ಅಪಘಾತದಲ್ಲಿ ಮಹಿಳೆ ಸಾವು- ಗಾಯಾಳುಗಳಿಗೆ ಚಿಕಿತ್ಸೆ

325

Get real time updates directly on you device, subscribe now.

ತುಮಕೂರು: ದೇವರ ಹರಕೆ ತೀರಿಸಿ ಊರಿನತ್ತ ವಾಪಸ್ಸಾಗುತ್ತಿದ್ದವರು ಪ್ರಯಾಣಿಸುತ್ತಿದ್ದ ಐಷರ್‌ ಕ್ಯಾಂಟರ್‌ ವಾಹನಕ್ಕೆ ಟಿಪ್ಪರ್‌ ಅಪ್ಪಳಿಸಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು- ಹರ್ತಿಕೋಟೆ ಸಮೀಪದ ಬಾಲೇನಹಳ್ಳಿ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಕಳೆದ ರಾತ್ರಿ ನಡೆದಿದೆ.
ಶಿರಾ ತಾಲ್ಲೂಕಿನ ದ್ವಾರನಕುಂಟೆಯ ರತ್ನಮ್ಮ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು, ಐಷರ್‌ ವಾಹನ ಚಾಲಕ ಸೇರಿ ಸುಮಾರು 20ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪೈಕಿ ಚಾಲಕನ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಈ ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಹಿರಿಯೂರು, ಶಿರಾ, ತುಮಕೂರು ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಹರಕೆ ತೀರಿಸಲೆಂದು ಶಿರಾ ನಗರ, ವೀರನಗಾನಹಳ್ಳಿ, ದ್ವಾರನಕುಂಟೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿನ ಸಂಬಂಧಿಕರು ಐಷರ್‌ ಕ್ಯಾಂಟರ್‌ ವಾಹನವನ್ನು ಬಾಡಿಗೆ ಮಾಡಿಕೊಂಡು ತೆರಳಿದ್ದರು.
ಇಡೀ ದಿನ ದೇವಾಲಯಕ್ಕೆ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ರಾತ್ರಿ ಊರಿನತ್ತ ವಾಪಸ್ಸಾಗುತ್ತಿದ್ದಾಗ ಮಾರ್ಗ ಮಧ್ಯೆ ಬಾಲೇನಹಳ್ಳಿ ಗೇಟ್‌ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿದ್ದ ಜಲ್ಲಿ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್‌ ಲಾರಿ ಐಷರ್‌ ಕ್ಯಾಂಟರ್ ಗೆ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಕ್ಯಾಂಟರ್ ಗೆ ಐಷರ್‌ ಡಿಕ್ಕಿ ಹೊಡೆದ ರಭಸಕ್ಕೆ ಐಷರ್‌ ವಾಹನದಲ್ಲಿದ್ದವರ ಪೈಕಿ ಸುಮಾರು 20ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!