ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಸಿಗಲಿ: ಆರ್‌.ರಾಜೇಂದ್ರ

124

Get real time updates directly on you device, subscribe now.

ಮಧುಗಿರಿ: ಓದು ವ್ಯರ್ಥವಾಗದೆ ಗ್ರಾಮೀಣ ಸೊಬಗನ್ನು ಪಸರಿಸುವ ಕಾರ್ಯ ಅವರ ಮಾರ್ಗದರ್ಶನದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪುವಂತಾಗಬೇಕು ಎಂದು ಕ್ರಿಬ್ಕೋ ನಿರ್ದೇಶಕ ಆರ್‌.ರಾಜೇಂದ್ರ ತಿಳಿಸಿದರು.
ಪಟ್ಟಣದಲ್ಲಿ ಸಾಧಕರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ವೃತ್ತಿಯಲ್ಲಿ ಭೋದಕ, ಪ್ರವೃತ್ತಿಯಲ್ಲಿ ಕೃಷಿಕ, ಚಿಂತಕ ಸ್ನೇಹಜೀವಿ ಮೇಷ್ಟ್ರು ಬಂದ್ರೇಹಳ್ಳಿ ಕುಮಾರ್‌ಗೆ ತುಮಕೂರು ವಿಶ್ವವಿದ್ಯಾಲಯ `ಗಡಿಭಾಗದ ಜನಪದೀಯಾಚರಣೆಗಳು’ ಎಂಬ ಮಹಾ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ, ಡಾ ಕುಮಾರ್‌ಗೆ ಅಭಿನಂದನೆ ಸಲ್ಲಿಸಿ ಮಾತಾನಾಡಿ, ನಿರಂತರ ಶ್ರಮ ಮತ್ತು ಸ್ಥಳ ಅಧ್ಯಯನದ ಮೂಲಕ ಈ ಪಿಎಚ್‌ಡಿ ಪದವಿ ಪಡೆದಿದ್ದ ದೊರೆತಿದ್ದು ಇವರ ಶ್ರಮ ಶ್ಲಾಘನೀಯವೆಂದರು.
ಇತ್ತೀಚೆಗೆ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಮಧುಗಿರಿ ತಾಲ್ಲೂಕಿನ ಮೋನಿಕಾ ಎಂಬ ವಿದ್ಯಾರ್ಥಿನಿ ಹತ್ತು ಚಿನ್ನದ ಪದಕಗಳನ್ನು ಪಡೆದಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದರು. ಹಿರಿಯ ಸಾಹಿತಿ ಪ್ರೊ.ಮಲನ ಮೂರ್ತಿ ಮಾತನಾಡಿ, ಗ್ರಾಮೀಣ ಪ್ರತಿಭೆಯನ್ನು ಗುರ್ತಿಸಿ ಗೌರವಿಸುವ ಸಂಪ್ರದಾಯ ಮುಂದಿನ ಪೀಳಿಗೆಗೆ ಪ್ರೋತ್ಸಾಹವಾಗಬೇಕು ಎಂದರು. ಕುಮಾರ್‌ ಅವರ ಜವಾಬ್ದಾರಿ ಹೆಚ್ಚಿದ್ದು ಇತರರಿಗೆ ಮಾದರಿ ಯಾಗಿದ್ದು ಇವರ ವಿದ್ವತ್‌ ಸಮಾಜಮುಖಿ ಕಾರ್ಯದಲ್ಲಿ ಮುಂದೆ ಉಪಯುಕ್ತವಾಗಲಿ ಎಂದು ಆಶಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪೊ.ಡಿ.ಎಸ್‌.ಮುನೀಂದ್ರ ಕುಮಾರ್‌ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಬಹಳ ಜನರ ವರ್ಷಗಳಿಂದ (ಸಂದರ್ಶಿಸಿ) ಮಾಹಿತಿ ಪಡೆದು ಉತ್ತಮವಾದ ಸಂಶೋಧನಾ ವಿಷಯವನ್ನು ಆರಿಸಿಕೊಂಡು ಪ್ರಬಂಧವನ್ನು ರಚಿಸಿ ವಿದ್ವಾಂಸರ ಮೆಚ್ಚುಗೆ ಗಳಿಸಿರುವುದು ಶ್ಲಾಘನೀಯವೆಂದರು.
ಟಿವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೊ.ಸಿ. ಕೃಷ್ಣಪ್ಪ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗೆ ಪಿಎಚ್‌ಡಿ ಗೌರವ ಸಂದಿರುವುದು ನಮಗೆಲ್ಲ ಹೆಮ್ಮೆ ತಂದಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿ ಉಪನ್ಯಾಸಕ ಡಾ.ಕುಮಾರ್‌ ನಾನು ಪಿಎಚ್‌ ಡಿ ಪದವಿ ಪಡೆಯಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೆನೆ. ನನ್ನ ತಾತ ಬಿ.ವಿ. ನಾಗರಾಜಪ್ಪನವರ ಪ್ರೇರಣೆ, ಸಿಂಡಿಕೇಟ್‌ ಮಾಜಿ ಸದಸ್ಯ ಎಂ.ಎಸ್‌.ಚಂದ್ರಶೇಖರ್‌ ಅವರ ಸಹಕಾರವನ್ನು ನಾನೆಂದಿಗೂ ಮರೆಯುವಂತಿಲ್ಲ, ಹಿರಿಯ ಸಾಹಿತಿ ಪೊ.ಮಲನ ಮೂರ್ತಿ ರವರ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮತ್ತು ಸ್ನೇಹಿತರ ಸಹಕಾರ ನೆರವಾಯಿತು.
ಡಿಸಿಸಿ ಬ್ಯಾಂಕ್‌ ನ ನಿರ್ದೇಶಕರಾದ ಬಿ.ನಾಗೇಶ್‌ ಬಾಬು, ಜಿ.ಎನ್‌.ಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಲಾಲಾಪೇಟೆ ಮಂಜುನಾಥ್‌, ಮಂಜುನಾಥಾಚಾರ್‌, ಕನ್ನಡ ಉಪನ್ಯಾಸಕ ರಾಮಚಂದ್ರಪ್ಪ, ಹಿರಿಯ ಮುಖಂಡ ಡಿ.ಹೆಚ್‌.ನಾಗರಾಜು, ಮೌಂಟ್‌ ವ್ಯೂ ಜಗದೀಶ್‌, ಯುವಮುಖಂಡ ನಾಗರ್ಜುನ, ಎಸ್‌ಡಿಕೆ ವೆಂಕಟೇಶ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!