ನಾನು ಜೆಡಿಎಸ್‌ ಬಿಡುವ ಮಾತೇ ಇಲ್ಲ: ಶ್ರೀನಿವಾಸ್

193

Get real time updates directly on you device, subscribe now.

ನಿಟ್ಟೂರು: ಯಡಿಯೂರಪ್ಪ, ಸಂತೋಷ್‌ ಅವರು ಬಿಜೆಪಿ ಪಕ್ಷಕ್ಕೆ ಕರೆದಾಗಲೇ ನಾ ಎಲ್ಲಿಯೂ ಹೋಗಿಲ್ಲ, ಒತ್ತಾಯ ಮಾಡಿದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಹೊರತು ಎಲ್ಲಿಯೂ ಬರುವುದಿಲ್ಲ ಎಂದು ಹೇಳಿದ ನಾನು ಜೆಡಿಎಸ್‌ ಪಕ್ಷವನ್ನು ಯಾಕೆ ಬಿಡಲಿ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ, ಶೇಷನಹಳ್ಳಿ ಹೊಸಕೆರೆ, ಕಲ್ಲರ್ದಗೆರೆ ಗ್ರಾಮಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇಲಾಖೆ ಯೋಜನೆ ಅಡಿಯಲ್ಲಿ ಡಾ.ಬಿ ಆರ್‌.ಅಂಬೇಡ್ಕರ್‌ ಭವನ ಕಾಮಗಾರಿಗೆ ಸುಮಾರು 86 ಲಕ್ಷ ರೂ. ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಎಂಎಲ್‌ಸಿ ಬೆಮಲ್‌ ಕಾಂತರಾಜು ಹಾಗೂ ರಾಜಣ್ಣ ಭೇಟಿಯ ಬಗ್ಗೆ ನನಗೆ ಗೊತ್ತಿಲ್ಲ, ಕಾಂತರಾಜು ಕೂಡ ಎಂದೂ ಪಕ್ಷ ಬಿಡುತ್ತೇನೆ ಎಂದು ಹೇಳಿಲ್ಲ, ಅವರನ್ನು ಯಾವ ಕಾರಣಕ್ಕೆ ಭೇಟಿಯಾಗಿದ್ದಾರೆ ಎಂಬ ಮಾಹಿತಿ ನನಗಿಲ್ಲ ಎಂದರು.
ಇನ್ನೂ ನಾನು ನಾಲ್ಕು ಬಾರಿ ಶಾಸಕನಾಗಿ ಕ್ಷೇತ್ರದ ಜನರಿಂದ ಆಯ್ಕೆಯಾಗಿದ್ದೇನೆ, ಮೊದಲನೇ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದವನು ಪಕ್ಷೇತರರಾಗಿ ಗೆದ್ದು ಜೆಡಿಎಸ್‌ ಪಕ್ಷಕ್ಕೆ ಸೇರಿದ್ದೇನೆ, ಹಾಗಾಗಿ ಕುಮಾರಸ್ವಾಮಿ ಅವರಿಗಾಗಲಿ, ನನಗಾಗಲಿ ಯಾವುದೇ ರೀತಿಯ ಬೇಸರ ಹಾಗೂ ವೈಮನಸ್ಸು ಇಲ್ಲ ಎಂದರು.
ಕುಮಾರಸ್ವಾಮಿ ಅವರಿಗೆ ಮತ್ತು ನಮ್ಮ ಪಕ್ಷಕ್ಕೆ ನಾನು ಶಕ್ತಿ ತುಂಬಿದ್ದೇನೆ ಅಂದ ಮೇಲೆ ಅವರು ನನ್ನ ಮೇಲೆ ಯಾಕೆ ಬೇಸರ ವ್ಯಕ್ತಪಡಿಸುತ್ತಾರೆ, ನಾನು ಅವರ ಮೇಲೆ ವಿಶ್ವಾಸ ಇಟ್ಟಿದ್ದೇನೆ, ಅವರೂ ಸಹ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ, ಇದರಲ್ಲಿ ಯಾವುದೇ ಗೊಂದಲ ಬೇಡ, ದೇವೇಗೌಡರ ಹುಟ್ಟುಹಬ್ಬದ ದಿನ ನಾನೇ ಹೋಗಿ ಶುಭಾಶಯ ಕೋರಿ ಬಂದಿದ್ದೇನೆ, ಇದೆಲ್ಲಾ ಮಾಧ್ಯಮದವರ ಸೃಷ್ಟಿಯೇ ಹೊರತು ನಾನು ಎಂದೂ ಎಲ್ಲಿಯೂ ಜೆಡಿಎಸ್‌ ಬಿಡುತ್ತೇನೆ ಎನ್ನುವ ಮಾತನ್ನು ಹೇಳಿಲ್ಲ,
ಈಗ ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಅಲ್ಲದೆ ನಾನು ಹಲವಾರು ಬಾರಿ ತಮಗೆ ತಿಳಿಸಿದ್ದೇನೆ, ಪಕ್ಷ ಬಿಡುವ ವಿಚಾರ ಇಲ್ಲ ಎಂದರು.
ಮತದಾರರ ಒಲವು ಮತ್ತು ಶಾಸಕನಾಗಿ ನಾನು ನನ್ನ ಕ್ಷೇತ್ರಕ್ಕೆ ಏನು ಮಾಡಿರುವೆ ಎಂಬುದು ಚುನಾವಣೆಯಲ್ಲಿ ಪ್ರಶ್ನೆಯಾಗುತ್ತದೆ, ಅದರಂತೆ ಮತದಾರ ಪ್ರಭುಗಳು ಆಶೀರ್ವಾದ ಮಾಡುತ್ತಾರೆ, ಇನ್ನು ಎರಡು ವರ್ಷ ಚುನಾವಣೆ ಇದೆ, ನನ್ನ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಜನೆಯಿದೆ, ಅವುಗಳನ್ನು ಮಾಡುವುದು ನನ್ನ ಗುರಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖಂಡರಾದ ನರಸಿಂಹಮೂರ್ತಿ, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಗುರುರೇಣುಕರಾಧ್ಯ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!