ಉದ್ಯೋಗ ಸೃಷ್ಟಿಗೆ ಉದ್ಯಮಶೀಲತೆ ಪೂರಕ

127

Get real time updates directly on you device, subscribe now.

ತುಮಕೂರು: ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕೇವಲ ಬೋಧನೆಯನ್ನಷ್ಟೆ ಕೇಂದ್ರೀಕರಿಸದೆ ಉದ್ಯಮಶೀಲತೆ, ವೃತ್ತಿ ಕ್ಷೇತ್ರಕ್ಕೆ ಅಗತ್ಯವಾದ ಕೌಶಲ್ಯ, ಸಂಶೋಧನಾ ಪ್ರವೃತ್ತಿಗಳಿಗೆ ಉತ್ತೇಜನ, ಅವಿಷ್ಕಾರಗಳಿಗೆ ಮನ್ನಣೆ ಕೊಟ್ಟಲ್ಲಿ ಶೈಕ್ಷಣಿಕ ಮಟ್ಟದ ಉನ್ನತಿಕರಣವಾಗಿ ಸಾಮಾಜಿಕವಾಗಿ ಉದ್ಯೋಗ ಸೃಷ್ಟಿಗೆ ಉತ್ತಮ ಅವಕಾಶವುಂಟಾಗುತ್ತದೆಯೆಂದು ಶ್ರೀದೇವಿ ಛಾರಿಟಬಲ್‌ ಟ್ರಸ್ಟ್ ನ ಮುಖ್ಯಸ್ಥ ಡಾ.ಎಂ.ಆರ್‌.ಹುಲಿನಾಯ್ಕರ್‌ ನುಡಿದರು.
ನಗರದ ಶ್ರೀದೇವಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಇನ್ನೊವೇಷನ್‌, ಇನ್‌ಕ್ಯುಬೇಷನ್‌ ಮತ್ತು ಎಂಟ್ರಪ್ರೈನರ್‌ಷಿಪ್‌ ಕೇಂದ್ರವನ್ನು ಕಾಲೇಜಿನ ಆವರಣದಲ್ಲಿ ಉದ್ಘಾಟನೆ ಮಾಡಿ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಶೋಧನೆ, ಅಭಿವೃದ್ಧಿ ಹಾಗೂ ಸ್ಪಾರ್ಟ್ ಆಪ್‌ ಕಂಪನಿಗಳು, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಹೊಸ ಅವಿಷ್ಕಾರಗಳ ಮೇಲೆ ಒತ್ತು ಕೊಟ್ಟು ಶೈಕ್ಷಣಿಕ ಪಠ್ಯಕ್ರಮಗಳನ್ನು ರೂಪಿಸಲು ದೊಡ್ಡ ಮಟ್ಟದ ಪ್ರಯತ್ನಗಳಾಗುತ್ತಿರುವುದನ್ನು ತಿಳಿಸಿ ಬೋಧಕ ವರ್ಗದವರು ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿ ಪೋಷಿಸಿ ತಾವು ಬೆಳೆಯಬೇಕೆಂದು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಐಸೆಟ್‌-ಐಲ್ಯಾಬ್‌ ಇನ್‌ಕ್ಯುಬೇಷನ್‌ ಫೌಂಡೇಷನ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ಜಾಗೀರ್‌ದಾರ್‌ ಸರ್ಕಾರದ ಉದ್ದೇಶಗಳಿಗನುಗುಣವಾಗಿ ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳಿಗೆ ಅಗತ್ಯವಾದ ನಿಧಿಯನ್ನು ಮೀಸಲಿಟ್ಟಿದ್ದು ಆರೋಗ್ಯ, ವಾಣಿಜ್ಯ, ಪರಿಸರ, ವ್ಯವಸ್ಥಾಯ, ನಿರ್ಮಾಣ, ರಕ್ಷಣೆ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಎಲ್ಲಾ ಇಂಜಿನಿಯರಿಂಗ್‌ ವಿಭಾಗಗಳ ವಿದ್ಯಾರ್ಥಿಗಳು ಏಕ ಅಥವಾ ಅಂತರ್ವಿಭಾಗೀಯ ಸಂಶೋಧನೆ ಕೈಗೊಳ್ಳಲು ವಿಫುಲ ಅವಕಾಶಗಳಿದ್ದು ಸಮರ್ಥವಾಗಿ ಬಳಸಿಕೊಳ್ಳಲು ಆಹ್ವಾನಿಸಿ ಶ್ರೀದೇವಿ ಇಂಜಿನಿಯರಿಂಗ್‌ ಕಾಲೇಜಿನೊಂದಿಗೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಮಾಡಿದರು.
ಇದೇ ಸಂದರ್ಭದಲ್ಲಿ ಐಸೆಟ್‌-ಐಲ್ಯಾಬ್‌ ಸಂಸ್ಥೆಯ ಸಂಶೋಧನಾ ನಿರ್ದೇಶಕ ಡಾ.ಸಿರಿಲ್ ಪ್ರಸನ್ನರಾಜ್‌ ಮಾತನಾಡಿ, ವಿಚಾರಗಳ ಅವಿಷ್ಕಾರ, ಪೋಷಣೆ ಮತ್ತು ತನ್ಮೂಲಕ ಉದ್ಯಮಶೀಲತೆಯನ್ನು ತಲುಪಬಹುದಾದ ಸಾಧ್ಯತೆಗಳನ್ನು ದೃಷ್ಟಾಂತ ವಿವರಣೆಯ ಮೂಲಕ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಡಾ.ರಮಣ್‌ ಎಂ.ಹುಲಿನಾಯ್ಕರ್‌, ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್‌,ಪೊ.ಡಾ.ಸಿ.ನಾಗರಾಜ್‌, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಜಿ.ಮಹೇಶ್‌ ಕುಮಾರ್‌, ಪೊ.ಬಿ.ಹೆಚ್‌.ವಾಸುದೇವಮೂರ್ತಿ, ಪೊ.ಸಿ.ವಿ.ಷಣ್ಮುಖಸ್ವಾಮಿ, ಪೊ.ಐಜಾಜ್‌ ಅಹಮದ್‌ ಷರೀಪ್‌, ಪೊ.ಜಿ.ಹೆಚ್‌. ರವಿಕುಮಾರ್‌, ಟಿ ಅಂಡ್‌ ಪಿ ವಿಭಾಗದ ಪೊ.ಅಂಜನ್‌ಮೂರ್ತಿ, ಸಿದ್ದರಬೆಟ್ಟ ರೋಟರಿ ಕ್ಲಬ್‌ನ ಅಧ್ಯಕ್ಷ ಶಿವಕುಮಾರ್‌, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!