ದೇವರ ವಿಗ್ರಹಕ್ಕೆ ಚಪ್ಪಲಿಯಿಂದ ತುಳಿದ ಯುವಕ

ವಿಕೃತಿ ಮೆರೆದ ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹ

597

Get real time updates directly on you device, subscribe now.

ಮಧುಗಿರಿ: ತಾಲ್ಲೂಕಿನ ಕಸಬಾ ಹೋಬಳಿ ಡಿ.ವಿ.ಹಳ್ಳಿ ವ್ಯಾಪ್ತಿಯ ಬೆಟ್ಟದ ಮೇಲಿರುವ ಶ್ರೀಕೋಟೆಕಲ್ಲಪ್ಪ ದೇವಸ್ಥಾನದ ಮೂಲ ವಿಗ್ರಹಕ್ಕೆ ಯುವಕನೊಬ್ಬ ಮಂಗಳವಾರ ಬೆಳಗ್ಗೆ ಚಪ್ಪಲಿ ಕಾಲಿನಿಂದ ತುಳಿದು ವಿಕೃತವಾಗಿ ವರ್ತಿಸಿರುವುದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕಾರಣ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ದಬ್ಬೇಘಟ್ಟ ಗ್ರಾಮದ ಶ್ರೀಕಾಂತ (23) ಎಂಬ ಯುವಕ ಈ ಕೃತ್ಯ ಎಸಗಿದ್ದು ಬೆಟ್ಟದ ಮೇಲೆ ಮಂಗಳವಾರ ಬೆಳಗ್ಗೆ ತೆರಳಿ ದೇವಾಲಯದ ಒಳಗೆ ಪ್ರವೇಶಿಸಿ ಈ ಘಟನೆಯನ್ನು ಸ್ವತಃ ಚಿತ್ರೀಕರಿಸಿ ಫೇಸ್‌ ಬುಕ್‌, ವಾಟ್ಸ್ ಆಪ್‌ ಮೂಲಕ ಬಿತ್ತರಿಸಿದ್ದಾನೆ. ಇದನ್ನು ನೋಡಿದ ಭಕ್ತ ಸಮೂಹ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಮತ್ತು ಯುವಕರ ತಂಡ ಯುವಕನನ್ನು ಬೆನ್ನತ್ತಿದ್ದಾರೆ. ಆದರೆ ಆತ ತನ್ನ ಸ್ಕೂಟಿ ದ್ವಿಚಕ್ರ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ.
ಈ ಕೋಟೆಕಲ್ಲಪ್ಪ ದೇವರು ತುಂಗೋಟಿ ಗುಡಿಕಟ್ಟಿನ ಹೊಳಕಲ್ಲಿನವರ ಆರಾಧ್ಯ ದೈವ, ಸುಮಾರು 800 ವರ್ಷಗಳ ಇತಿಹಾಸವಿದೆ. ಘಟನೆ ನಂತರ ತುಂಗೋಟಿ ಗ್ರಾಮದ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನೂರಾರು ಗ್ರಾಮಸ್ಥರು ಸಭೆ ಸೇರಿ ಶ್ರೀಕೋಟೆ ಕಲ್ಲಪ್ಪ ದೇವರಿಗೆ ಭಿನ್ನವಾಗಿರುವುದರಿಂದ ಪೂಜೆ ಮಾಡುವುದು ಬೇಡ, ಯುವಕ ಸಿಕ್ಕ ನಂತರ ತೀರ್ಮಾನ ಮಾಡೋಣ ಎಂದು ತೀರ್ಮಾನಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಬೆಷನರಿ ಡಿವೈಎಸ್ಪಿ ಮಂಜುನಾಥ, ಪಿಎಸ್‌ಐ ಮಂಗಳಗೌರಮ್ಮ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಶ್ರೀಕಾಂತ್‌ ವಿಕೃತ ಮನಸ್ಥಿತಿ ಉಳ್ಳವನಾಗಿದ್ದು, ಈತ ತಂದೆ ತಾಯಿಯರಿಂದ ದೂರ ಇದ್ದಾನೆ, ಅವಿವಾಹಿತನಾಗಿದ್ದು ಪದವಿ ವ್ಯಾಸಂಗ ಮಾಡಿದ್ದಾನೆ. ಈತನ ಅಣ್ಣ ಇತ್ತೀಚೆಗೆ ಪ್ರೀತಿಸಿ ವಿವಾಹವಾಗಿದ್ದ ದಿನದಿಂದ ಈ ರೀತಿ ವರ್ತಿಸುತ್ತಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಅವರ ಮನೆ ಆಸುಪಾಸಿನಲ್ಲಿ ಮಾಡಿದರೆ ಅಡ್ಡಿ ಪಡಿಸುವುದು ಹಣದ ಕೊರತೆಯಾದರೆ ಸಿಕ್ಕಸಿಕ್ಕವರ ಮೇಲೆ ಜಗಳವಾಡೋದು ಇವನ ಪ್ರವೃತ್ತಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ದೇವರಿಗೆ ಅಪಮಾನ ಖಂಡನೀಯ
ಮಧುಗಿರಿ: ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತಹ ಸ್ಥಿತಿ ನಿರ್ಮಿಸಿರುವವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಎಸ್‌.ಆರ್‌.ರಮೇಶ ಪೊಲೀಸರಿಗೆ ದೂರು ನೀಡಿದ್ದಾರೆ.
ಮಧುಗಿರಿ ತಾಲ್ಲೂಕು ಡಿ.ವಿ.ಹಳ್ಳಿ ಗ್ರಾಪಂ ಹೊಸಹಳ್ಳಿ ಸಮೀಪದಲ್ಲಿರುವ ಪುರಾತನ ಶ್ರೀಕೋಟೆಕಲ್ಲಪ್ಪ ಸ್ವಾಮಿ ದೇವಸ್ಥಾನದ ಒಳಗೆ ಶ್ರೀಕಾಂತ್‌ ಎಂಬ ವ್ಯಕ್ತಿ ಮದ್ಯಪಾನ ಸೇವಿಸಿ ದೇವಸ್ಥಾನದ ಒಳಗೆ ನುಗ್ಗಿ ಚಪ್ಪಲಿ ಕಾಲಿನಿಂದ ದೇವರ ಮೂಲ ವಿಗ್ರಹಕ್ಕೆ ಚಪ್ಪಲಿಯಿಂದ ತುಳಿದಿದ್ದು ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ. ಹಾಗಾಗಿ ಹಿಂದುಗಳ ಧಾರ್ಮಿಕ ಭಾವನೆಗೆ ಆಚಾರ ವಿಚಾರಕ್ಕೆ ಧಕ್ಕೆ ತಂದಿರುವಂತಹ ಶ್ರೀಕಾಂತ್‌ ಎಂಬ ವ್ಯಕ್ತಿಯ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!