ಸಿಎಂ ವಿರುದ್ಧ ಧಿಕ್ಕಾರ ಕೂಗಿ ಜೆಡಿಎಸ್‌ ಮುಖಂಡರ ಆಕ್ರೋಶ

ಮನವಿ ಸ್ವೀಕರಿಸದ ಮುಖ್ಯಮಂತ್ರಿ ಬೊಮ್ಮಾಯಿ

189

Get real time updates directly on you device, subscribe now.

ತುಮಕೂರು: ತುಮಕೂರು ಸಮೀಪದ ಹಿರೇಹಳ್ಳಿ ಬಳಿ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಘಟನೆ ನಡೆದು ತಿಂಗಳು ಕಳೆದರೂ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ, ಈ ಸಂಬಂಧ ತುಮಕೂರಿಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಜೆಡಿಎಸ್‌ ಮುಖಂಡರು ಮನವಿ ನೀಡಲು ಮುಂದಾದಾಗ ಸಿಎಂ ಮನವಿ ಸ್ವೀಕರಿಸದೆ ನಡೆದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಜೆಡಿಎಸ್‌ ಮುಖಂಡರು ಮುಂದಾದರು, ಆದರೆ ಸಿಎಂ ಮನವಿ ಸ್ವೀಕರಿಸಲಿಲ್ಲ, ಅಲ್ಲದೆ ಪೊಲೀಸರು ಮುಖಂಡರನ್ನು ತಡೆದಾಗ ವಾಗ್ವಾದ ಕೂಡ ನಡೆಸಿದರು. ಸಿಎಂ ನಡೆ ಹಾಗೂ ಪೊಲೀಸರ ವಿರುದ್ಧ ಜೆಡಿಎಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಸಿಎಂ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ಜೆಡಿಎಸ್‌ ಮುಖಂಡ ಬೆಳಗುಂಬ ವೆಂಕಟೇಶ್‌ ಮಾತನಾಡಿ, ಮಹಿಳೆಯ ಕೊಲೆಯಾಗಿ ಒಂದು ತಿಂಗಳು ಕಳೆದರೂ ಆರೋಪಿಗಳನ್ನು ಪತ್ತೆ ಮಾಡಲಾಗಿಲ್ಲ, ಅಲ್ಲದೆ ನಗರದಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಲೇ ಇವೆ, ಇವೆಲ್ಲಕ್ಕೂ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಸಿಎಂಗೆ ಮನವಿ ಸಲ್ಲಿಸಲು ಮುಂದಾದೆವು, ಆದರೆ ಸಿಎಂ ನಮ್ಮ ಮನವಿಯನ್ನೇ ಸ್ವೀಕರಿಸಲಿಲ್ಲ, ಬಿಜೆಪಿ ಸರ್ಕಾರರಿಂದ ಯಾರಿಗೂ ನ್ಯಾಯ ಸಿಗಲ್ಲ ಎಂದು ಕಿಡಿ ಕಾರಿದರು.
ವಿವಿಧ ಸಂಘನೆಗಳ ಮುಖಂಡರು ನೀಡಿದ ಮನವಿಯನ್ನು ಸಿಎಂ ಸ್ವೀಕರಿಸಿ ನಮ್ಮ ಮನವಿ ಸ್ವೀಕರಿಸದಿರಲು ಕಾರಣವೇನು, ನಾವು ಸಮಾಜದಲ್ಲಿ ಆಗುತ್ತಿರುವ ಅವಘಡಗಳಿಗೆ ಕಡಿವಾಣ ಹಾಕಿ, ಅಪರಾಧ ಕೃತ್ಯ ತಡೆಗಟ್ಟಿ ಎಂದು ಕೇಳಲು ಬಂದಿದ್ದೆವು, ಆದರೆ ಸರ್ಕಾರ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳಿಗೆ ನಮ್ಮ ಮನವಿ ಆಲಿಸುವಷ್ಟು ವ್ಯವದಾನವಿಲ್ಲ, ಈ ಬೆಜೆಪಿ ಸರ್ಕಾರದಿಂದ ನೊಂದವರಿಗೆ ನ್ಯಾಯ ಸಿಗುವ ಯಾವುದೇ ನಂಬಿಕೆ ಇಲ್ಲ, ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಬೆಳಗುಂಬ ವೆಂಕಟೇಶ್‌ ತಿಳಿಸಿದ್ದಾರೆ.
ಈ ವೇಳೆ ಪಾಲಿಕೆ ಸದಸ್ಯ ಮಂಜುನಾಥ್‌, ಮುಖಂಡರಾದ ಹಿರೇಹಳ್ಳಿ ಮಹೇಶ್‌, ಬಾಲಕೃಷ್ಣ ಇತರ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!