ಪ್ರಮುಖ ಪಾತ್ರದಲ್ಲಿ ಯಶವಂತ್ ಕುಚಬಾಳ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಹೊಂಬಾಳೆ ಫಿಲಂಸ್ ಯ್ಯುಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನನಗೆ ಚಿಕ್ಕಂದಿನಿಂದಲೂ ಸಿನಿಮಾಗಳಲ್ಲಿ ನಟನೆ ಮಾಡಬೇಕು ಎಂಬ ಹಂಬಲದಿಂದ ಚಿತ್ರರಂಗದ ಕಡೆ ಮುಖ ಮಾಡಿದೆ. ಕುಟುಂಬದಲ್ಲಿ ಚಿತ್ರರಂಗದಲ್ಲಿ ಬೇಡ ವಿದ್ಯಾಭ್ಯಾಸ ಮಾಡು ಎಂದು ಹೇಳಿದರು. ಆದರೆ ನಾನು ಕುಟುಂಬದವರ ವಿರೋಧದ ನಡುವೆಯೂ ಚಿತ್ರದಲ್ಲಿ ನಟಿಸೋಕೆ ಆರಂಭಿಸಿದೆ. ನಂತರ ನನಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತು , ಈಗ ಮನೆಯಲ್ಲಿ ಪೋಷಕರು ನಟಿಸಲು ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಯಶವಂತ್ ಕುಚಬಾಳ.

ನೀನಾಸಂನಲ್ಲಿ ತರಬೇತಿ : 2006ರಲ್ಲಿ ಒಂದು ತಿಂಗಳ ಬೇಸಿಗೆ ಶಿಬಿರ, ನಂತರ 2009ರಲ್ಲಿ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. 2012 ರಲ್ಲಿ ದೆಹಲಿಯಲ್ಲಿ ಮಹಿಂದ್ರ ಎಕ್ಸಲೇನ್ಸ ಇನ್ ಥೀಯೇಟರ್ ಅವಾರ್ಡ್ಸ್
(ಮೇಟಾ) ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಪ್ರಶಸ್ತಿ ಸಿಕ್ಕಿದ್ದು ಒಂದು ಹೆಮ್ಮೆಯ ಸಂಗತಿ. 2017ರಲ್ಲಿ ಹೊರದೇಶವಾದ ಜಪಾನ್ ನಲ್ಲಿ “ದ ವಾಟರ್ ಸ್ಟೇಷನ್” ನಾಟಕದಲ್ಲಿ ಯಶವಂತ್ ಕುಚಬಾಳ ಅಭಿನಯಿಸಿದ್ದಾರೆ.
ಸುಮಾರು ಏಳು ಸಿನಿಮಾಗಳಲ್ಲಿ ಯಶವಂತ ಅಭಿನಯಿಸಿದ್ದಾರೆ. ಇತ್ತಿಚೆಗೆ “ರತ್ನನ್ ಪ್ರಪಂಚ” ಚಲನಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಲಕ್ಷಾಂತರ ಜನಕ್ಕೆ ಚಿರಪರಿಚಿತರಾಗಿದ್ದಾರೆ.
ಬಹುಮುಖ ಪ್ರತಿಭೆಯಾಗಿರುವ ಯಶವಂತ್ ಕುಚಬಾಳ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಿ ಎಂದು ನಮ್ಮ ತುಮಕೂರು ವಾರ್ತೆ ದಿನಪತ್ರಿಕೆ ಬಳಗದಿಂದ ಶುಭ ಹಾರೈಕೆಗಳು.

Get real time updates directly on you device, subscribe now.

Comments are closed.

error: Content is protected !!