ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಸೆರೆ

360

Get real time updates directly on you device, subscribe now.

ಕೊರಟಗೆರೆ: ಮಾವತ್ತೂರು ಬಸ್ ನಿಲ್ದಾಣದಲ್ಲಿ ಏಕಾಂಗಿಯಾಗಿ ನಿಂತಿದ್ದ ಅಪರಿಚಿತ ವ್ಯಕ್ತಿಯನ್ನು ಕೋಳಾಲ ಪೊಲೀಸರ ತಂಡ ವಶಕ್ಕೆ ಪಡೆದು ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸೈ ಮಹಾಲಕ್ಷ್ಮೀ ನೇತೃತ್ವದಲ್ಲಿ ವಿಚಾರಣೆ ನಡೆಸಿದಾಗ ಚಿಕ್ಕಪಾಲನಹಳ್ಳಿ ರೈತರಾದ ಉಮೇಶ್ ಮನೆಯಲ್ಲಿ 5 ಲಕ್ಷ ಮೌಲ್ಯದ ಬೆಲೆ ಬಾಳುವ ಕಳ್ಳತನದ ಪ್ರಕರಣ ವರ್ಷದ ನಂತರ ಬೆಳಕಿಗೆ ಬಂದಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಪಾಲನಹಳ್ಳಿ ಗ್ರಾಮದ ರೈತ ಉಮೇಶ್ ಎಂಬಾತನ ಮನೆಯ ಬೀಗ ಹೊಡೆದು ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ 2020ರ ಆ.28 ರಂದು ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾವತ್ತುರು ಕಳ್ಳನನ್ನು ವಿಚಾರಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಕೋಳಾಲ ಪೊಲೀಸ್ ಠಾಣೆಯ ಮುಖ್ಯಪೇದೆ ಮೋಹನಕುಮಾರ್ ಮತ್ತು ಪೇದೆ ಸೈಯದ್ ರಿಫತ್ ಅಲಿ ಮಾವತ್ತೂರು ಕಡೆ ಗಸ್ತು ತಿರುಗುತ್ತೀದ್ದಾಗ ಮಾವತ್ತೂರು ಬಸ್ ನಿಲ್ದಾಣದ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಯನ್ನು ತಪಾಸಣೆ ಮಾಡಿದಾಗ ಆತನ ಬಳಿ ಕಬ್ಬಿಣದ ರಾಡು ಸಿಕ್ಕಿದೆ. ಅನುಮಾನ ಪಟ್ಟ ಪೊಲೀಸರು ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ವರ್ಷದ ಹಿಂದಿನ ಪ್ರಕರಣದ ಆರೋಪಿ ಸಿಕ್ಕಿಬಿದ್ದಿದ್ದಾನೆ.
ದೊಡ್ಡಬಳ್ಳಾಪುರ ಪಟ್ಟಣದ ವಾಸಿಯಾದ ಆನಂದ (35) ಬಂಧಿತ ಆರೋಪಿ ಆಗಿದ್ದಾನೆ. ಈತ ತನ್ನ ಸ್ನೇಹಿತ ನೆಲಮಂಗಲದ ಶರತ್ ನ ಜೊತೆಗೊಡಿ ಚಿಕ್ಕಪಾಲನಹಳ್ಳಿ ರೈತನ ಮನೆಯಲ್ಲಿ ಕಳ್ಳತನ ಮಾಡಿರುತ್ತಾರೆ. ಈತನ ವಿರುದ್ಧ ತುಮಕೂರು ಕೆ.ಬಿ.ಕ್ರಾಸ್, ಬೆಂಗಳೂರು ನಗರ, ರಾಮನಗರ, ಮಾಗಡಿ ಠಾಣೆಯಲ್ಲಿ ದಸ್ತಗಿರಿಯಾಗಿ ಜೈಲಿಗೆ ಸೇರಿ ಬಿಡುಗಡೆ ಆಗಿದ್ದಾನೆ. ಈತನಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Get real time updates directly on you device, subscribe now.

Comments are closed.

error: Content is protected !!