ಸುರೇಶ್ ಗೌಡ್ರು ರಾಜೀನಾಮೆ ಹಿಂದೆ ಷಡ್ಯಂತ್ರವಿಲ್ಲ

289

Get real time updates directly on you device, subscribe now.

ಗುಬ್ಬಿ: ಸಿಎಸ್ ಪುರ ಭಾಗದ ಜನರು ನನಗೆ ಅತಿ ಹೆಚ್ಚು ಮತವನ್ನು ನೀಡಿ ನನ್ನನ್ನು ಗೆಲ್ಲಿಸಿದ್ದಾರೆ ಹಾಗಾಗಿ ಅವರ ಋಣವನ್ನು ತೀರಿಸಲು ಈ ಭಾಗಕ್ಕೆ ಅತ್ಯಂತ ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲ ಜಯರಾಮ್‌ ತಿಳಿಸಿದರು.
ಗುಬ್ಬಿ ತಾಲೂಕಿನ ತುರುವೇಕೆರೆ ಕ್ಷೇತ್ರ ವ್ಯಾಪ್ತಿಯ ಸಿ.ಎಸ್‌.ಪುರ ಹೋಬಳಿ ಕೆಂಚನಹಳ್ಳಿ ಗ್ರಾಮದ ಕೆರೆಗೆ ಗಂಗಾ ಪೂಜೆ ಮಾಡಿ ಬಾಗಿನ ಅರ್ಪಿಸಿ
ಮಾತನಾಡಿ, ಈ ಭಾಗಕ್ಕೆ ಅವಶ್ಯಕತೆ ಇರುವಂತಹ ರಸ್ತೆ ಕಾಮಗಾರಿ, ಸಿಸಿ ರಸ್ತೆ ಹಾಗೂ ಪ್ರತಿಯೊಂದು ಕೆರೆಗಳನ್ನು ಕೂಡ ಹೇಮಾವತಿ ನೀರಿನಿಂದ ತುಂಬಿಸುವ ಕೆಲಸವನ್ನು ಮಾಡುತ್ತಿದ್ದೇನೆ ಸುಮಾರು ಇಪ್ಪತ್ತು ವರ್ಷದಿಂದ ಈ ಭಾಗದ ಕೆಂಚನಹಳ್ಳಿ ಗ್ರಾಮದ ಕೆರೆ ತುಂಬಿಸಲು ಸಾಧ್ಯವಾಗಿರಲಿಲ್ಲ ಆದರೆ ಈ ಬಾರಿ ಕೆರೆ ತುಂಬಿಸಿ ಬಾಗಿನ ಅರ್ಪಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದರು.
ಇನ್ನೂ ನಲವತ್ತು ಲಕ್ಷದ ಕಾಮಗಾರಿ ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ನಡೆಯುತ್ತದೆ ಎಂದ ಅವರು ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸುರೇಶ್‌ ಗೌಡರು ರಾಜೀನಾಮೆ ನೀಡಿರುವುದು ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಸಂಘಟನೆ ಮಾಡಬೇಕು ಎಂಬ ದೃಷ್ಟಿಯಿಂದ ಮಾತ್ರ. ಅವರ ಕಾಲದಲ್ಲಿ ಶಿರಾ ವಿಧಾನ ಸಭೆ, ಚುನಾವಣೆ, ಎಂಪಿ ಚುನಾವಣೆಯಲ್ಲಿ ಗೆಲುವು ಪಡೆದಿದ್ದು ಮುಂದೆಯೂ ಸಹ ಅವರು ನಮ್ಮ ಜೊತೆ ಇರುತ್ತಾರೆ ಬೇರೆ ಯಾವುದೇ ಪಕ್ಷಕ್ಕೆ ಸಹ ಹೋಗುವುದಿಲ್ಲ ನಮ್ಮಲ್ಲಿ ಯಾವುದೇ ಬಣ ರಾಜಕೀಯವಿಲ್ಲ, ನಾವೆಲ್ಲ ಒಟ್ಟಾಗಿ ಇದ್ದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದೇವೆ.
ನಮ್ಮ ಪಕ್ಷದಿಂದ ಯಾರೂ ಸಹ ಕಾಂಗ್ರೆಸ್‌ ನತ್ತ ಮುಖ ಮಾಡಿಲ್ಲ ಆದರೆ ಕಾಂಗ್ರೆಸ್‌ ಪಕ್ಷದಿಂದಲೇ ರಾಜ್ಯದ ಇಪ್ಪತ್ತು ಶಾಸಕರು ನಮ್ಮ ಪಕ್ಷಕ್ಕೆ ಆಗಮಿಸುತ್ತಿದ್ದು ರಾಜ್ಯಾಧ್ಯಕ್ಷ ಕಟಿಲ್‌ ಅವರೇ ಅವರ ಹೆಸರುಗಳನ್ನು ಬಿಡುಗಡೆ ಮಾಡುತ್ತಾರೆ.
ಇನ್ನು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಗೆದ್ದಿದ್ದ ಗಾಯತ್ರಿ ನಾಗರಾಜು ನಮ್ಮ ಪಕ್ಷವನ್ನು ಬಿಟ್ಟು ಹೋಗಿಲ್ಲ ಜೆಡಿಎಸ್‌ ಪಕ್ಷಕ್ಕೆ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಹೋಗುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅವರು ಈ ಭಾಗದ ಮಗನಾಗಿ ಕೆಲಸ ಮಾಡುತ್ತಿದ್ದು ಅವರನ್ನು ಬಿಟ್ಟುಕೊಡಲು ನಾವು ಸಹ ಸಿದ್ಧರಿಲ್ಲ ಎಂದು ತಿಳಿಸಿದರು .
ಇದೆ ಸಂದರ್ಭದಲ್ಲಿ ಸಿ.ಎಸ್‌.ಪುರ ಗ್ರಾಮ ಪಂಚಾಯತಿಯ ಅಧ್ಯಕ್ಷ ಕೆಂಪರಾಜು, ಸದಸ್ಯ ಚಿದಾನಂದ, ಮುಖಂಡರಾದ ಮದುವೆಮನೆ ಕುಮಾರ್‌, ವಸಂತಕುಮಾರ್‌, ವಿಶ್ವನಾಥ್‌, ಸದಾಶಿವ, ಕಲ್ಲೂರು ಸುರೇಶ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!