ಕೃಷಿ ಉಪಕರಣಗಳ ಸಬ್ಸಿಡಿ ಹಣ ನೇರ ರೈತರ ಖಾತೆಗೆ ಹಾಕ್ತೇವೆ

ಡೀಲರ್ ಗಳಿಗೆ ಬಿಲ್ ನ ಅಧಿಕಾರ ನೀಡಿ: ಮಂಜುನಾಥ್

418

Get real time updates directly on you device, subscribe now.

ತುಮಕೂರು: ಹನಿ, ತುಂತುರು ನೀರಾವರಿ ಮತ್ತು ತಾಂತ್ರಿಕ ಕೃಷಿ ಉಪಕರಣಗಳ ಸಬ್ಸಿಡಿ ಹಣ ನೇರವಾಗಿ ರೈತರ ಖಾತೆಗೆ ತಲುಪಲು ಡೀಲರ್ ಗಳಿಗೆ ಬಿಲ್ಲಿನ ಅಧಿಕಾರ ಕೊಡಬೇಕೆಂದು ಜಿಲ್ಲಾ ಕಲ್ಪತರು ಹನಿ, ತುಂತುರು ನೀರಾವರಿ ಮತ್ತು ತಾಂತ್ರಿಕ ಕೃಷಿ ಉಪಕರಣಗಳ ವಿತರಕರ ಸಂಘದ ಅಧ್ಯಕ್ಷ ಮಂಜುನಾಥ್‌ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಜಿಲ್ಲಾ ಕಲ್ಪತರು ಹನಿ, ತುಂತುರು ನೀರಾವರಿ ಮತ್ತು ತಾಂತ್ರಿಕ ಕೃಷಿ ಉಪಕರಣಗಳ ವಿತರಕರ ಸಂಘ ವತಿಯಿಂದ ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಹನಿ, ತುಂತುರು ನೀರಾವರಿ ಮತ್ತು ತಾಂತ್ರಿಕ ಕೃಷಿ ಉಪಕರಣಗಳನ್ನು ಡೀಲರ್‌ ಬಿಲ್ಲು ಮಾಡುವ ಮೂಲಕ ರೈತರ ಖಾತೆಗೆ ನೇರವಾಗಿ ಸರ್ಕಾರದ ಸಹಾಯಧನ ವರ್ಗಾವಣೆಯಾಗುತ್ತಿತ್ತು, ಆದರೆ ಈಗ ಕಂಪನಿಗಳಿಗೆ ಬಿಲ್ಲು ಮಾಡುವ ಅಧಿಕಾರ ಕೊಟ್ಟಿರುವುದರಿಂದ ರೈತರ ಖಾತೆಗೆ ಸಹಾಯಧನ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಈಗಿರುವ ವ್ಯವಸ್ಥೆ ಸರಳೀಕರಣಗೊಳಿಸಿ ರೈತರು ಕಂಪನಿ ಮತ್ತು ಸರ್ಕಾರಿ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸುವ ಅಗತ್ಯವಿದೆ, ರೈತರ ಮಕ್ಕಳೇ ಡೀಲರ್ ಗಳಾಗಿ ವ್ಯವಹಾರ ಮತ್ತು ಸೇವೆ ಮಾಡಿಕೊಂಡು ಸುಮಾರು 30 ವರ್ಷಗಳಿಂದ ಜೀವನ ನಡೆಸುತ್ತಿದ್ದೆವು, ಈಗ ಕಂಪನಿಯವರು ಮತ್ತು ಸರ್ಕಾರ ಸೇರಿ ಮಾಡಿರುವ ಕಾನೂನಿನ ವ್ಯವಸ್ಥೆಯಲ್ಲಿ ಜಿಲ್ಲೆಯೊಂದರಲ್ಲೇ ಸುಮಾರು 300 ಕುಟುಂಬ ಬೀದಿಪಾಲಾಗಿವೆ ಎಂದರು.
ಪ್ರಸ್ತುತ ರೈತರಿಗೆ ಯಾವುದೇ ಸೇವಾ ಸೌಲಭ್ಯಗಳನ್ನು ಕಂಪನಿಯವರು ಒದಗಿಸುತ್ತಿಲ್ಲ, ಹಿಂದಿನ ಹಾಗೆ ನಮ್ಮ ಬಳಿ ರೈತರು ಬಂದು ಅವರ ಸಮಸ್ಯೆ ಹೇಳಿಕೊಳ್ಳುತ್ತಾರೆ. ನಮಗೆ ಯಾವುದೇ ಅಸ್ಥಿತ್ವ ಮತ್ತು ಪರವಾನಗಿ ಇಲ್ಲದಿರುವುದರಿಂದ ನಾವು ಅಸಹಾಯಕರಾಗಿದ್ದೇವೆ. ರೈತರಿಗೆ ಕಂಪನಿಯವರು ಹಾಗೂ ಇಲಾಖೆಯವರ ನಿರ್ಲಕ್ಷ್ಯದಿಂದ ರೈತ ಇನ್ನೂ ಶೋಷಿತನಾಗುತ್ತಿದ್ದಾನೆ. ಕಂಪನಿ ಬಿಲ್ಲಿನಿಂದ ಯಾವುದೇ ಉಪಯೋಗವಾಗುತ್ತಿಲ್ಲ ಹಾಗೂ ಯಾವುದೇ ಕಂಪನಿಯವರು ಇದುವರೆಗೂ ರೈತರಿಗೆ ತಾಕಿಗೆ ಬಂಡವಾಳ ಹಾಕುತ್ತಿಲ್ಲ ಎಂದು ಹೇಳಿದರು.
ಕಂಪನಿಯವರು ಪ್ರತಿ ಜಿಲ್ಲೆಯ ರೈತರಿಗೆ ತಾಂತ್ರಿಕ ಸೇವೆ ಒದಗಿಸುತ್ತಿಲ್ಲ ಮತ್ತು ಭೇಟಿಯೂ ನೀಡುತ್ತಿಲ್ಲ, ಸರ್ಕಾರ ಮಾಡಿರುವ ಕಾನೂನಿನಲ್ಲಿ 5 ಎಕರೆಯವರೆಗೆ ಮಾತ್ರ ಶೇ.90 ರಷ್ಟು ಸಬ್ಸಿಡಿ ಕೊಡಬೇಕು, ಉಳಿದ ಎಕರೆಗೆ ಶೇ.45 ರಷ್ಟು ಮಾಡಿದ್ದಾರೆ, ಇದರಿಂದ ಸಣ್ಣ ಹಿಡುವಳಿದಾರ ಪತ್ರ ಯಾವುದೇ ಇಲಾಖೆ ಕೊಡುತ್ತಿಲ್ಲ, ರೈತರಿಗೆ ಇದರಿಂದಲೂ ತೊಂದರೆಯಾಗುತ್ತಿದ್ದು, ಈ ಹಿಂದೆ ಇದ್ದ ಹನ್ನೆರಡುವರೆ ಎಕರೆಗೆ ಶೇ.90 ರಷ್ಟು ಸಬ್ಸಿಡಿ ಮುಂದುವರೆಸಬೇಕು, ಇಲ್ಲದಿದ್ದರೆ ರೈತರೇ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಲ್ಪತರು ಹನಿ, ತುಂತುರು ನೀರಾವರಿ ಮತ್ತು ತಾಂತ್ರಿಕ ಕೃಷಿ ಉಪಕರಣಗಳ ವಿತರಕರ ಸಂಘದ ಉಪಾಧ್ಯಕ್ಷ ಶಿವಾರೆಡ್ಡಿ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ರಾಜ್ಯಮಟ್ಟದಲ್ಲಿ ಹೋರಾಟ ಮಾಡಿ ನಮ್ಮ ಬೇಡಿಕೆಗಳ ಈಡೇರಿಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ತಿಳಿಸಿದರು.
ಜಿಲ್ಲಾ ಕಲ್ಪತರು ಹನಿ, ತುಂತುರು ನೀರಾವರಿ ಮತ್ತು ತಾಂತ್ರಿಕ ಕೃಷಿ ಉಪಕರಣಗಳ ವಿತರಕರ ಸಂಘದ ಸಹ ಕಾರ್ಯದರ್ಶಿ ಚಿದಾನಂದಮೂರ್ತಿ ಮಾತನಾಡಿ, ಕಂಪನಿ ಬಿಲ್ಲಿನಿಂದ ತುಂಬಾ ತೊಂದರೆಯಾಗುತ್ತಿದೆ. ವರ್ಕ್‌ ಆರ್ಡರ್‌ ಒಂದು ಸಲ ಬರುತ್ತದೆ. ಕಂಪನಿಯವರು ಟ್ಯಾಕ್ಸ್ ಇನ್‌ವಾಯಸ್ ಕೊಡುತ್ತಿಲ್ಲ, ಅದಕ್ಕೂ ಇದಕ್ಕೂ ಟ್ಯಾಲಿ ಆಗುತ್ತಿಲ್ಲ, ಜೊತೆಗೆ ಬಿಲ್ಲು ಕೊಡುತ್ತಿಲ್ಲ, ಇದರಿಂದ ರೈತರಿಗೆ ತೊಂದರೆಯಾಗುತ್ತಿರುವುದು. ಯಾವುದೇ ಕಂಪನಿಯವರು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ, ಕಂಟ್ಯಾಕ್ಟರ್‌ ಬೆಲೆ ಸರ್ಕಾರಕ್ಕೆ ಮತ್ತು ಕಂಪನಿಯವರಿಗೆ ಆಗಿರುತ್ತದೆ. ಡೀಲರ್‌ಗೆ ಬಿಲ್‌ ಮಾಡುತ್ತಾರೆ, ಡೀಲರ್‌ಗೆ ಮೆಟೀರಿಯಲ್‌ ಕೊಡುತ್ತಾರೆ. ಸಹಾಯಧನ ಬರಲಿಲ್ಲ ಎಂದರೆ ಡೀಲರ್‌ನ ಮೇಲೆ ಹಾಕುತ್ತಾರೆ. ಕಂಟ್ಯಾಕ್ಟರ್ ಆಗಿರುವುದು ಸರ್ಕಾರಕ್ಕೆ ಮತ್ತು ಕಂಪನಿಗೆ ಸಹಾಯಧನ ಬರಲಿಲ್ಲ ಎಂದರೆ ಡೀಲರ್‌ ಮೇಲೆ ಕೇಸು ಮಾಡುತ್ತಾರೆ. ಇದು ನಿಲ್ಲಬೇಕು, ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು, ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಕ್ಕೂ ಸಿದ್ಧರಾಗಬೇಕು ಎಂದು ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಲ್ಪತರು ಹನಿ, ತುಂತುರು ನೀರಾವರಿ ಮತ್ತು ತಾಂತ್ರಿಕ ಕೃಷಿ ಉಪಕರಣಗಳ ವಿತರಕರ ಸಂಘದ ಉಪಾಧ್ಯಕ್ಷ ಶಿವಾರೆಡ್ಡಿ, ಕಾರ್ಯದರ್ಶಿ ವಸಂತಕುಮಾರ್‌, ಸಹ ಕಾರ್ಯದರ್ಶಿ ಚಿದಾನಂದಮೂರ್ತಿ, ಖಜಾಂಚಿ ಉದಯ್ ಕುಮಾರ್‌, ನಿರ್ದೇಶಕ ಶಿವಕುಮಾರ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!