ಕುಣಿಗಲ್: ಕೊವಿಡ್-19 ಸೋಂಕಿನ ವಿರುದ್ಧ ಹೋರಾಡಲು ಸರ್ಕಾರದ ಲಸಿಕೆ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ, ನಾಗರಿಕರು ಯಾವುದೇ ವದಂತಿ, ಗೊಂದಲಕ್ಕೆ ಕಿವಿಗೊಡದೆ ಲಸಿಕಾ ಶಿಬಿರಗಳಲ್ಲಿ ಲಸಿಕೆಪಡೆದು ಕೊವಿಡ್-19 ರಿಂದ ರಕ್ಷಣೆ ಪಡೆಯುವಂತೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲ ತಿಳಿಸಿದರು.
ಪಟ್ಟಣದ ಎಂಟನೆ ವಾರ್ಡ್ ನಲ್ಲಿ ಹಮ್ಮಿಕೊಳ್ಳಲಾದ ಕೊವಿಡ್ ಲಸಿಕೆ ಶಿಬಿರ ಉದ್ಘಾಟಿಸಿ, ಇಂದಿಗೂ ಕೆಲ ಜನರಲ್ಲಿ ಕೊವಿಡ್ ಲಸಿಕೆ ಬಗ್ಗೆ ಸಾಕಷ್ಟು, ಅನುಮಾನ ಗೊಂದಲ ಇದೆ. ಈ ಬಗ್ಗೆ ಕೆಲವರು ಸತ್ಯಕ್ಕೆ ದೂರವಾದ ವದಂತಿ ಸಹ ಹಬ್ಬಿಸುತ್ತಿರುವುದು ಸರಿಯಲ್ಲ, ಕೊವಿಡ್-19 ವಿರುದ್ಧ ನೀಡಲಾಗುತ್ತಿರುವ ಲಸಿಕೆಗಳು ಪರಿಣಾಮಕಾರಿ ಲಸಿಕೆ ಎಂದು ಈಗಾಗಲೆ ವೈದ್ಯಕೀಯ ಪರೀಕ್ಷೆಗಳಿಂದ ಸಾಬೀತಾಗಿದೆ, ಲಸಿಕೆ ಪಡೆದವರಲ್ಲಿ ಸೋಂಕಿನ ಲಕ್ಷಣ ವಿರಳ, ಒಂದು ವೇಳೆ ಸೋಂಕು ತಗುಲಿದರೂ ಮಾರಾಣಾಂತಿಕವಾಗದೆ ಶೀಘ್ರ ಗುಣಮುಖವಾಗಿರುವ ಪ್ರಕರಣ ಸಾಕಷ್ಟಿವೆ, ಆದ್ದರಿಂದ ಲಸಿಕಾ ಶಿಬಿರಗಳಿಗೆ ಆಗಮಿಸಿ ಉಚಿತವಾಗಿ ಲಸಿಕೆ ಪಡೆದು ಕೊವಿಡ್- 19 ಮಹಾಮಾರಿ ವಿರುದ್ಧ ರಕ್ಷಣೆ ಪಡೆಯಬೇಕೆಂದರು.
ಪರಿಸರ ಅಭಿಯಂತರ ಚಂದ್ರಶೇಖರ್ ಮಾತನಾಡಿ, ಸರ್ಕಾರ ಕೊವಿಡ್ ಲಸಿಕೆ ಪೂರೈಕೆ ವೇಗ ಹೆಚ್ಚಿಸಿದೆ, ಕಳೆದ ಕೆಲವಾರು ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಲಸಿಕೆ ಲಭ್ಯವಾಗುತ್ತಿದೆ, ಹೆಚ್ಚು ಹೆಚ್ಚುಮಂದಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಆಯಾ ವಾರ್ಡ್ ಗಳಲ್ಲೆ ಲಸಿಕೆ ನೀಡಲು ಶಿಬಿರ ಆಯೋಜಿಸಲಾಗುತ್ತಿದೆ. ನಾಗರಿಕರ ಮನೆ ಸಮೀಪವೆ ಶಿಬಿರ ಆಯೋಜಿಸುತ್ತಿರುವುದರಿಂದ ಲಸಿಕೆ ಪಡೆದು ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕಾರ ನೀಡಬೇಕೆಂದರು.
ಲಸಿಕಾ ಶಿಬಿರದಲ್ಲಿ ಮುನ್ನೂರ ಐವತ್ತಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದರು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಾಲುಗಟ್ಟಿ ನಿಂತು ಲಸಿಕೆ ಪಡೆದಿದ್ದು ವಿಶೇಷವಾಗಿತ್ತು. ಪ್ರಮುಖರಾದ ಶಾನವಾಜಜ್ ಖಾನ್ ಗೋರಿ, ಅತೀಕುಲ್ಲಾ, ಸೈಫುಲ್ಲಾ, ಗೌಸ್‌ಪಾಶ, ಶಬ್ಬೀರ್ ಪಾಶ ಇತರರು ಇದ್ದರು.
ಲಸಿಕೆ ಹಾಕಿಸಿಕೊಂಡು ಕೊರೊನಾ ದೂರ ಮಾಡಿ
Get real time updates directly on you device, subscribe now.
Comments are closed.