ದಾಖಲೆ ತಿದ್ದಿದ ಆರೋಪ ಸಾಬೀತು- ಶಿಕ್ಷಕ ಮನೆಗೆ

181

Get real time updates directly on you device, subscribe now.

ಮಧುಗಿರಿ: ಶಿಕ್ಷಕರೊಬ್ಬರು ರೆವೆನ್ಯೂ ಇಲಾಖೆಯ ದಾಖಲೆ ತಿದ್ದಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಲೋಕಾಯುಕ್ತರು ನೀಡಿದ ಆದೇಶದ ಮೇರೆಗೆ ಶಿಕ್ಷಕನಿಗೆ ಸರ್ಕಾರ ಕಡ್ಡಾಯ ನಿವೃತ್ತಿ ನೀಡಿ ಆದೇಶಿಸಿರುವ ಘಟನೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಗೊಲ್ಲರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.
ನೇರಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಕೆ.ಕೆಂಪಯ್ಯ ಹಾಲಿ ಮಿಡಿಗೇಶಿ ಹೋಬಳಿಯ ಗೊಲ್ಲರಹಳ್ಳಿ ಸಹಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಬುಧವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಡ್ಡಾಯ ನಿವೃತ್ತಿಗೊಳಿಸಿ ಶಾಲೆಯಿಂದ ಬಿಡುಗಡೆ ಮಾಡಿದ್ದಾರೆ.
ಶಿಕ್ಷಕರಾಗಿದ್ದ ಕೆ.ಕೆಂಪಯ್ಯನವರು ನೇರಲಕೆರೆ ಗ್ರಾಮದ ಸರ್ವೆ ನಂಬರ್ 88/3 ಗ್ರಾಮದ ಜಮೀನಿಗೆ ಸಂಬಂದಿಸಿದ ಎಂ.ಆರ್‌. ರಿಜಿಸ್ಟರ್‌ ಎಂ.ಆರ್‌.ನಂಬರ್‌ 19/1988- 89 ರಲ್ಲಿ ಬಾದಯ್ಯ ಬಿನ್‌ ಅವನಪ್ಪ ಎಂದು ಇರುವುದನ್ನು ಬಾದಯ್ಯ ಬಿನ್‌ ಮಾಸಣ್ಣ ಎಂದು ತಿದ್ದಿರುವ ಈರಣ್ಣ ಬಿನ್‌ ಅವನಪ್ಪ ಗೊಲ್ಲರಹಟ್ಟಿ ಗ್ರಾಮದವರು ತಹಶೀಲ್ದಾರರಿಗೆ ಮತ್ತು ಪೊಲೀಸರಿಗೆ ದೂರು ಸಲ್ಲಿಸಿರುತ್ತಾರೆ.
ಪ್ರಕರಣವನ್ನ ಪೊಲೀಸ್‌ ಠಾಣೆಯಲ್ಲಿ ದಾಖಲಾಯ್ತು ಹೊರತು ಶಿಕ್ಷಕ ಕೆ.ಕೆಂಪಯ್ಯನ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದ್ದಾರೆ.
ಘಟನೆಯ ವಿವರ: 2003 ರ ಎಪ್ರಿಲ್‌ 22 ರಂದು ಕೆ ಕೆಂಪಯ್ಯ ತಾಲ್ಲೂಕು ಕಚೇರಿಯ ದಾಖಲೆ ವಿಭಾಗದ ಎಫ್‌ಡಿಸಿ ಸಣ್ಣಹನುಮಯ್ಯ ನವರ ಬಳಿ ಆಗಮಿಸಿ ಸರ್ವೆ ನಂ. 88/3ಅಂದರೆ ಎಂಆರ್‌ ನಂಬರ್‌ 19/1988- 89 ರಿಜಿಸ್ಟರ್‌ ಕೇಳಿ ಪಡೆದು ಸಣ್ಣಹನುಮಯ್ಯ ಬೇರೊಂದು ಕೆಲಸದಲ್ಲಿ ನಿರತರಾಗಿದ್ದಾಗ ಎಂಆರ್‌ ರಿಜಿಸ್ಟರ್‌ ಶಿಕ್ಷಕ ತಿದ್ದಿದ್ದಾರೆ. ಇದನ್ನು ತಹಸೀಲ್ದಾರ್‌ ಮರು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿಕೆ ನೀಡಿರುತ್ತಾರೆ. ಈ ರೀತಿ ಸರ್ಕಾರ ವಹಿಯಲ್ಲಿ ತಿದ್ದುಪಡಿ ಮಾಡಿದ ಶಿಕ್ಷಕನ ದುರ್ವರ್ತನೆ, ದುರ್ನಡತೆಗೆ ಆಗಿರೋದು ಸಾಬೀತಾದ ಹಿನ್ನೆಲೆಯಲ್ಲಿ ಇದರ ಜೊತೆಗೆ ಜಮೀನನ್ನು ಖರೀದಿಸುವ ವೇಳೆ ಟ್ರೈನಿಂಗ್ ನಲ್ಲಿದ್ದೇನೆ ಎಂದು ಸುಳ್ಳು ಹೇಳಿರುವುದು ಸಾಬೀತಾದ ಹಿನ್ನಲೆಯಲ್ಲಿ ಸರ್ಕಾರದ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್‌.ಎಸ್‌.ಶಿವಕುಮಾರ್‌ ಅವರು ಕಡ್ಡಾಯ ನಿವೃತ್ತಿಗೆ ಆದೇಶಿಸಿದ್ದಾರೆ.
ಈ ಆದೇಶದನ್ವಯ ಮಧುಗಿರಿ ಬಿಇಒ ಶಾಲೆಗೆ ತೆರಳಿ ಶಿಕ್ಷಕನನ್ನು ಬುಧವಾರದಂದು ಶಾಲೆಯಿಂದ ಬಿಡುಗಡೆ ಗೊಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!