ಐಟಿಐ ವಿದ್ಯಾರ್ಥಿಗಳಿಗೆ ತರಬೇತಿ ಅತಿಮುಖ್ಯ: ಕೆಂಪಯ್ಯ

152

Get real time updates directly on you device, subscribe now.

ತುಮಕೂರು: ಐಟಿಐ ಪಾಸಾದ ವಿದ್ಯಾರ್ಥಿಗಳು ಉನ್ನತ ಕೈಗಾರಿಕಾ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಲು ಕಾಲೇಜು ಶಿಕ್ಷಣದ ಜೊತೆಗೆ ಅಪ್ರೆಂಟಿಸ್‌ ತರಬೇತಿ ಸಹ ಅತಿ ಮುಖ್ಯ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಉಪ ನಿರ್ದೇಶಕ ಟಿ.ಕೆ.ಕೆಂಪಯ್ಯ ತಿಳಿಸಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ನಗರದ ಸಿಎಸ್‌ಐವಿಸಿ ಐಟಿಐ ಕಾಲೇಜು ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್‌ ಮೇಳ ಉದ್ಘಾಟಿಸಿ ಮಾತನಾಡಿ, ಕೈಗಾರಿಕಾ ತರಬೇತಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ಉದ್ಯೊಗ ಕಲ್ಪಿಸುವ ಸಲುವಾಗಿ ಈ ಮೇಳ ಆಯೋಜಿಸಲಾಗಿದೆ ಎಂದರು.
ಐಟಿಐ ಪಾಸಾದವರು ತಮಗೆ ಬೇಕಾದ ಕೈಗಾರಿಕಾ ಉದ್ದಿಮೆಗಳನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಕೈಗಾರಿಕೆಗಳು ತಮಗೆ ಬೇಕಾದ ತರಬೇತಿದಾರರನ್ನು ಅರ್ಹತೆಗನುಸಾರ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಒಂದೇ ಸೂರಿನಡಿ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ನಂತರ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕ ಬಾಲಕೃಷ್ಣ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಐಟಿಐ ಎಂಬ ಪರಿಕಲ್ಪನೆ ಇಂದು ದೇಶಾದ್ಯಂತ ಬೃಹತ್‌ ಕೈಗಾರಿಕಾ ತರಬೇತಿ ಸಂಸ್ಥೆಯಾಗಿ ಬೆಳೆದಿದೆ. 1961ರಲ್ಲಿ ಜಾರಿಗೊಳಿಸಲಾದ ಕಂಪಲ್ಸರಿ ಅಪ್ರೆಂಟಿಸ್ ಆಕ್ಟ್ ನಡಿ ತರಬೇತಿಯಲ್ಲಿರುವ ವಿದ್ಯಾರ್ಥಿಗಳಿಗೆ ಆರಂಭಿಕ ಶಿಕ್ಷಣದ ಜೊತೆಗೆ ಕೈಗಾರಿಕಾ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಕೌಶಲ್ಯದ ತರಬೇತಿ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಂ.ಎನ್‌. ರೇಣುಕಾರಾಧ್ಯ, ಫಾದರ್‌ ಮನೋಜ್‌ ಕುಮಾರ್‌ ರೆವರೆಂಡ್‌, ಸಿಎಸ್‌ಐವಿಸಿ ಅಧೀಕ್ಷಕ ಪ್ರಸಾದ್‌, ಪ್ರಧಾನ ಪ್ರಾಚಾರ್ಯ ದೊಡ್ಡೇಗೌಡ, ಮಧುಗಿರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪಾಚಾರ್ಯರಾದ ರೂಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!