ನೀರಾವರಿ ವಿಚಾರದಲ್ಲಿ ಕುಣಿಗಲ್‌ ತಾಲ್ಲೂಕಿಗೆ ಅನ್ಯಾಯ

136

Get real time updates directly on you device, subscribe now.

ಕುಣಿಗಲ್‌: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಹಾಗೂ ಶಾಸಕ ಡಾ.ರಂಗನಾಥ್‌ ತಾಲೂಕಿಗೆ ನೀರಾವರಿ ವಿಷಯದಲ್ಲಿ ತೀವ್ರ ಅನ್ಯಾಯ ಮಾಡಿದ್ದಾರೆಂದು ಪಿಎಲ್‌ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್‌ ಹೇಳಿದರು.
ಗುರುವಾರ ತಾಲೂಕಿನ ಅರೆಪಾಳ್ಯದಲ್ಲಿ ಕಸಬಾಹೋಬಳಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಮಾರ್ಕೋನಹಳ್ಳಿ ಜಲಾಶಯಕ್ಕೆ ಸರಿಯಾದ ಪ್ರಮಾಣದ ನೀರು ನಿಗದಿ ಮಾಡದೆ ಜಲಾಶಯದಿಂದ ನಾಗಮಂಗಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಾಡುತ್ತಿರುವ ಕೈಗಾರಿಕೆ ಪ್ರದೇಶಕ್ಕೆ ನೀಡಲು, ಶ್ರೀರಂಗ ಏತ ನೀರಾವರಿ ಮೂಲಕ ಮಾಗಡಿ,ರಾಮನಗರ ಸೇರಿದಂತೆ ಇತರೆ ಕೈಗಾರಿಕೆ ಪ್ರದೇಶಕ್ಕೆ ನೀರು ನೀಡಲು ತಾಲೂಕಿನ ನೀರಿನ ಪ್ರಮಾಣ, ನೀರಾವರಿ ಪ್ರದೇಶದ ವಿಸ್ತೀರ್ಣ ಕಡಿಗೊಳಿಸಿದ್ದಾರೆ. ತಾಲೂಕಿಗೆ ನೀರಾವರಿ ಅನ್ಯಾಯವಾಗುತ್ತಿರುವ ಬಗ್ಗೆ ಧ್ವನಿ ಎತ್ತಬೇಕಾದ ಶಾಸಕರು, ಮೌನಕ್ಕೆ ಶರಣಾಗಿ ತಾಲೂಕಿನ ಜನತೆಗೆ ಅನ್ಯಾಯ ಮಾಡಿದ್ದಾರೆ. ಶಾಸಕರ ಸಂಬಂಧಿ ನೀರಾವರಿ ಸಚಿವರಾಗಿದ್ದಾಗ ತಾಲೂಕಿಗೆ ನೀರು ಹರಿಸಲಿಲ್ಲ, ಯಡಿಯೂರಪ್ಪನವರ ಸರ್ಕಾರದಲ್ಲಿ ಮೂರು ವರ್ಷದಿಂದ ತಾಲೂಕಿಗೆ ಸಮರ್ಪಕ ನೀರು ಹರಿಸಿದ್ದರೆ ತಾವು ನೀರು ಹರಿಸಿದ್ದಾಗಿ ಫೋಟೋ ಫೋಸ್‌ ಕೊಟ್ಟಿದ್ದಾರೆ. ಪಕ್ಕದ ಶಾಸಕರೊಂದಿಗೆ ಚರ್ಚಿಸಿ ಆ ಭಾಗಕ್ಕೂ, ನಮ್ಮ ತಾಲೂಕಿನ ಭಾಗಕ್ಕೂ ಬಿಜೆಪಿ ಸರ್ಕಾರ 27 ದಿನ ಸತತ ನೀರು ಹರಿಸಿದ ಪರಿಣಾಮ ಯಡಿಯೂರು, ಅಮೃತೂರು ಭಾಗದ ಕೆರೆಗಳು ತುಂಬಿವೆ.
ಆದರೆ ಶಾಸಕರು ನಾನು ಹರಿಸಿದೆ ಎಂದು ಸುಳ್ಳು ಹೇಳಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಪಂ ಅನುದಾನದಿಂದ ಆರೋಗ್ಯ ಶಿಬಿರ ಮಾಡಿ ತಮ್ಮ ಟ್ರಸ್ಟ್ ನ ಹೆಸರು ಹಾಕಿಕೊಳ್ಳುವ ಶಾಸಕರಿಗೆ ನಾಚಿಕೆಯಾಗಬೇಕು, ತಾಲೂಕಿನ ಪಿಡಿಒಗಳ ಮೇಲೆ ಸತತ ಒತ್ತಡಹಾಕಿದ ಪರಿಣಾಮ ಇಂದು ಪಿಡಿಒಗಳು ತಾಲೂಕಿನಿಂದ ಸಾಮೂಹಿಕ ವರ್ಗವಾಗಿ, ಕಾರ್ಯದರ್ಶಿಗಳು ಪಿಡಿಒಗಳಾಗಿ ಕೆಲಸ ಮಾಡುವಂತಾಗಿದೆ. ಇದು ಶಾಸಕರು, ಸಂಸದರ ಸಾಧನೆ, ಶಾಸಕರಾಗಿ ಮೂರುವರೆ ವರ್ಷ ಕಳೆದರೂ ನಾನಿನ್ನು ಕಲಿಯುತ್ತಿದ್ದೇನೆ ಎನ್ನುವ ಶಾಸಕರಿಂದ ತಾಲೂಕು 15 ವರ್ಷ ಹಿಂದಕ್ಕೆ ಹೋಗಿದೆ, ಶಾಸಕರ ವೈಫಲ್ಯಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿ ಬಿಜೆಪಿ ಸರ್ಕಾರದ ಜನಪರ ಸಾಧನೆ ಜನತೆ ಮುಂದಿಟ್ಟು ಪಕ್ಷ ಮುಂದಿನ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಲು ಶ್ರಮಿಸಬೇಕೆಂದರು.
ಜಿಪಂ ಮಾಜಿ ಸದಸ್ಯ ವೈ.ಎಚ್‌.ಹುಚ್ಚಯ್ಯ ಮಾತನಾಡಿ, ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಲ್ಲದೆ ಕಾಂಗ್ರೆಸ್‌ ಸರ್ಕಾರ ಇದ್ದಲ್ಲಿ ದೇಶ ಅರಾಜಕತೆಯತ್ತ ತೆರಳುತ್ತಿತ್ತು, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೊವಿಡ್‌ ಸಮಸ್ಯೆ ನಿವಾರಿಸಲು ಕೈಗೊಂಡ ಪರಿಣಾಮಕಾರಿ ಕ್ರಮದಿಂದ ದೇಶ ಸಮಗ್ರವಾಗಿ ಮುನ್ನಡೆಯುತ್ತಿದೆ. ರೈತರಿಗೆ ರೈತ ಸಮ್ಮಾನ್‌ ಯೋಜನೆ ಮೂಲಕ ಜಿಲ್ಲೆಯ 3.04 ಲಕ್ಷ ಜನರಿಗೆ ಕೇಂದ್ರ, ರಾಜ್ಯ ಹತ್ತು ಸಾವಿರ ರೂ.ನೀಡಿದೆ. 8 ಕೋಟಿ ಮಹಿಳೆಯರಿಗೆ ಉಜ್ವಲ ಯೋಜನೆ, ಕೊವಿಡ್‌ನಿಂದ ಬಳಲುತ್ತಿದ್ದ ಬಡ ಕುಟುಂಬಗಳಿಗೆ ಗರೀಬ್‌ ಕಲ್ಯಾಣ್‌ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಿ ಎಲ್ಲರ ಹಿತ ಕಾಪಾಡುತ್ತಿದೆ ಎಂದರು.
ತಾಲೂಕು ಅಧ್ಯಕ್ಷ ಬಲರಾಮ್‌ ಮಾತನಾಡಿದರು, ಪ್ರಮುಖರಾದ ಬಸವರಾಜು, ರವೀಂದ್ರ, ಶಂಕರ್‌, ದಿಲೀಪ್ ಗೌಡ, ದೇವರಾಜ, ಧನುಷ್ ಗಂಗಾಟ್ಕರ್‌, ರಮಾನಂದ, ರಾಜಣ್ಣ, ಪ್ರಕಾಶ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!