ಕುಣಿಗಲ್‌ ಪುರಸಭೆಯಲ್ಲಿ ಇ-ಪಾವತಿ ವ್ಯವಸ್ಥೆಗೆ ಚಾಲನೆ

348

Get real time updates directly on you device, subscribe now.

ಕುಣಿಗಲ್‌: ಪುರಸಭೆಯಲ್ಲಿ ವಿವಿಧ ರೀತಿಯ ತೆರಿಗೆ, ಶುಲ್ಕ ಪಾವತಿ ಮಾಡುವ ನಿಟ್ಟಿನಲ್ಲಿ ಇ-ಪಾವತಿ ವ್ಯವಸ್ಥೆಗೆ ಶಾಸಕ ಡಾ.ರಂಗನಾಥ್‌ ಮಂಗಳವಾರ ಚಾಲನೆ ನೀಡಿದರು.
ಪುರಸಭೆ ಕಾರ್ಯಾಲಯ ಅವರಣದಲ್ಲಿ ಇ-ಪಾವತಿ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿಯೆ ಮೊದಲ ಬಾರಿಗೆ ಕುಣಿಗಲ್‌ ಪುರಸಭೆಯಲ್ಲಿ ಇ-ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ ಸಹಯೋಗದೊಂದಿಗೆ ನಾಲ್ಕು ಪಿಓಎಸ್‌ (ಪೆಮೆಂಟ್‌ ಆನ್‌ಲೈನ್‌ ಸ್ವೀಪಿಂಗ್‌) ಮೆಷಿನ್‌ ವ್ಯವಸ್ಥೆ ಮಾಡಲಾಗಿದೆ. ಪುರಸಭೆಗೆ ಪಾವತಿಸುವ ಎಲ್ಲಾ ರೀತಿಯ ತೆರಿಗೆ ಶುಲ್ಕ ವನ್ನು ಇಲ್ಲಿಯೇ ಪಾವತಿ ಮಾಡಬಹುದು, ಇದರಿಂದ ಬ್ಯಾಂಕಿಗೆ ಹೋಗಿ ಕಟ್ಟುವ ಪರಿಪಾಠ ತಪ್ಪಲಿದೆ, ಸಮಯದ ಉಳಿತಾಯವಾಗುವ ಜೊತೆಯಲ್ಲಿ ಕಾಗದದ ಉಳಿತಾಯವಾಗುವ ಮೂಲಕ ಪರಿಸರಸ್ನೇಹಿಯಾಗಿದೆ ಎಂದರು.
ಪುರಸಭೆ ಅಧ್ಯಕ್ಷ ನಾಗೇಂದ್ರ, ಮೊದಲು ಪುರಸಭೆಯಲ್ಲಿ ಚಲನ್‌ ನೀಡಿ ಬ್ಯಾಂಕಿನಲ್ಲಿ ಪಾವತಿಸಿದ ನಂತರ, ಪುರಸಭೆಗೆ ಜಮೆ ಹಾಕಿಕೊಳ್ಳುವ ವ್ಯವಸ್ಥೆ ಇತ್ತು. ಬಹಳಷ್ಟು ವಿಳಂಬದ ಜೊತೆಯಲ್ಲಿ ಕೆಲ ಒಂದು ತಾಂತ್ರಿಕ ತೊಂದರೆ ಎದುರಾಗುತ್ತಿದ್ದು, ಖಾತೆದಾರರೂ ಬ್ಯಾಂಕಿನಲ್ಲಿ ಗಂಟೆಗಟ್ಟಲೆ ಕಾಯುವ ಸ್ಥಿತಿ ಇತ್ತು. ಈಗ ಇ-ಪಾವತಿ ವ್ಯವಸ್ಥೆಯಿಂದ ಪುರಸಭೆಯಲ್ಲಿ ಎಟಿಎಂ, ಡೆಬಿಟ್‌ ಕಾರ್ಡ್‌ ಬಳಸಿ ಸುಲಭವಾಗಿ ಶುಲ್ಕ, ತೆರಿಗೆ ಪಾವತಿಸುವುದರಿಂದ ನಾಗರೀಕರಿಗೂ ತ್ವರಿತಸೇವೆ ಸಿಗಲಿದೆ ಎಂದರು.
ಉಪಾಧ್ಯಕ್ಷೆ ಮಂಜುಳಾ, ಮುಖ್ಯಾಧಿಕಾರಿ ರವಿಕುಮಾರ್‌, ಸದಸ್ಯರಾದ ರಂಗಸ್ವಾಮಿ, ಅಸ್ಮ, ಲೆಕ್ಕಾಧಿಕಾರಿ ರೂಪ,ಕಂದಾಯಾಧಿಕಾರಿ ಜಗರೆಡ್ಡಿ, ಸಿಬ್ಬಂದಿಗಳಾದ ರೇಖಾ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!