ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೆ ಗಾನ ನಮನ

220

Get real time updates directly on you device, subscribe now.

ಮಧುಗಿರಿ: ತಾಲೂಕಿನ ಜನತೆ ಸಂಗೀತ ಪ್ರಿಯರು ಹಾಗೂ ಕಲಾ ರಸಿಕರಾಗಿದ್ದು ಸಂಗೀತ ಕಲೆ ಹಾಗೂ ಸಾಹಿತ್ಯಕ್ಕೆ ಯಾವುದೇ ಕೊರತೆಯಿಲ್ಲ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಕಲಾರಂಗ ಮತ್ತು ಲಾಲಿತ್ಯ ಸಂಗೀತ ಶಾಲೆ ವತಿಯಿಂದ ಆಯೋಜಿಸಿದ್ದ ಖ್ಯಾತ ಗಾಯಕ ಡಾ.ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ನೆನಪಿಗಾಗಿ ಗಾನ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಕನ್ನಡ ಭವನ ಉತ್ತಮ ಗಾಯಕರನ್ನು, ಕಲಾವಿದರನ್ನು ನಾಡಿಗೆ ನೀಡುವ ವೇದಿಕೆಯಾಗಲಿ, ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಲಿ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸವಾಗಲಿ ಎಂದ ಅವರು ಎಸ್‌ಪಿಬಿ ಅವರು ಅನೇಕ ಪ್ರಶಸ್ತಿ ಪಡೆದ್ದಿದ್ದರೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಎಂದರು.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಆಡಳಿತಾಧಿಕಾರಿ ಎಂ.ವಿ.ಪಾತರಾಜು ಮಾತನಾಡಿ, ಇಂತಹ ಸಂಸ್ಕೃತಿಯನ್ನು ಪ್ರತಿಯೊಬ್ಬ ನಾಗರಿಕರು ಉಳಿಸಿ ಬೆಳೆಸಬೇಕು, ಆಗ ಮಾತ್ರ ಕಲೆಗೆ ಬೆಲೆ ಸಿಗುತ್ತದೆ ಎಂದ ಅವರು ಶಿಕ್ಷಣ ಎಂದರೆ ಕೇವಲ ಓದುವುದಲ್ಲ, ಕ್ರೀಡೆ, ಸಂಗೀತ, ಕಲೆ ಯಾವುದೇ ರಂಗವಾದರೂ ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.
ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ಮಾತನಾಡಿ, ಸಂಗೀತ, ಚಿತ್ರಕಲೆ, ನೃತ್ಯಗಳ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಮೂಡಿಸಲು ಕಲಾ ಶಿಕ್ಷಕರನ್ನು ಶಾಲೆಗಳಲ್ಲಿ ಸರಕಾರ ನೇಮಿಸಬೇಕೆಂದು ಒತ್ತಾಯಿಸಿದ ಅವರು ಗ್ರಾಮೀಣ ಪ್ರತಿಭೆಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೃಷಿ ವಿದ್ಯಾಲಯದಲ್ಲಿ 10 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ತಾಲೂಕಿನ ಗೂಲಹಳ್ಳಿಯ ಮೋನಿಕ ಅವರನ್ನು ಸನ್ಮಾನಿಸಲಾಯಿತು.
ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಎಂ.ಎಲ್‌.ಗಂಗರಾಜು, ಎಂ.ಎಸ್‌.ಚಂದ್ರಶೇಖರ್‌ ಬಾಬು, ಸಂಗೀತ ಗಾಯಕ ನಾಗರಾಜು, ಲಾಲಿತ್ಯ ಸಂಗೀತ ಶಾಲೆಯ ಲಲಿತಾಂಬ, ಟಿ.ಲಕ್ಷ್ಮಿ ನರಸಯ್ಯ, ನರಸೇಗೌಡ, ಕಲ್ಪನಾ ಗೋವಿಂದರಾಜು, ಬಿ.ಜಿ.ಶಾಂತಮ್ಮ, ಲತಪ್ರದೀಪ್‌, ವೇದಾಂಬಿಕೆ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!