ಪಾಲಿಕೆ ವ್ಯಾಪ್ತಿಗೆ 80 ಕೋಟಿ ತೆರಿಗೆ ಬಾಕಿ । ತೆರಿಗೆ ವಸೂಲಿಗೆ ಅಂಗಡಿಗಳ ಮೇಲೆ ದಾಳಿ

ಅಂಗಡಿ ಮಾಲೀಕರಿಗೆ ತೆರಿಗೆ ಪಾವತಿಗೆ ಸೂಚನೆ

412

Get real time updates directly on you device, subscribe now.

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1.09 ಲಕ್ಷ ಆಸ್ತಿಗಳಿದ್ದು, ಶೇ.50ರಷ್ಟು ಮಾಲೀಕರು ಸ್ವಯಂ ಘೋಷಣೆ ಮಾಡಿಕೊಂಡು ತೆರಿಗೆ ಕಟ್ಟಿದ್ದು, ತೆರಿಗೆ ಕಟ್ಟದ ಮಾಲೀಕರು ಹಾಗೂ ಅಂಗಡಿಗಳ ಮೇಲೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದಾಳಿ ನಡೆಸಿ, ತೆರಿಗೆ ಕಟ್ಟುವಂತೆ ಸೂಚಿಸಲಾಯಿತು.
ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್‌ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಕುಂಠಿತವಾಗಿರುವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಡನೆ ಮೇಯರ್‌ ಹಾಗೂ ಜನಪ್ರತಿನಿಧಿಗಳೊಂದಿಗೆ ಕಾರ್ಯಾಚರಣೆ ನಡೆಸಿ ತೆರಿಗೆ ಕಟ್ಟದ ಮೂರು ಅಂಗಡಿಗಳ ಬೀಗ ಹಾಕಲಾಗಿದೆ, ತೆರಿಗೆ ಸಂಗ್ರಹಿಸುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಕೊರೋನಾ ಹಿನ್ನೆಲೆಯಲ್ಲಿ ತೆರಿಗೆ ಕಟ್ಟಲು ವ್ಯಾಪಾರಿಗಳು ಹಾಗೂ ಮಾಲೀಕರು ಹಿಂದೇಟು ಹಾಕುತ್ತಿದ್ದರು, ಆದರೆ ಒಂದೊಂದು ಅಂಗಡಿಗಳು 5,10 ಲಕ್ಷರೂ ತೆರಿಗೆ ಉಳಿಸಿಕೊಂಡಿದ್ದು, ತೆರಿಗೆ ಕಟ್ಟದ ಮಾಲೀಕರುಗಳು ಈಗ ತೆರಿಗೆ ಕಟ್ಟಲೇಬೇಕಿದೆ, ಪಾಲಿಕೆ ಮಾನವೀಯ ನೆಲೆಯಲ್ಲಿ ಕೊರೋನಾ ಅವಧಿಯಲ್ಲಿ ತೆರಿಗೆ ವಸೂಲಾತಿ ಮಾಡಿರಲಿಲ್ಲ, ಆದರೆ 80 ಕೋಟಿ ತೆರಿಗೆ ಉಳಿದುಕೊಂಡಿರುವುದರಿಂದ ಕಾರ್ಯಾಚರಣೆ ನಡೆಸಬೇಕಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಕಟ್ಟದವರಿಗೆ ನೋಟೀಸ್‌ ನೀಡಿದ್ದರೂ ಸಹ ತೆರಿಗೆ ಪಾಲಿಸುತ್ತಿಲ್ಲ, ವಾಣಿಜ್ಯ ಪ್ರದೇಶಗಳಲ್ಲಿಯೂ ಹಣ ಪಾವತಿಸಿಲ್ಲ, ವ್ಯಾಪಾರಿಗಳ ಸಮಯ ತೆಗೆದುಕೊಂಡಿದ್ದು, ತೆರಿಗೆ ಕಟ್ಟದೇ ಇದ್ದರೆ ಕಾರ್ಪೋರೇಷನ್‌ ನಿಯಮಗಳ ಅನ್ವಯ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ತೆರಿಗೆ ವಸೂಲಾತಿ ಸಮಿತಿ ರಚಿಸಲಾಗಿದ್ದು, ಬಿಲ್‌ಕಲೆಕ್ಟರ್‌ ಮತ್ತು ಕಂದಾಯ ಅಧಿಕಾರಿಗಳು ಮನೆಮನೆ ಬಾಗಲಿಗೆ ತೆರಳಿ ಕಂದಾಯ ವಸೂಲಿ ಮಾಡಲಿದ್ದಾರೆ, ಸಾರ್ವಜನಿಕರು ಬಿಲ್‌ಕಲೆಕ್ಟರ್‌ ಮನೆ ಬಳಿಗೆ ಬಂದಾಗ ತೆರಿಗೆ ಕಟ್ಟಬಹುದಾಗಿದ್ದು, ಅದನ್ನು ಹೊರತು ಪಡಿಸಿದರೆ ತುಮಕೂರು ಒನ್‌ ಮತ್ತು ಮೊಬೈಲ್‌ ಅಪ್ಲೀಕೇಶನ್‌ ಮೂಲಕ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು, ತೆರಿಗೆ ಪಾವತಿಸದೇ ಇದ್ದರೇ ಶೇ.24ರಷ್ಟು ಸೆಸ್‌ ಹಾಕಲಾಗುವುದು ಎಂದು ತಿಳಿಸಿದರು.
ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಧರಣೇಂದ್ರಕುಮಾರ್‌ ಮಾತನಾಡಿ, ತೆರಿಗೆ ವಸೂಲಾತಿ ಆದರೆ ಪಾಲಿಕೆ ಅಭಿವೃದ್ಧಿಯಾಗಲಿದೆ, ಸರ್ಕಾರದ ಅನುದಾನದೊಂದಿಗೆ ತೆರಿಗೆ ವಸೂಲಾತಿ ಜೊತೆ ಆದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ, ತುಮಕೂರು ನಗರ ಈಗಲೂ ಗ್ರಾಮದ ಮಟ್ಟದಲ್ಲಿಯೇ ಇದ್ದು, ತೆರಿಗೆ ಕಟ್ಟದವರು ಇದನ್ನು ಎಚ್ಚರಿಕೆಯಾಗಿ ಪರಿಗಣಿಸಿ ತೆರಿಗೆ ಕಟ್ಟುವಂತೆ ಸೂಚಿಸಿದರು.
ಕಾರ್ಯಾಚರಣೆಯಲ್ಲಿ ಮೇಯರ್‌ ಬಿ.ಜಿ.ಕೃಷ್ಣಪ್ಪ, ಪಾಲಿಕೆಯ ಕಂದಾಯ, ಒಳಚರಂಡಿ ಮತ್ತು ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!