ನಿಷೇಧದ ನಡುವೆಯೂ ಪ್ಲಾಸ್ಟಿಕ್‌ ಬಳಕೆ ಮುಂದುವರಿಕೆ- ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಟೀ, ಕಾಫಿ ಪಾರ್ಸೆಲ್‌ಗೆ ಪ್ಲಾಸ್ಟಿಕ್‌ ಕವರ್ ಬಳಕೆ

383

Get real time updates directly on you device, subscribe now.

ಕುಣಿಗಲ್‌: ಬಿಸಿಯಾದ ಟೀ, ಕಾಫಿ, ಹಾಲು ಸರಬರಾಜು ಮಾಡಲು ಪ್ಲಾಸ್ಟಿಕ್ ಕವರ್‌ ಬಳಕೆ ಮಾಡುತ್ತಿರುವ ಕಾರಣ ಪ್ರಮುಖವಾಗಿ ಶ್ರಮಿಕ ವರ್ಗ ಹಲವು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಎಲ್ಲಾರೀತಿಯ ಪ್ಲಾಸ್ಟಿಕ್‌ ನಿಷೇಧಿಸಿ ಸರ್ಕಾರ ಆದೇಶ ಹೊರಡಿದ್ದರೂ, ನಿಷೇಧಿತ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಅಗತ್ಯ ಕಟ್ಟೆಚ್ಚರ ವಹಿಸಿ ಕ್ರಮ ಕೈಗೊಳ್ಳುವಲ್ಲಿ ಸ್ಥಳೀಯ ಸಂಸ್ಥೆ ನಿರ್ಲಕ್ಷ್ಯ ವಹಿಸಿದ ಕಾರಣ ಆಹಾರ ಪದಾರ್ಥ ಕಟ್ಟಲು, ಬಿಸಿಯಾದ ಚಹ, ಹಾಲು, ಕಾಫಿ ಮಾರಾಟ ಮಾಡಲು ಪ್ಲಾಸ್ಟಿಕ್‌ ಕವರ್‌ ಯಥೇಚ್ಚವಾಗಿ ಬಳಕೆ ಮಾಡುತ್ತಿರುವ ಪರಿಣಾಮ ಹೆಚ್ಚಾಗಿ ಶ್ರಮಿಕ ವರ್ಗಗಳಾದ ಮೆಕಾನಿಕ್‌, ಕಟ್ಟಡ ಕಾರ್ಮಿಕರು ಇತರೆ ವರ್ಗ ಹಲವು ಮಾರಕ ರೋಗಕ್ಕೆ ತುತ್ತಾಗುತ್ತಿರುವುದು ಆತಂಕಕಾರಿಯಾಗಿದೆ.
ಪಟ್ಟಣದಲ್ಲಿ ಪ್ರಮುಖ ಚಹಾ ಅಂಗಡಿಗಳಲ್ಲಿ ಶ್ರಮಿಕ ವರ್ಗವು ಚಹಾ ಇತರೆ ತರಿಸಲು ಚಹಾ ಅಂಗಡಿಗಳಿಗೆ ಕಳಿಸಿದಾಗ ಚಹಾ ಅಂಗಡಿಯವರು ಕಾಗದದ ಲೋಟ ನೀಡಿದರೂ ಬಿಸಿಯಾದ ಪಾನೀಯ ನೀಡಲು ಪ್ಲಾಸ್ಟಿಕ್‌ ಕವರ್‌ ಉಪಯೋಗಿಸುತ್ತಿದ್ದಾರೆ. ದಿನಕ್ಕೆ ಕನಿಷ್ಟ ಎರಡರಿಂದ ನಾಲ್ಕು ಬಾರಿ ಚಹಾ, ಕಾಫಿ, ಹಾಲು ತರಿಸುತ್ತಿದ್ದು ಪ್ರತಿಬಾರಿಯು ಪ್ಲಾಸ್ಟಿಕ್‌ ಕವರ್‌ ಬಳಸುತ್ತಿರುವ ಕಾರಣ ಪ್ಲಾಸ್ಟಿಕ್ ನ ಅಂಶಗಳು ಪಾನೀಯಗಳಿಗೆ ಸೇರಿ ಹಲವು ಆರೋಗ್ಯ ಸಮಸ್ಯೆ ಸೃಷ್ಟಿಸುತ್ತದೆ.
ಮೊದಲು ಪಾರ್ಸೆಲ್‌ ಬಳಕೆಯ ಪ್ಲಾಸ್ಟಿಕ್‌ಗೆ ನಿಷೇಧ ಇರಲಿಲ್ಲ, ಇದೀಗ ಎಲ್ಲಾ ಬಗೆಯ ಪ್ಲಾಸ್ಟಿಕ್‌ಬಳಕೆಗೂ ನಿಷೇಧ ಇರುವ ಕಾರಣ ಪುರಸಭೆ ಅಧಿಕಾರಿಗಳು ದಿನಾಲೂ ಕಸವಿಲೆವಾರಿ ವಾಹನದ ಮೂಲಕ ಪ್ಲಾಸ್ಟಿಕ್‌ ಬಳಕೆ ಬಗ್ಗೆ ಜಾಗೃತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಚಹ ಅಂಗಡಿಯವರು ಗ್ರಾಹಕರೆ ಸ್ಟೀಲ್‌ ಲೋಟ ಅಥವಾ ಪ್ಲಾಸ್ಟಿಕ್ ತರೆಬೇಕು ಇಲ್ಲವಾದರೆ ನಾವೇನು ಮಾಡೋದು ಎಂದು ತಮ್ಮ ವ್ಯಾಪಾರದ ಬಗ್ಗೆ ಚಿಂತಿಸುತ್ತಾರೆ. ಇನ್ನು ಗ್ರಾಹಕರು ಸ್ಟೀಲ್‌ ಲೋಟದಲ್ಲಿ ತಂದರೆ ತಣ್ಣಗಾಗುತ್ತದೆ, ಪ್ಲಾಸ್ಟಿಕ್ ಸುರಕ್ಷಿತವಾಗಿ ಇಡಲಾಗದು ಎಂಬ ಅಳಲು ತೋಡಿಕೊಳ್ಳುತ್ತಾರೆ.
ಬಿಸಿ ಆಹಾರ ವಸ್ತುಗಳಾಗಲಿ, ನೀರನ್ನಾಗಲಿ ಹೆಚ್ಚುಕಾಲ ಪ್ಲಾಸ್ಟಿಕ್‌ ಕವರ್‌, ಬಾಟಲಿಗಳಲ್ಲಿ ಇಟ್ಟು ಬಳಕೆ ಮಾಡುವುದರಿಂದ ಮನುಷ್ಯನ ಯಕೃತ್ತು, ಕರುಳು, ನರಕೋಶಕ್ಕೆ ಹೆಚ್ಚು ಹಾನಿಯಾಗುವ ಜೊತೆಯಲ್ಲಿ ಕ್ಯಾನ್ಸರ್‌ ಬರುವ ಸಂಭವ ಹೆಚ್ಚಿರುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ಎಚ್ಚರಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಬಗ್ಗೆ ಆಗಿದಾಗ್ಗೆ ದಾಳಿ ಮಾಡಿ ದಂಡ ವಿಧಿಸಿ ಮಳಿಗೆ ಮಾಲೀಕರಿಗೆ ನೋಟೀಸ್‌ ಜಾರಿ ಮಾಡಲಾಗಿದೆ, ಮುಖ್ಯಾಧಿಕಾರಿಗಳು, ಪುರಸಭೆ ಅಧ್ಯಕ್ಷರು, ಜನಪ್ರತಿನಿಧಿಗಳ ಗಮನಕ್ಕೆ ತಂದು ಪ್ಲಾಸ್ಟಿಕ್‌ ಸಂಗ್ರಹಣೆಯ ಮಳಿಗೆ ಮೇಲೆ ದಾಳಿ ನಡೆಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಪರಿಸರ ಅಭಿಯಂತರ ಚಂದ್ರಶೇಖರ್‌ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!