ಮಧುಗಿರಿ ತಾಲ್ಲೂಕು ಬರಪೀಡಿತ ಪಟ್ಟಿಗೆ ಸೇರಿಸಿ: ಕೆ ಎನ್ ಆರ್

168

Get real time updates directly on you device, subscribe now.

ಮಧುಗಿರಿ: ರಾಜ್ಯ ಸರ್ಕಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಒತ್ತಾಯಿಸಿದ್ದಾರೆ.
ಪಟ್ಟಣದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರೋನಾ ಸಂದರ್ಭದಲ್ಲಿ ಬೆಂಗಳೂರಿನಿಂದ ಆಗಮಿಸಿದ ಬಹುತೇಕ ಯುವಕರು ಬೇಸಾಯವನ್ನು ಶ್ರದ್ಧೆಯಿಂದ ಮಾಡಿದ್ದು ಸಕಾಲದಲ್ಲಿ ಮಳೆಯಾಗದೆ ಸಂಪೂರ್ಣ ಬೆಳೆ ನೆಲಕಚ್ಚಿದವು. ಹಾಕಿದ ಬಂಡವಾಳವೂ ಹಿಂದಿರುಗದ ಚಿಂತಾಜನಕ ಪರಿಸ್ಥಿತಿ ತಲೆದೋರಿರುವುದರಿಂದ ತಕ್ಷಣವೇ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿದರು.
ಬೆಳೆ ನಷ್ಟ ಮತ್ತು ಬೆಳೆ ಪರಿಹಾರದ ಹಣವನ್ನು ಖಾಸಗಿ ಕಂಪನಿಯವರಿಗೆ ವಹಿಸುವವರು ಸರ್ಕಾರದ ಒಡೆತನದ ಇನ್ಶೂರೆನ್ಸ್ ಕಂಪನಿಗಳ ಮೂಲಕ ಹಣ ಸಂದಾಯ ಮಾಡಿ ಕೊಳ್ಳುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ತುಮಕೂರು ಜಿಲ್ಲೆಯಲ್ಲಿ ಹೋಮ್‌ ಇನ್ಸೂರೆನ್ಸ್ ಕಂಪನಿಯವರು ಹಣ ಕಟ್ಟಿಸಿಕೊಂಡಿದ್ದಾರೆ ಯಾರಿಗೂ ಮರುಪಾವತಿ ಮಾಡಿದ ಉದಾಹರಣೆಗಳಿಲ್ಲವೆಂದರು. ಇದೇ ರೀತಿ ಗುಜರಾತಿನ ಖಾಸಗಿ ಇನ್ಸೂರೆನ್ಸ್ ಕಂಪೆನಿ ರೈತರಿಂದ ಸುಮಾರು 2 ಸಾವಿರ ಕೋಟಿ ರೂ ಇನ್ಶೂರೆನ್ಸ್ ಹಣ ಕಟ್ಟಿಸಿಕೊಂಡು ಹೋಗಿರೋದನ್ನು ನೋಡಬಹುದಾಗಿದೆ ಎಂದರು. ಕ್ರಿಯಾಯೋಜನೆ ತಾಲ್ಲೂಕಿನಲ್ಲಿ ಇತ್ತೀಚೆಗೆ ಪೋಲನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿರುವ ಬಗ್ಗೆ ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಿದರು. ಮುಂದಿನ ದಿನಮಾನಗಳಲ್ಲಿ ಮಳೆ ಇದೇ ರೀತಿ ಮುಂದುವರೆದರೆ ಸಂಬಂಧಪಟ್ಟ ಪಿಡಿಓಗಳು ಇಲಾಖೆ ಅಧಿಕಾರಿಗಳು ಸರಕಾರಕ್ಕೆ ಶೀಘ್ರ ಕ್ರಿಯಾಯೋಜನೆ ಸಲ್ಲಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಅಭಿನಂದನೆ: ಕೃಷಿ ವಿವಿಯಲ್ಲಿ ತಾಲ್ಲೂಕಿನ ಸಾಧಕಿ ಮೋನಿಕಾ ರವರು ಹತ್ತು ಚಿನ್ನದ ಪದಕಗಳನ್ನು ಪಡೆದಿದ್ದು ಇವರು ರೋಲ್‌ ಮಾಡೆಲ್‌ ಆಗಿದ್ದಾರೆ. ಈಕೆಗೆ ಶಿಕ್ಷಣ ಕೊಡಿಸಿದ ಪೋಷಕರಿಗೂ ಅಭಿನಂದಿಸುತ್ತೇನೆ ಪುಟ್ಟ ಗ್ರಾಮದಿಂದ ಬಂದಂಥ ಈಕೆಯ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!