ಗುಬ್ಬಿ: ಕೇಂದ್ರ ಸರ್ಕಾರ ಮಾಡಿರುವ ಹಲವು ಕಾಯ್ದೆಗಳು ರೈತರ ವಿರುದ್ಧವಾಗಿದ್ದು ಕೃಷಿ ಮಾಡಿ ಬದುಕುತ್ತಿರುವ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಕೇಂದ್ರ ಸರ್ಕಾರ ನಮ್ಮನ್ನು ಕಡೆ ಗಣಿಸುತ್ತಿದೆ, ಇಂತಹ ಕೆಟ್ಟ ಸರ್ಕಾರವನ್ನು ನಾವು ಇದುವರೆಗೂ ನೋಡಿಲ್ಲ, ಮೂರು ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು, ಇಲ್ಲದೆ ಹೋದರೆ ಇನ್ನೂ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟಗೌಡ ತಿಳಿಸದರು.
ಅಂಗನವಾಡಿ ತಾಲ್ಲೂಕು ಅಧ್ಯಕ್ಷೆ ಅನುಸೂಯ ಮಾತನಾಡಿ, ಬಹುತೇಕ ರೈತರಿಂದ ಹಿಡಿದು ಕಾರ್ಮಿಕರು, ಅಂಗನವಾಡಿ, ಆಶಾ ಹೀಗೆ ಪ್ರತಿಯೊಬ್ಬರು ಇವರ ಆಡಳಿತದಲ್ಲಿ ಬೇಸತ್ತಿದ್ದು ಬೀದಿಗೆ ಇಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ, ಮೋದಿ ಹೇಳಿದ್ದು ಅಚ್ಛೇ ದಿನ್, ಆದರೆ ಅವರು ಕೊಟ್ಟಿದ್ದು ಕೆಟ್ಟದಿನಗಳನ್ನ, ಹಾಗಾಗಿ ಈ ಸರ್ಕಾರ ಯಾರಿಗೂ ಒಳಿತು ಮಾಡಿಲ್ಲ, ನಿಮ್ಮ ಅಧಿಕಾರ ಕೇವಲ 5 ವರ್ಷ ಅನ್ನೋದು ಮರೀಬೇಡಿ ಎಂದು ಕಿಡಿಕಾರಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು ಸಂಪೂರ್ಣವಾಗಿ ರೈತರ ವಿರೋಧವಾಗಿದೆ, ಇವುಗಳನ್ನು ಮುಂದುವರೆಸಿದರೆ ಮುಂದಿನ ದಿನದಲ್ಲಿ ರೈತರ ತಲೆದಂಡವಾಗುತ್ತದೆ, ಹಾಗಾಗಿ ಈ ಎಲ್ಲಾ ಕಾಯ್ದೆಗಳನ್ನು ವಿರೋಧಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂತಿಯ ರೈತ ಸಂಘದ ಸಂಚಾಲಕ ಅಜ್ಜಪ್ಪ, ಅಂಗನವಾಡಿ ಸಂಘದ ಕಾರ್ಯದರ್ಶಿ ಸರೋಜ, ರೈತ ಮುಖಂಡರಾದ ಜಗದೀಶ್, ಲೋಕೇಶ್, ಪ್ರಕಾಶ್, ಕಿಟ್ಟಪ್ಪ, ನಿಂಗೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಗುರು ರೇಣುಕಾರಾದ್ಯ, ಹಾಗಲವಾಡಿ ಭಾಗದ ಕೃಷ್ಣಜೆಟ್ಟಿ, ನಿಂಗರಾಜು, ರೈತ ಮಹಿಳೆ ಮಹಾದೇವಮ್ಮ, ದಲಿತ ಸಂಘಟನೆಯ ನಾಗರಾಜು ಇತರರು ಇದ್ದರು.
ರಸ್ತೆ ತಡೆದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ
Get real time updates directly on you device, subscribe now.
Comments are closed.