ಕುಣಿಗಲ್: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧಯೊಬ್ಬರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತರನ್ನು ಮೂಲತಹ ಮಾಗಡಿ ತಾಲೂಕಿನ ಸಿಂಗ್ರಗೌಡನ ಪಾಳ್ಯದ ಲಕ್ಕಮ್ಮ (70) ಎಂದು ಗುರುತಿಸಲಾಗಿದೆ. ಇವರಿಗೆ ವಯೋ ಸಂಬಂಧಿ ವಿವಿಧ ರೋಗಗಳು ಕಾಡುತ್ತಿದ್ದು, ಕಳೆದ ಕೆಲ ದಿನಗಳ ಹಿಂದೆ ಗುಬ್ಬಿ ತಾಲೂಕಿನ ನಿಡುವಳಲು ಗ್ರಾಮದಲ್ಲಿನ ಮಗಳ ಮನೆಗೆ ಹೋಗುವುದಾಗಿ ಹೇಳಿ ಬಂದವರು ಕಾಣೆಯಾಗಿದ್ದರು. ಶನಿವಾರ ಬೆಳಗ್ಗೆ ಮೃತರ ದೇಹ ದೊಡ್ಡಕೆರೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಇವರ ಸಂಬಂಧಿಯೊಬ್ಬರು ಮೃತರ ವಿವರ ಗುರುತಿಸಿ, ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರು ನೀಡಿದ್ದಾರೆ.
ವೃದ್ಧೆ ಕೆರೆಗೆ ಬಿದ್ದು ಆತ್ಮಹತ್ಯೆ
Get real time updates directly on you device, subscribe now.
Comments are closed.