ವೇಶ್ಯಾವಾಟಿಕೆ ನಡೆದ ಮನೆಗೆ ಎಸ್‌ಪಿ ಭೇಟಿ- ಪರಿಶೀಲನೆ

4,786

Get real time updates directly on you device, subscribe now.

ತುಮಕೂರು: ಸೋಮವಾರ ರಾತ್ರಿ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದ ವಸತಿಗೃಹಕ್ಕೆ ಮಂಗಳವಾರ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್‌ ರಾಹುಲ್‌ ಕುಮಾರ್‌ ಶಹಾಪುರವಾಡ್‌ ಪರಿಶೀಲನೆ ನಡೆಸಿದರು.
ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿಯ ದೂರು ಹಾಗೂ ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಕ್ಯಾತ್ಸಂದ್ರದ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಕೊಲ್ಕತಾ ಮೂಲದ ಐವರು ಯುವತಿಯರನ್ನು ರಕ್ಷಿಸಿದ್ದು, ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾತ್ಸಂದ್ರದ ಸದರಿ ವಸತಿ ಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ, ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಶ್ಯಾವಾಟಿಕೆ ನಡೆಸುವವರು ಮಾಡಿರುವ ಖತರನಾಕ್‌ ಐಡಿಯಾ ಕಂಡು ಬೆಕ್ಕಸಬೆರಗಾಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಡ್ರೆಸಿಂಗ್‌ ಟೇಬಲ್ ನ ಅಡಿಯಲ್ಲಿಯೇ ಅಡುಗುತಾಣ ನಿರ್ಮಿಸಿಕೊಂಡು, ಅವಿತುಕೊಳ್ಳಲು ಅವಕಾಶ ಕಲ್ಪಿಸಿದ್ದು ಕಂಡು ಬಂದಿದೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ರಾಹುಲ್‌ ಕುಮಾರ ಶಹಾಪುರವಾಡ್‌, ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌ ಮತ್ತು ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಪಿಎಸ್‌ಐ ಅವಿನಾಶ್‌ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ವಸತಿ ಗೃಹದ ಕೆಲ ಭಾಗವನ್ನು ಒಡೆದು ಹಾಕಲಾಗಿದ್ದು, ಪಾಳುಬಿದ್ದ ಕಟ್ಟಡದಂತಿರುವುದರಿಂದ ಸಾರ್ವಜನಿಕರ ಗಮನ ಕಡಿಮೆ. ಇದನ್ನೇ ಬಂಡವಾಳ ಮಾಡಿಕೊಂಡು ಈ ರೀತಿಯ ದೃಷ್ಕೃತದಲ್ಲಿ ತೊಡಗಿರುವುದು ಕಂಡು ಬಂದಿದೆ. ಇಬ್ಬರು ಯುವಕರನ್ನು ಬಂಧಿಸಿದ್ದು, ಕೊಲ್ಕತ್ತಾ ಮೂಲದ ಐವರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ವಿವರ ನೀಡಿದರು.
ಕ್ಯಾತ್ಸಂದ್ರ ಪೊಲೀಸರಿಗಿಂತ ಮೊದಲೇ ಬೇರೆ ಬೇರೆ ಸಂಸ್ಥೆ ಮಾಹಿತಿ ದೊರೆತಿದ್ದು, ಈ ಸಂಬಂಧ ಸ್ಥಳೀಯ ಪೊಲೀಸರಿಂದ ವಿವರ ಕೇಳಲಾಗುವುದು. ನಗರದಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಎಸ್‌ಪಿ ರಾಹುಲ್‌ ಕುಮಾರ್‌ ಶಹಪೂರ್‌ವಾಡ್‌ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!