ಭಾರತ್‌ ಬಂದ್ ಗೆ ಕಾರ್ಮಿಕರ ಜಂಟಿ ಸಮಿತಿ ಬೆಂಬಲ

137

Get real time updates directly on you device, subscribe now.

ತುಮಕೂರು: ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ ರೈತರು ಕರೆ ನೀಡಿರುವ ಭಾರತ್‌ ಬಂದ್ ಗೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬೆಂಬಲ ನೀಡುತ್ತದೆ ಎಂದು ಸಿಐಟಿಯುನ ಸೈಯದ್‌ ಮುಜೀಬ್‌ ತಿಳಿಸಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಕೇವಲ ರೈತರ ಪ್ರಶ್ನೆಯಲ್ಲ, ಜನಸಾಮಾನ್ಯರ ಬದುಕಿನ ಪ್ರಶ್ನೆಯಾಗಿದೆ, ಹಾಗಾಗಿ ಎಲ್ಲಾ ವಲಯದ ಕಾರ್ಮಿಕರು ಬಂದ್ ಗೆ ಬೆಂಬಲಿಸಿ ಪಾಲ್ಗೊಳ್ಳಲಿದ್ದೇವೆ ಎಂದರು.
ಕಳೆದ ಹತ್ತು ತಿಂಗಳಿನಿಂದ ರೈತರು ಕೃಷಿಕರಿಗೆ ಮಾರಕವಾದ ಮೂರು ಕಾಯ್ದೆಗಳನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಸುಮಾರು ಆರು ಜನ ರೈತರು ಹುತ್ಮಾತರಾಗಿದ್ದಾರೆ, ಹೀಗಿದ್ದರು ರೈತರ ಹೋರಾಟ ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ, ಇದನ್ನು ಖಂಡಿಸಿ ಹಲವು ಹಂತದ ಹೋರಾಟ ರಾಷ್ಟ್ರದಾದ್ಯಂತ ನಡೆದಿದೆ. ಇದರ ಮುಂದುವರೆದ ಭಾಗವಾಗಿ ಸೆಪ್ಟೆಂಬರ್ 27 ರಂದು ಭಾರತ್‌ ಬಂದ್‌ಗೆ ಕರೆ ನೀಡಲಾಗಿದೆ. ಕಾರ್ಮಿಕರು ಬಂದ್ ನಲ್ಲಿ ಭಾಗವಹಿಸಲಿದ್ದೇವೆ ಎಂದರು.
ಎಐಟಿಯುಸಿಯ ಗಿರೀಶ್‌ ಮಾತನಾಡಿ, ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿರುವ ಭಾರತ ಬಂದ್‌ನ ಅಂಗವಾಗಿ ಜಿಲ್ಲಾ ಕೇಂದ್ರದ ನಾಲ್ಕು ಭಾಗದಿಂದ ಕಾರ್ಮಿಕರು ಜಾಥಾ ನಡೆಸಲಿದ್ದೇವೆ. ಕುಣಿಗಲ್‌ ರಸ್ತೆಯ ರಿಂಗ್‌ ರೋಡ್‌, ಗುಬ್ಬಿಗೇಟ್‌, ಶಿರಾಗೇಟ್‌ ಮತ್ತು ಬಟವಾಡಿಯಿಂದ ಹೊರಡುವ ಜಾಥಾಗಳು ಟೌನ್ ಹಾಲ್ ನಲ್ಲಿ ಸಮಾವೇಶಗೊಳ್ಳಲಿವೆ. ಎಲ್ಲಾ ಕಾರ್ಮಿಕರು ಇದರಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಎಐಯುಟಿಯುಸಿ ಯ ಮಂಜುಳ ಮಾತನಾಡಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯಿಂದ ರೈತರು, ಕಾರ್ಮಿಕರು, ಸ್ಕೀ ನೌಕರರು, ಗುತ್ತಿಗೆ, ಹೊರಗುತ್ತಿಗೆ ನೌಕರರು ಸಂಕಷ್ಟ ಅನುಭವಿಸುವಂತಾಗಿದೆ, ಕೊರೊನ ವಾರಿಯರ್‌ ಆಗಿ ಕೆಲಸ ಮಾಡಿದ ನೌಕರಿಗೆ ಇದುವರೆಗೂ ಪರಿಹಾರ ದೊರೆತ್ತಿಲ್ಲ, ಇಂದಿನ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ 21 ಸಾವಿರ ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿ ಈ ಹೋರಾಟದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಐಎನ್‌ ಟಿಯುಸಿಯ ನಂದನ್‌ಗೌಡ ಮಾತನಾಡಿ, ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಈ ಹೋರಾಟದಲ್ಲಿ ನಮ್ಮ ಸಂಘಟನೆ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

Get real time updates directly on you device, subscribe now.

Comments are closed.

error: Content is protected !!