ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ

242

Get real time updates directly on you device, subscribe now.

ಗುಬ್ಬಿ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳು ಭಾಗವಹಿಸುತ್ತಾರೆ, ಆದರೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಯಾಕೆ ಭಾಗವಹಿಸುತ್ತಿಲ್ಲ ಎಂದು ಸದಸ್ಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್‌.ಕೋಟೆ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಕೆಲವೇ ಕೆಲವು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು, ಇದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಸಮಸ್ಯೆ ಇರುತ್ತವೆ, ಹಾಗಾಗಿ ಗ್ರಾಮ ಪಂಚಾಯಿತಿಯ ಕೆಡಿಪಿ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ನಡುವೆ ಚರ್ಚೆ ನಡೆಯಬೇಕು, ಆದರೆ ಅವರೇ ಬರುವುದಿಲ್ಲ ಎಂದರೆ ಹೇಗೆ, ಇದರ ಬಗ್ಗೆ ಮೇಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಒಕ್ಕೋರಲಿನಿಂದ ಒತ್ತಾಯ ಮಾಡಿದರು.
ಇನ್ನೂ ಕೃಷಿ ಇಲಾಖೆಯಿಂದ ಸುಮಾರು ನಿಟ್ಟೂರು ಹೋಬಳಿಗೆ ನಾನ್ನೂರ ಐವತ್ತು ಟಾರ್ಪಲ್‌ ನೀಡಿದ್ದಾರೆ ಎಂಬ ಮಾಹಿತಿ ನೀಡುತ್ತಿದ್ದೀರಿ, ಆದರೆ ಎಂ.ಎನ್‌.ಕೋಟೆ ಗ್ರಾಮ ಪಂಚಾಯಿತಿಯ ಯಾವುದೇ ರೈತರಿಗೆ ಈ ಟಾರ್ಪಲ್‌ ಸಿಕ್ಕಿಲ್ಲ, ಯಾರಿಗೆ ಮಾರಿಕೊಂಡಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.
ಆಸ್ಪತ್ರೆಯ ಸಿಬ್ಬಂದಿ ಕೊರೊನಾ ಲಸಿಕೆಯನ್ನು ಯಾವ ಪ್ರಮಾಣದಲ್ಲಿ ನೀಡುತ್ತಿದ್ದೀರಾ, ಪ್ರತಿದಿನ ಎಷ್ಟು ಡೋಸ್‌ಗಳು ಬರುತ್ತಿವೆ, ಅದರ ಬಗ್ಗೆ ಮಾಹಿತಿ ನೀಡಬೇಕು ಮತ್ತು ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ ಅವರು ಸಾಕಷ್ಟು ರಸ್ತೆ ಸಮಸ್ಯೆಇದೆ, ಅವುಗಳನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು. ಇನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಸ್ಕಾಂ ಇಲಾಖೆ, ಶಿಕ್ಷಣ ಇಲಾಖೆ, ಯಾವುದೇ ದೊಡ್ಡ ಮಟ್ಟದ ಅಧಿಕಾರಿಗಳು ಬಾರದೆ ತಮ್ಮ ಸಹವರ್ತಿಗಳನ್ನ ಕಳುಹಿಸಿದ್ದು ಬೇಸರ ತರಿಸಿತು, ಮುಂದಿನ ಕೆಡಿಪಿ ಸಭೆಗಳಲ್ಲಿ ಯಾವುದೇ ಕಾರಣಕ್ಕೂ ಈ ರೀತಿ ನಡೆಯಬಾರದು, ಪ್ರತಿಯೊಬ್ಬ ಅಧಿಕಾರಿಯೂ ಭಾಗವಹಿಸಬೇಕು ಎಂದು ಅಧ್ಯಕ್ಷರಿಗೆ ಸದಸ್ಯರು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗಿಶ್‌, ಉಪಾಧ್ಯಕ್ಷೆ ಸಿದ್ದಗಂಗಮ್ಮ ಕಲ್ಲೇಶ್‌, ಸದಸ್ಯರಾದ ಎಂ.ಎನ್‌.ಭೀಮಶೆಟ್ಟಿ , ಸಿದ್ದರಾಮಣ್ಣ, ನರಸಯ್ಯ, ರವೀಶ್‌, ದೀಲೀಪ್‌ ಕುಮಾರ್‌, ಶಿವಪ್ಪ, ಕಾಂತರಾಜು, ಡಾ.ವಿನಯ್‌, ಕೃಷಿ ಅಧಿಕಾರಿ ಪ್ರಕಾಶ್‌, ಕಂದಾಯಧಿಕಾರಿ ನಾರಾಯಣ್‌, ಅಪ್ಸರಾ, ಪಿಡಿಓ ಸಿ.ನಾಗೇಂದ್ರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!