ಮತ್ತೆ ಕುತೂಹಲ ಹೆಚ್ಚಿಸಿದ ಪಪಂ ಚುನಾವಣೆ । ಕಾಂಗ್ರೆಸ್ ಸದಸ್ಯ ಎಸ್ಕೇಪ್?

ಆಪರೇಷನ್‌ ಕಮಲದ ಶಂಕೆ

157

Get real time updates directly on you device, subscribe now.

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌ ಸದಸ್ಯ ನಾಪತ್ತೆಯಾಗಿದ್ದು ಆಪರೇಷನ್‌ ಕಮಲದ ಶಂಕೆ ವ್ಯಕ್ತವಾಗಿದೆ.
ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಪರಿಣಾಮ ಹುಳಿಯಾರು ಪಂಚಾಯ್ತಿ ಅಧ್ಯಕ್ಷರ ಚುನಾವಣೆ ದಿನಕ್ಕೊಂದು ತಿರುವು ಪಡೆಯುವ ಮೂಲಕ ಕುತೂಹಲ ಸೃಷ್ಠಿಸುತ್ತಿದೆ. ಅಲ್ಲದೆ ದಿನಕ್ಕೊಂದು ಊಹಾಪೋಹಗಳು ಹರಿದಾಡುತ್ತಿದ್ದು ಯಾವ ಪಕ್ಷ ಮೇಲುಗೈ ಸಾಧಿಸಲಿದೆ ಎಂಬುದು ಊಹಿಸಲಸಾಧ್ಯ ಎನ್ನುವಂತ್ತಾಗಿದೆ.
16 ಸಂಖ್ಯಾ ಬಲವುಳ್ಳ ಹುಳಿಯಾರು ಪಟ್ಟಣ ಪಂಚಾಯ್ತಿಯ ಗಾದಿ ಹಿಡಿಯಲು ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರ ಮತಗಳು ಸೇರಿ 10 ಮತಗಳನ್ನು ಪಡೆಯಬೇಕಿದೆ. 6 ಸದಸ್ಯ ಬಲವುಳ್ಳ ಬಿಜೆಪಿಗೆ ಈ ಮೊದಲು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಗಾದಿ ಹಿಡಿಯುವ ವಿಶ್ವಾಸ ಮನೆಮಾಡಿತ್ತು.
ನಂತರದ ಅಚ್ಚರಿ ಬೆಳವಣಿಗೆಯಲ್ಲಿ ಬಿಜೆಪಿ ಸೇರಿದ್ದ ಪಕ್ಷೇತರ ಅಭ್ಯರ್ಥಿ ಜಹೀರ್‌ಸಾಬ್‌ ಅವರು ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಗೆ ಬೆಂಬಲ ಸೂಚಿಸಿ ಅಧಿಕಾರದ ಕನಸು ಕಂಡಿದ್ದ ಬಿಜೆಪಿಗೆ ನಿರಾಸೆ ಮೂಡಿಸಿದರು. ಆದರೆ ಏ.29 ರ ಗುರುವಾರ ನಡೆಯಬೇಕಿದ್ದ ಚುನಾವಣೆ ಕೊರೊನಾ ನೆಪವೊಡ್ಡಿ ಸರ್ಕಾರ ಮುಂದೂಡಿತ್ತು. ಇದರಿಂದ ಬಿಜೆಪಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ ಕಾಂಗ್ರೆಸ್‌, ಜೆಡಿಎಸ್‌ಗೆ ನಿದ್ದೆಗೆಡುವಂತ್ತಾಗಿತ್ತು.
ಕೊರೊನಾ ಹತೋಟಿಗೆ ಬಂದ ಪರಿಣಾಮ ಅ.1 ರಂದು ಚುನಾವಣೆ ನಡೆಸಲು ವೇಳಾಪಟ್ಟಿ ಹಾಕಲಾಗಿದೆ. ಆದರೆ ಕಾಂಗ್ರೆಸ್‌ ಚಿಹ್ನೆಯಲ್ಲಿ ಗೆದ್ದಿದ್ದ ರಾಜುಬಡಗಿ ಅವರು ಸ್ವಿಚ್‌ ಆಫ್‌ ಮಾಡಿಕೊಂಡಿರುವುದು ಅಧಿಕಾರ ಹಿಡಿಯಲು ತುದಿಗಾಲಿನಲ್ಲಿ ನಿಂತಿದ್ದ ಕಾಂಗ್ರೆಸ್‌-ಜೆಡಿಎಸ್ಗೆ ತೀವ್ರ ಮುಖಭಂಗವಾಗಿದೆ.
ಇದೇ ಸಂದರ್ಭದಲ್ಲಿ ಬಿಜೆಪಿಯ ಸದಸ್ಯರೂ ಸಹ ಪ್ರವಾಸದಲ್ಲಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಿಜೆಪಿ ಪಟ್ಟಣ ಪಂಚಾಯ್ತಿಗೂ ಆಪರೇಷನ್‌ ಕಮಲ ವಿಸ್ತರಿಸಿದ್ದು ರಾಜುಬಡಗಿ ಪೋನ್‌ ಸ್ವಿಚ್‌ ಆಫ್ ಗೆ ಬಿಜೆಪಿಯ ಹಣ ಕಾರಣ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದೆ.
ರಾಜುಬಡಗಿ ಮನೆಯಲ್ಲಿ ಪ್ರಸ್ತುತ ಯಾರೊಬ್ಬರೂ ಇಲ್ಲದ ಕಾರಣ ಚುನಾವಣಾ ನೋಟಿಸ್‌ ತಹ ತಲುಪಿಸಲಾಗಿಲ್ಲ. ಹೀಗಿರುವಾಗ ಚುನಾವಣೆಯಲ್ಲಿ ರಾಜುಬಡಗಿ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ. ಇದು ಸಹಜವಾಗಿ ಬಿಜೆಪಿಗೆ ವರದಾನವಾಗಲಿದ್ದು ಬಿಜೆಪಿ ಅನಾಯಾಸವಾಗಿ ಅಧಿಕಾರ ಹಿಡಿಯಲಿದೆ.
ಆದರೆ ಹುಳಿಯಾರು ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಯಾವ ಕ್ಷಣದಲ್ಲಿ ಏನಾಗುತ್ತದೆಯೂ ಹೇಳದಾಗಿದೆ. ರಾಜುಬಡಗಿ ಚುನಾವಣೆಯಲ್ಲಿ ಭಾಗವಹಿಸಿದರೆ ಎರಡೂ ಬಣಕ್ಕೂ ಸಮಸಮ ಮತಗಳು ಚಲಾವಣೆಯಾಗಿ ಲಾಟರಿ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಬೇಕಾಗುತ್ತದೆ. ಯಾವುದಕ್ಕೂ ಅ.1 ರ ಶುಕ್ರವಾರದವರೆವಿಗೂ ಕಾದು ನೋಡಬೇಕಿದೆ.

ರಾಜು ಬಡಗಿ ಮನೆಗೆ ವಿಫ್‌ ಅಂಟಿಸಲಾಗುವುದು
ಆ.23 ರ ರಿಂದಲೂ ರಾಜು ಬಡಗಿ ಮತ್ತು ಅವರ ಪತ್ನಿ ಪೋನ್‌ ಸ್ವಿಚ್‌ ಆಫ್‌ ಆಗಿದೆ. ಹಾಗಾಗಿ ಅವರ ಮನೆಗೆ ಪಕ್ಷದ ವಿಫ್‌ ಅಂಟಿಸಿ ಬರುತ್ತೇವೆ. ಚುನಾವಣೆಗೆ ಅವರು ಭಾಗಿಯಾಗದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಂತೆ ಸದಸ್ಯತ್ವ ರದ್ದು ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು.
ವೈ.ಸಿ.ಸಿದ್ಧರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹುಳಿಯಾರು.

Get real time updates directly on you device, subscribe now.

Comments are closed.

error: Content is protected !!