ಕರ್ನಾಟಕ ಬಂದ್ ಗೆ ಸಂಘಟನೆಗಳ ಸಿದ್ಧತೆ

109

Get real time updates directly on you device, subscribe now.

ಗುಬ್ಬಿ: ಇದೆ ತಿಂಗಳ 27 ಕರ್ನಾಟಕ ಬಂದ್‌ ಮಾಡಲು ರೈತ ಸಂಘ ಸೇರಿದಂತೆ ರಾಜ್ಯದ 41 ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಕಿಸಾನ್‌ ಮೋರ್ಚ್‌ ಭಾರತ್‌ ಬಂದ್‌ ಗೆ ಕರೆ ನೀಡಿದೆ ಅದೇ ರೀತಿಯಲ್ಲಿ ರಾಜ್ಯದಲ್ಲಿ 41 ಸಂಘಟನೆಗಳು ರೈತ ವಿರೋಧಿ, ಜನ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರಕಾರ ತಂದಿರುವ ಹಿನ್ನಲೆಯಲ್ಲಿ ಭಾರತ್‌ ಬಂದ್‌ ಮಾಡುತ್ತಿದ್ದು ಅದೇ ರೀತಿ ರಾಜ್ಯದಲ್ಲಿ ಕರ್ನಾಟಕ ಬಂದ್‌ ಮಾಡಲು ನಿರ್ಧಾರ ಮಾಡಲಾಗಿದೆ. ದೆಹಲಿಯಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದರು ಸಹ ಕೇಂದ್ರ ಸರ್ಕಾರ ಯಾವುದೇ ರೈತ ಪರವಾಗಿ ತೀರ್ಮಾನ ಮಾಡಿಲ್ಲ ಮತ್ತು ಹರಿಯಾಣದಲ್ಲಿ ರೈತರ ಮೇಲೆ ಪೊಲೀಸರು ಡಬ್ಬಾಳಿಕೆ ಮಾಡಿರುವುದು ವಿರೋಧಿಸಿ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಬಂದ್‌ ಮಾಡುತ್ತಿದ್ದು ಬಂದ್‌ ಗೆ ವಿದ್ಯಾರ್ಥಿಗಳು, ವರ್ತಕರು, ಅಂಗಡಿ ಮಾಲೀಕರು ಕೃಷಿಕರು ಎಲ್ಲಾ ವರ್ಗದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತಂದಿರುವ ಭೂ ಸುಧಾರಣಾಕಾಯ್ದೆ ,ಎಪಿಎಂಸಿ ಕಾಯ್ದೆ ,ವಿದ್ಯುತ್‌ ಕಾಯ್ದೆಗಳನ್ನು ವಿರೋಧಿಸಿ 27 ರಂದು ಬೃಹತ ಮಟ್ಟದಲ್ಲಿ ಬಂದ್‌ ಮಾಡಲು ನಮ್ಮ ಎಲ್ಲಾ ರೈತ ಸಂಘಟನೆನೆಗಳು ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಒಟ್ಟಾಗಿ ಕರ್ನಾಟಕ ಬಂದ್‌ ಮಾಡಲು ನಿರ್ಧಾರ ಮಾಡಲಾಗಿದೆ.
ಇನ್ನೂ ಜಿಲ್ಲೆಯ ಹಾಗೂ ತಾಲೂಕಿನ ಸಮಸ್ಯೆಗಳ ಬಗ್ಗೆ ಕೊಡ ಹೋರಾಟ ಮಾಡಲಾಗುತ್ತಿದೆ, ಎತ್ತಿನ ಹೊಳೆ, ಬಕರ್‌ ಹುಕ್ಕುಂ ಹಾಗೂ ಶಿರಾದ ಮೊದಲೂರು ಕೆರೆಗೆ ನೀರನ್ನು ಹರಿಸಬೇಕು, ಈ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹಾಗೂ ಮಾಜಿ ಸಚಿವ ಜಯಚಂದ್ರ ನಡುವೆ ಕೆಸರು ಎರೆಚಾಟ ಬಿಟ್ಟು ಅಲ್ಲಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂಬ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ರೈತ ಸಂಘಟನೆಗಳ ಮೇಲೆ ನಿರ್ಲಕ್ಷ ವಹಿಸುತ್ತಿರುವುದು ಸರಿಯಲ್ಲ, ಅವರು ಸಹ ಹೆಚ್ಚು ತಿಳುವಳಿಕೆ ಇರುವವರೆ, ಹಿಂದೆ ಅವರೇ ನಮ್ಮ ಜೊತೆ ಹೋರಾಟ ಮಾಡುತ್ತಿದ್ದರು, ಆದರೆ ಈಗ ನಮ್ಮ ಮೇಲೆ ವಿಶ್ವಾಸ ವಿಟ್ಟು ನಮ್ಮ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ, ಇದೆಲ್ಲ ಮುಂದುವರಿದರೆ ರೈತರು ಏನು ಎನ್ನುವುದು ಅವರಿಗೆ ತಿಳಿಸುತ್ತಾರೆ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ವೆಂಕಟೆ ಗೌಡ, ರೈತ ಸಂಘದ ಪದಾಧಿಕಾರಿಳಾದ ಗುರುಚನ್ನಬಸಪ್ಪ, ಕಾಳೇಗೌಡಕೃಷ್ಣ, ನಿಂಗಾರಾಜು, ಅಸ್ಲಾಂ ಪಾಶ, ಲಕ್ಷ್ಮಣ, ಯತೀಶ್‌, ಜಗದೀಶ್‌, ಕುಮಾರ್‌ ಸ್ವಾಮಿ, ಬಸವರಾಜು, ಅಜ್ಜಪ್ಪ , ಮಂಜುನಾಥ, ರವೀಶ್‌ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!