ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಗೊತ್ತಿಲ್ಲ: ಶ್ರೀನಿವಾಸ್

147

Get real time updates directly on you device, subscribe now.


ಗುಬ್ಬಿ: ಜೆಡಿಎಸ್‌ ರಾಜ್ಯ ಅಧ್ಯಕ್ಷ ಕುಮಾರಸ್ವಾಮಿ ಅವರು ಮುಂದಿನ ದಿನದ ಚುನಾವಣೆಗೆ 104 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ವಿಚಾರ ನನಗೆ ಸರಿಯಾಗಿ ತಿಳಿದಿಲ್ಲ, ನಾನು ಯಾವ ಮೀಟಿಂಗ್‌ ಹೋಗಿಲ್ಲ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.
ಗುಬ್ಬಿ ತಾಲೂಕಿನ ಕೊಣನಕೆರೆ, ಕಡಬ, ಬಂಡನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಆ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತೋ ಇಲ್ಲವೋ ಗೊತ್ತಿಲ್ಲ, ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದು ಅವರೇ ತಿಳಿಸಬೇಕು ಎಂದರು.
ತಾಲೂಕಿನಲ್ಲಿ ಸುಮಾರು 18 ಕಡೆ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲಾಗುತ್ತಿದ್ದು ಹೋಬಳಿ ಭಾಗದಲ್ಲಿ 50 ಲಕ್ಷ ಹಣ ಹಾಕಿ ನಿರ್ಮಾಣ ಮಾಡಲಾಗುತ್ತಿದೆ ಹಾಗೂ ಹೆಚ್ಚು ದಲಿತ ಸಮುದಾಯ ಇರುವ ಕಡೆಯಲ್ಲಿ ಮತ್ತು ಅವಶ್ಯಕತೆ ಇರುವ ಭಾಗದಲ್ಲಿ ಎಲ್ಲಾ ಭಾಗದಲ್ಲೂ ಕಟ್ಟಿಸಲಾಗುತ್ತಿದೆ ಎಂದರು.
ಇನ್ನೂ ಗ್ರಾಮ ಪಂಚಾಯತಿಗಳಲ್ಲಿ ಅವಶ್ಯಕತೆಗಿಂತ ಹೆಚ್ಚು ವಾಟರ್ ಮನ್ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ, ಹಾಗಾಗಿ ಸಂಬಳ ಕೊಡುವುದು ವಿಳಂಬವಾಗಿದೆ ಮತ್ತು ಸರಕಾರ ಕೊರೊನಾ ಹಿನ್ನಲೆಯಲ್ಲಿ ಹಣ ಬಿಡುಗಡೆ ಮಾಡಿಲ್ಲ, ಇನ್ನೂ ಸರಕಾರದ ನಿಯಮದಂತೆ ಓವರ್‌ ಹೇಡ್‌ ಟ್ಯಾಂಕ್‌ ಇರುವ ಕಡೆ ಮಾತ್ರ ವಾಟರ್ ಮನ್‌ ಇರಬೇಕು ಎಂದು ತಿಳಿಸಿದೆ, ಆದರೆ ಕೆಲವು ಗ್ರಾಮ ಪಂಚಾಯತಿಯಲ್ಲಿ 8 ರಿಂದ 15 ರ ತನಕ ನೇಮಕ ಮಾಡಲಾಗಿದೆ, ಕೆಲವು ಗ್ರಾಮ ಪಂಚಾಯತಿಗಳಲ್ಲಿ ಆದಾಯದ ಮೂಲ ಇಲ್ಲ, ತೆರಿಗೆ ಸಂಗ್ರಹ ಕೂಡ ಕಷ್ಟವಾಗಿದೆ, ಹಾಗಾಗಿ ಸಮಸ್ಯೆ ಆಗಿದ್ದು ಅದನ್ನು ಸರಿ ಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟರಂಗಯ್ಯ, ಮುಖಂಡರಾದ ಪಾಟೇಲ್‌ ದೇವರಾಜು, ಉಪೇಂದ್ರ, ದಲಿತ ಮುಖಂಡ ಶಂಕರ್‌, ಸುರೇಶ್‌, ಕೃಷ್ಣಮೂರ್ತಿ, ಪಾಂಡು, ಚೇಳೂರು ಶಿವನಂಜಯ್ಯ, ನಾರಾಯಣ್‌, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮಣ್ಣ, ಅಭಿವೃದ್ಧಿ ಅಧಿಕಾರಿ ರಾಜಣ್ಣ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!