ಅಸ್ಪಶ್ಯತೆ ತಡೆಯುವಲ್ಲಿ ಅರ್ಚಕರ ಪಾತ್ರ ದೊಡ್ಡದು

141

Get real time updates directly on you device, subscribe now.

ಕುಣಿಗಲ್‌: ಗ್ರಾಮಾಂತರ ಪ್ರದೇಶದಲ್ಲಿ ಅಸ್ಪಶ್ಯತೆ ಆಚರಣೆ ತಡೆಯುವ ನಿಟ್ಟಿನಲ್ಲಿ ದೇವಾಲಯ ಅರ್ಚಕರ ಪಾತ್ರ ಮಹತ್ವದಾಗಿದೆ ಎಂದು ತಹಶೀಲ್ದಾರ್‌ ಮಹಾಬಲೇಶ್ವರ್‌ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ತಾಲೂಕು ಆಡಳಿತ, ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ದೇವಸ್ಥಾನದಲ್ಲಿ ಎಲ್ಲಾ ಜನಾಂಗವರಿಗೂ ಮುಕ್ತ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಅರ್ಚಕರಿಗೆ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ದೇವಾಲಯದಲ್ಲಿ ಎಲ್ಲಾ ಜನಾಂಗದವರಿಗೂ ಪ್ರವೇಶಕ್ಕೆ ಮುಕ್ತ ಅವಕಾಶ ಇದೆ. ಎಲ್ಲರೂ ಸಹ ಮುಕ್ತವಾಗಿ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳಬಹುದು. ಹಿಂದಿನಿಂದ ನಡೆದುಕೊಂಡ ಕೆಲ ಪದ್ಧತಿಗಳಿಂದ ಅಸ್ಪಶ್ಯತೆ ಆಚರಣೆ ನಡೆಯುತ್ತಿದೆ ಎಂದು ಹೇಳಲಾಗದು. ಅರ್ಚಕರು ಈ ನಿಟ್ಟಿನಲ್ಲಿ ಗ್ರಾಮಸ್ಥರಲ್ಲಿ ಅರ್ಚಕರು ಅರಿವು ಮೂಡಿಸಿ ಅಸ್ಪಶ್ಯತೆ ಆಚರಣೆಗೆ ಕಡಿವಾಣ ಹಾಕಬೇಕೆಂದರು.
ಡಿವೈಎಸ್ಪಿ ರಮೇಶ್‌ ಮಾತನಾಡಿ, ಇಂತಹ ಆಧುನಿಕ ಜಗತ್ತಿನಲ್ಲಿ ಇನ್ನು ಗ್ರಾಮಾಂತರ ಪ್ರದೇಶದಲ್ಲಿ ಅಸ್ಪಶ್ಯತೆ ಆಚರಣೆ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಷಯ, ಇಂದಿಗೂ ಗ್ರಾಮಾಂತರ ಪ್ರದೇಶದಲ್ಲಿ ಅಸ್ಪಶ್ಯತೆ ಆಚರಣೆ ನಡೆಯುತ್ತಿದೆ, ಆದರೆ ಇದರಿಂದ ಸಮಾಜದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದು ಎಲ್ಲರೂ ಅವಲೋಕಸಿಬೇಕು. ಅರ್ಚಕರು ಅಸ್ಪಶ್ಯತೆ ಆಚರಣೆಗೆ ಕಡಿವಾಣ ಹಾಕುವ ಜೊತೆಯಲ್ಲಿ ಇಂತಹ ಆಚರಣೆಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಮನಸು ಮಾಡಬೇಕು. ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು, ಯಾರಾದರೂ ಸಮಸ್ಯೆ ಉಂಟು ಮಾಡಿದಲ್ಲಿ ಇಲಾಖೆಯ ಗಮನಕ್ಕೆ ತರಬೇಕು ಎಂದರು.
ಸಭೆಯಲ್ಲಿ ಎಲ್ಲಾ ದೇವಾಲಯದಲ್ಲೂ ಸಿಸಿ ಟಿವಿ ಅಳವಡಿಸುವಂತೆ ಡಿವೈಎಸ್ಪಿ ಮನವಿ ಮಾಡಿದರೆ, ಅರ್ಚಕರು ಬಹಳಷ್ಟು ಗ್ರಾಮಾಂತರ ದೇವಾಲಯಗಳಲ್ಲಿ ಅರ್ಚಕರ ಜೀವನ ನಡೆಸಲು ಸಹ ಉತ್ಪತ್ತಿಯಾಗುತ್ತಿಲ್ಲ, ಇಂತಹ ಸಮಯದಲ್ಲಿ ಸಿಸಿ ಟಿವಿ ಎಂದರೆ ಕಷ್ಟವಾಗುತ್ತದೆ, ಸರ್ಕಾರವೆ ಭರಿಸಿದರೆ ಉತ್ತಮ ಎಂದರಲ್ಲದೆ, ಕೆಲ ದೇವಾಲಯದಲ್ಲಿ ವಿಶೇಷ ಉತ್ಸವಕ್ಕೆ ದೇವರ ವಡವೆ ತಾಲೂಕು ಖಜಾನೆಯಿಂದ ಸಾಗಿಸುವ ವೇಳೆ ಪೊಲೀಸರ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಪಾಲ್ಗೊಂಡ ಮುಖಂಡ ನಾರಾಯಣ ಮಾತನಾಡಿ, ತಾಲೂಕಿನ ಇತಿಹಾಸದಲ್ಲೆ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ನಡೆಸಯುತ್ತಿದೆ, ಇದಕ್ಕೆ ತಾಲೂಕು ಆಡಳಿತಕ್ಕೆ ಧನ್ಯವಾದ ಅರ್ಪಿಸುತ್ತೇವೆ, ದೇವಾಲಯಗಳು ಸರ್ವಧರ್ಮ ಸಾರುವ ಸಮಭಾವನೆ ಸಾರುವ ತಾಣಗಳಾಗಬೇಕು ಹೊರತು ಅಸ್ಪಶ್ಯತೆ ಆಚರಣೆಗೆ ಅವಕಾಶ ನೀಡುವ ತಾಣಗಳಾಗಬಾರದು. ಕೆಲವೆಡೆಗಳಲ್ಲಿ ನಡೆಸುವ ಅಸ್ಪಶ್ಯತೆ ಆಚರಣೆಯು ಹಿಂದು ಧರ್ಮದ ಅಂಗವೇ ಆದ ಮತ್ತೊಂದು ವರ್ಗದ ಜನಾಂಗದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂದರು.
ಮುಖಂಡ ರಾಮಚಂದ್ರಯ್ಯ ಮಾತನಾಡಿ, ಅರ್ಚಕರು ದೇವರ ಸಮಾನ, ಹೀಗಾಗಿ ಎಲ್ಲರೂ ಕಾಲಿಗೆ ಬೀಳುತ್ತಾರೆ, ಹೀಗಿರುವಾಗ ಅವರು ಜನಾಂಗದ ಆಧಾರದ ಮೇಲೆ ಭೇದ ಭಾವ ಮಾಡುವುದು ಬೇಡ, ಸಾಧ್ಯವಾದರೆ ಪ.ಜಾತಿ, ಪ.ವರ್ಗಕ್ಕೆ ಸೇರಿದ ಯುವಕನಿಗೆ ಅರ್ಚಕನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಮೂಲಕ ಸಮಾಜದಲ್ಲಿ ಅಸ್ಪಶ್ಯತೆ ಆಚರಣೆ ನಿವಾರಿಸಲು ಸಹಕಾರ ನೀಡಬೇಕೆಂದರು.
ಅರ್ಚಕರ ಸಂಘದ ಕಾರ್ಯದರ್ಶಿ ಕಾಶಿನಾಥ ಮಾತನಾಡಿ, ತಾಲೂಕಿನ ಯಾವುದೇ ದೇವಾಲಯದಲ್ಲಿ ಯಾವುದೇ ಅರ್ಚಕರು ಅಸ್ಪಶ್ಯತೆ ಆಚರಣೆಗೆ ಸಹಕಾರ ನೀಡುತ್ತಿಲ್ಲ, ಸರ್ವೇ ಜನೋ ಸುಖಿನೋಭವಂತು ಎಂಬುದು ಎಲ್ಲಾ ಅರ್ಚಕರ ಧ್ಯೇಯ ಎಂದರು. ಸಿಪಿಐಗಳಾದ ಗುರುಪ್ರಸಾದ್‌, ಡಿ.ಎಲ್‌.ರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!