ಮಾನಸಿಕ ಅಸ್ವಸ್ಥನಿಗೆ ನಿಮಾನ್ಸ್ ನಲ್ಲಿ ಚಿಕಿತ್ಸೆ

397

Get real time updates directly on you device, subscribe now.

ಕುಣಿಗಲ್‌: ಮೂರು ವರ್ಷಗಳಿಂದ ಹೀನಾಯ ಸ್ಥಿತಿಯಲ್ಲಿದ್ದ ಮಾನಸಿಕ ಅಸ್ವಸ್ಥನನ್ನು ತಹಶೀಲ್ದಾರ್‌ ಮಹಾಬಲೇಶ್ವರ್‌ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು, ಗ್ರಾಮಸ್ಥರ ಸಹಕಾರದಿಂದ ಸೋಮವಾರ ರಕ್ಷಿಸಿ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಲೂಕಿನ ಹುತ್ರಿದುರ್ಗಹೋಬಳಿಯ ಯಲಗಲವಾಡಿ ಗ್ರಾಮದಲ್ಲಿ ನವೀನ್ ಕುಮಾರ್‌ (26)ಎಂಬಾತನನ್ನು ಆಸ್ತಿ ವಿಷಯವಾಗಿ ಉಂಟಾದ ವೈಮನಸ್ಯದಿಂದ ಝರ್ಜಿತನಾಗಿ ಮಾನಸಿಕ ಅಸ್ವಸ್ಥನಾದನು, ವೃದ್ಧೆ ತಾಯಿ ಸರಿಯಾಗಿ ಆರೈಕೆ ಮಾಡಲಾಗದ ಕಾರಣ ಮಗ ಹೀನಾಯ ಸ್ಥಿತಿಯಲ್ಲಿ ಕನಿಷ್ಟ ಸೌಕರ್ಯ ಇಲ್ಲದ ಜಾಗದಲ್ಲಿ ಮೂರು ವರ್ಷಗಳಿಂದಲೂ ನರಳುತ್ತಿದ್ದ, ಈ ಬಗ್ಗೆ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಸಿದ್ದಲಿಂಗೇಗೌಡರ ಗಮನಕ್ಕೆ ಕೆಲವರು, ಈ ಹಿನ್ನೆಲೆಯಲ್ಲಿ ಅವರು ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ದೂರು ನೀಡಿದ್ದರು, ಆದರೂ ಯಾವುದೇ ಕ್ರಮವಾಗಿರಲಿಲ್ಲ.
ಆದರೆ ಇತ್ತೀಚೆಗೆ ವಿಷಯ ನ್ಯಾಯಾಂಗ ಇಲಾಖೆಯ ಗಮನಕ್ಕೆ ಹೋದ ಹಿನ್ನೆಲೆಯಲ್ಲಿ ಎಚ್ಚೆತ್ತ ಮಾನವಹಕ್ಕುಗಳ ತಾಲೂಕು ನೋಡಲ್‌ ಅಧಿಕಾರಿಗಳು ಆದ ತಹಶೀಲ್ದಾರ್‌ ಮಹಾಬಲೇಶ್ವರ್‌, ಸೋಮವಾರ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಜಗದೀಶ್‌, ಮಾನಸಿಕ ರೋಗ ವೈದ್ಯ ಇಂದುಕುಮಾರ್‌ ಇತರರ ತಂಡದೊಂದಿಗೆ ಭೇಟಿ ನೀಡಿ ಗ್ರಾಮಸ್ಥರ ಸಹಕಾರದೊಂದಿಗೆ ಯವಕನನ್ನು ಶುಚಿಗೊಳಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!