ಉತ್ಪನ್ನಗಳ ರಫ್ತಿಗೆ ಉತ್ತೇಜನ ಅಗತ್ಯ: ಲೋಕೇಶ್

160

Get real time updates directly on you device, subscribe now.

ತುಮಕೂರು: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಡೈರೆಕ್ಟರ್‌ ಜನರಲ್‌ ಆಫ್‌ ಫಾರೀನ್‌ ಟ್ರೇಡ್‌ ಮತ್ತು ಜಿಲ್ಲಾ ಕೈಗಾರಿಕಾ ಸಂಘ, ವಿಶೇಶ್ವರಯ್ಯ ವಾಣಿಜ್ಯ ಉತ್ತೇಜನ ಕೇಂದ್ರದ ಸಹಯೋಗದೊಂದಿಗೆ ರಫ್ತುದಾರರ ಸಮಾವೇಶ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ನಗರದ ಎಪಿಎಂಸಿ ಆವರಣದಲ್ಲಿರುವ ಚೇಂಬರ್‌ ಆಫ್‌ ಕಾಮರ್ಸ್‌ನ ಹಾಲ್ ನಲ್ಲಿ ಆಜಾದಿ ಕೀ ಅಮೃತ ಮಹೋತ್ಸವದ ಅಂಗವಾಗಿ ಸೆ.21ರಿಂದ 26ರ ವರೆಗೆ ದೇಶದ ಪ್ರತಿ ಜಿಲ್ಲೆಯಲ್ಲಿ ವಾಣಿಜ್ಯ ಸಪ್ತಾಹ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ರಫ್ತು ಮಾಡುತ್ತಿರುವ ಉತ್ಪನ್ನಗಳೊಂದಿಗೆ ಇನ್ನು ಹೆಚ್ಚಿನ ಉತ್ಪನ್ನಗಳನ್ನು ಬೇಡಿಕೆ ಇರುವ ದೇಶಗಳಿಗೆ ರಫ್ತು ಮಾಡಲು ಉತ್ತೇಜನ ನೀಡುವ ನಿಟ್ಟಿನಲ್ಲಿ ರಫ್ತು ಸಮಾವೇಶ ಮತ್ತು ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಟಿಡಿಸಿಸಿಐ ಅಧ್ಯಕ್ಷ ಎಂ.ಎನ್‌.ಲೋಕೇಶ್‌ ಮಾತನಾಡಿ, ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಜಿಲ್ಲೆಯಿಂದ ಈಗಾಗಲೇ ಮಲೇಷಿಯಾ, ಆಸ್ಟ್ರೇಲಿಯಾ, ಇಂಡೋನೇಷಿಯಾಗೆ ರಫ್ತು ಮಾಡಲಾಗುತ್ತಿದೆ, ಟಿಡಿಸಿಸಿಐ ನೀಡುವ ಪ್ರಮಾಣ ಪತ್ರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದ ಅವರು, ರಫ್ತು ಮಾಡುವ ಉದ್ದಿಮೆದಾರರಿಗೆ ಅಗತ್ಯ ತರಬೇತಿ ಮತ್ತು ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿರುವ ರಫ್ತುದಾರರು ರಫ್ತು ಮಾಡುವ ಮುಂಚೆ ತಿಳಿದುಕೊಳ್ಳಬೇಕಾದ ನಿಯಮಗಳು ಹಾಗೂ ವಿದೇಶಿ ವಿನಿಮಯ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು, ಐಇಸಿ ಪ್ರಮಾಣ ಪತ್ರ ಪಡೆಯಲು ಬೇಕಾದ ತಯಾರಿ, ಬ್ಯಾಂಕ್‌ ಸಾಲ ಸೇರಿದಂತೆ ರಫ್ತು ಮತ್ತು ಆಮದು ಬಗ್ಗೆ ನಿಖರವಾದ ಮಾಹಿತಿ ತಿಳಿದುಕೊಂಡು ವಹಿವಾಟು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದ ಅವರು, ಟಿಡಿಸಿಸಿಐನಿಂದ ಆಗಾಗ್ಗೆ ರಫ್ತುದಾರರಿಗೆ ತರಬೇತಿ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ.ನಾಗೇಶ್‌ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲ ಕಾರ್ಯಗಳನ್ನು ಆಜಾದಿ ಕೀ ಅಮೃತ ಮಹೋತ್ಸವದಡಿಯಲ್ಲಿ ತುಮಕೂರು ಜಿಲ್ಲೆಯಿಂದ ಯಾವೆಲ್ಲ ಉತ್ಪನ್ನಗಳನ್ನು ರಫ್ತು ಮಾಡಬಹುದು ಎನ್ನುವ ವಿಚಾರದ ಬಗ್ಗೆ ಕಾರ್ಯಾಗಾರ ಹಮ್ಮಿಕೊಂಡಿದ್ದು, ಜಿಲ್ಲೆಯ ತೆಂಗು, ಹುಣಸೆಹಣ್ಣು, ಹಣ್ಣು, ತೆಂಗು ಸಂಬಂಧಿತ ಉತ್ಪನ್ನಗಳನ್ನು ಪರ ರಾಜ್ಯ ಕಳುಹಿಸಿ ರಫ್ತು ಮಾಡಲಾಗುತ್ತಿದೆ ಎಂದರು.
ರಫ್ತು ಮತ್ತು ಆಮದು ಬಗ್ಗೆ ಕಾರ್ಯಾಗಾರದಲ್ಲಿ ಸೋಮಶೇಖರ್‌ ಮಾಹಿತಿ ನೀಡಿದರು, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸಿದ್ದೇಶ್‌ ಎ.ಸಿ, ಇಂಡಸ್ಟ್ರೀ ಕಮಿಟಿ ಅಧ್ಯಕ್ಷ ಪಿ.ಆರ್‌.ಕುರಂದವಾಡ್‌, ಉಪಾಧ್ಯಕ್ಷ ಟಿ.ಜಿ.ಗಿರೀಶ್‌, ಕಾರ್ಯದರ್ಶಿ ಟಿ.ಟಿ.ಸತ್ಯನಾರಾಯಣ್‌, ಸಹಕಾರ್ಯದರ್ಶಿ ಡಿ.ಆರ್‌.ಮಲ್ಲೇಶಯ್ಯ, ಖಜಾಂಚಿ ಜಿ.ಎಸ್‌.ಮಂಜುನಾಥ್, ಸುಜ್ಞಾನ್‌ ಹಿರೇಮಠ್‌, ಎಸ್‌.ಆರ್‌.ಪ್ರಭು, ಟಿ.ಆರ್‌.ಲೋಕೇಶ್‌, ಹೆಚ್‌.ಆರ್‌.ಚಂದ್ರಮೌಳಿ, ಟಿ.ಆರ್‌.ಆಂಜಿನಪ್ಪ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!