ಗುಬ್ಬಿ ಹೆಚ್‌ಎಎಲ್ ಘಟಕ ಶೀಘ್ರ ಕಾರ್ಯಾರಂಭ: ಜಿಎಸ್‌ಬಿ

241

Get real time updates directly on you device, subscribe now.

ತುಮಕೂರು: ಕೇಂದ್ರ ಸರ್ಕಾರ ಯಾವಾಗ ಹಸಿರು ನಿಶಾನೆ ನೀಡುತ್ತದೋ ಅಂದು ಗುಬ್ಬಿ ಹೆಚ್‌ಎಎಲ್‌ ಘಟಕ ಕಾರ್ಯಾರಂಭ ಮಾಡಲಿದೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್‌.ಬಸವರಾಜ್‌ ತಿಳಿಸಿದ್ದಾರೆ.
75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸಹವದ ಅಂಗವಾಗಿ ಆಗಸ್ಟ್ 15, 2022 ಭಾರತ ದೇಶದಲ್ಲಿ ಸುಮಾರು 75 ಬೃಹತ್‌ ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸಿದ್ದು ಅದರಲ್ಲಿ ಹೆಚ್‌ಎಎಲ್‌ ಘಟಕವೂ ಇದೆ ಎಂದರು.
ಆದರೂ ಬೇಡಿಕೆಗಳಿಗೆ ಅನುಗುಣವಾಗಿ ಮೊದಲೇ ಪ್ರಾರಂಭವಾದರೂ ಆಗಬಹುದು. ಕೊರೊನಾ ನಡುವೆಯೂ ಕಾಮಗಾರಿ ವೇಗದಲ್ಲಿ ನಡೆದಿದೆ. ನ್ಯಾಯಾಲಯದ ಕೇಸುಗಳಿಂದ ಆರಂಭದಲ್ಲಿ ವಿಳಂಬವಾಯಿತು. ಇನ್ನೂ ಒಂದು ಮೊಕೊದ್ದಮೆ ಬಗೆಹರಿಯಬೇಕಿದೆ.
ರಕ್ಷಣಾ ಸಚಿವ ರಾಜನಾಥ ಸಿಂಗ್‌ ರವರ ಜೊತೆಯೂ ಈಗಾಗಲೇ ಮಾತುಕತೆ ನಡೆಸಲಾಗಿದೆ. ಘಟಕವನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಭವಿಷ್ಯದಲ್ಲಿ ಯುದ್ಧ ವಿಮಾನಗಳ ಉತ್ಪಾದನೆ ಘಟಕ ಆರಂಭಿಸುವ ಉದ್ದೇಶವೂ ಇದೆ.
ಯಾವ ಜಮೀನನ್ನು ಪಡೆಯಬೇಕು ಎಂಬ ಚಿಂತನೆ ಆರಂಭವಾಗಿದೆ. ಈಗಾಗಲೇ ಬಿದರೆಹಳ್ಳ ಕಾವಲ್‌ ಜಮೀನು ಪಡೆಯುವುದಿಲ್ಲಾ ಎಂದು ಅಲ್ಲಿನ ರೈತರಿಗೆ ಮಾತು ಕೊಟ್ಟಿದ್ದೇವೆ. ಆದರೂ ಕೆಲವು ರೈತರು ಜಮೀನು ಕೊಡುವುದಾಗಿ ಹೇಳುತ್ತಿದ್ದಾರೆ. ಹೊಸ ನಿಯಮದ ಪ್ರಕಾರ ಶೇ 80 ರಷ್ಟು ರೈತರು ಒಪ್ಪಿಗೆ ನೀಡದಿದ್ದರೆ ಭೂ ಸ್ವಾಧೀನ ಮಾಡುವ ಆಗಿಲ್ಲ, ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ಜಿಲ್ಲಾಡಳಿತ ಒಂದು ನಿರ್ಧಾರ ಕೈಗೊಳ್ಳಲಿದೆ.
ಉಳಿದಂತೆ ತುರ್ತಾಗಿ ಆಗಬೇಕಿರುವ ವಿವಿಧ ಇಲಾಖೆಗಳ ಕಾಮಗಾರಿಗಳ ಬಗ್ಗೆ ಮೂಲಭೂತ ಸೌಕರ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ರವರೊಂದಿಗೆ ಹೆಚ್‌ಎಎಲ್‌ ಘಟಕದಲ್ಲಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಲಾಯಿತು.
ಇನ್ನೂ ಮುಂದೆ ಪ್ರತಿ ತಿಂಗಳು ಹೆಚ್‌ಎಎಲ್‌ ಯೋಜನೆಗಳಿಗೆ ಸಂಬಂಧಿಸಿದ ದಿಶಾ ಸಮಿತಿ ಸಭೆ ನಡೆಸಲು ಉದ್ದೇಶಿಸಲಾಗಿದೆ. ಮಾರ್ಚ್‌ 2022 ರೊಳಗೆ ವಿವಿಧ ಕಾಮಗಾರಿಗಳು ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಗಡುವಿನೊಂದಿಗೆ ಕಾಮಗಾರಿ ನಡೆಯುತ್ತಿದೆ.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್‌, ಹೆಚ್‌ಎಎಲ್‌ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!