ಕುಣಿಗಲ್: ಪುರಸಭೆಯ ಉದ್ಯಾನವನಗಳ ಸಮರ್ಪಕ ನಿರ್ವಹಣೆಗೆ ಅಗ್ರಹಿಸಿ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪುರಸಭೆ ಮುಖ್ಯಾಧಿಕಾರಿ, ಪರಿಸರ ಅಭಿಯಂತರರ ಕ್ರಮ ಖಂಡಿಸಿ ಬಿಜೆಪಿ ಸದಸ್ಯರು, ಬೆಂಬಲಿಗರೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಪುರಸಭಾ ಸದಸ್ಯರಾದ ನಾಗಣ್ಣ, ಗೋಪಿ ನೇತೃತ್ವದಲ್ಲಿ ಸಂಘಟಿತರಾದ ಹಲವಾರು ಮಂದಿ ಮಂಗಳವಾರ ಪುರಸಭೆ ಅವರಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಅರಂಭಿಸಿ ಬಹುಕಾಲವಾದರೂ ಯಾರು ಬಾರದ ಕಾರಣ ಪುರಸಭೆ ಕಚೇರಿ ಬಾಗಿಲು ಮುಚ್ಚಿ ಧರಣಿ ಕುಳಿತರು. ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ರವಿಕುಮಾರ್, ಕಚೇರಿ ಬಾಗಿಲು ಮುಚ್ಚಿದವರ ಬಗ್ಗೆ ಅಸಂಬದ್ಧ ಪದ ಬಳಸಿದ್ದರೆಂದು ಅರೋಪಿಸಿ ಧರಣಿನಿರತರು ಮುಖ್ಯಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ಕಚೇರಿಯಲ್ಲಿದ್ದವರನ್ನು ಹೊರಗೆ ಕಳಿಸುವ ಭರದಲ್ಲಿ ಕಚೇರಿಯಲ್ಲಿ ಅಳವಡಿಸಲಾಗಿದ್ದ ಕೌಂಟರ್ ಗಾಜು ಪುಡಿ, ಪುಡಿಯಾಯಿತು. ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು.
ಪುರಸಭೆ ಅಧ್ಯಕ್ಷ ನಾಗೇಂದ್ರ, ಬಿಜೆಪಿ ಸದಸ್ಯ ಕೃಷ್ಣ ಸ್ಥಳಕ್ಕಾಗಮಿಸಿದರು. ಈವೇಳೆ ಧರಣಿನಿರತರು ಅಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದರು. ಪುರಸಭೆ ಸದಸ್ಯ ಕೃಷ್ಣ,ನಾಗಣ್ಣ, ಗೋಪಿ, ಮುಖ್ಯಾಧಿಕಾರಿ ನಾಗರೀಕರು ಸೇರಿದಂತೆ ಸದಸ್ಯರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳುತ್ತಿಲ್ಲ. ಏರು ಧ್ವನಿಯಲ್ಲಿ ಬಾಯಿಗೆಬಂದಂತೆ ಮಾತನಾಡುತ್ತಾರೆಂದು ಅರೋಪಿಸಿ, ಕಾನೂನಿನ ಪ್ರಕಾರ ಮಾಡುತ್ತೇನೆ ಎನ್ನುತ್ತಾರೆ. ಅದರೆ, ಪುರಸಭೆ ಕಟ್ಟಡ ಉದ್ಘಾಟನೆ ಸಮಯದಲ್ಲಿ ಬೇಕೆಂದೆ ಪಿಎಲ್‌ಡಿಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್ ಅವರನ್ನು ಕರೆಸದೆ, ಅವಮಾನ ಮಾಡಿ ಕಾಂಗ್ರೆಸ್‌ನ ಮುಖಂಡರನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಕೂರಿಸಿ ಕಾಂಗ್ರೆಸ್ ಎಜೆಂಟರಂತೆ ನಡೆದುಕೊಂಡಿ ದ್ದಾರೆ. ಪುರಸಭೆ ಅಧ್ಯಕ್ಷರಿಗೆ ಗೌರವ ತೋರಿಲ್ಲ ಇಂತಹ ಅಧಿಕಾರಿಯನ್ನು ಒಲೈಸಬೇಡಿ ಎಂದರು.
ಅಧ್ಯಕ್ಷ ನಾಗೇಂದ್ರ ಧರಣಿ ನಿರತರ ಸಮಾಧಾನಗೊಳಿಸಿ ನಾಳೆಯಿಂದಲೆ ಪಾರ್ಕ್ ನಿರ್ವಹಣೆಗೆ ವ್ಯವಸ್ಥೆಗೊಳಿಸುವಂತೆ, ಮುಖ್ಯಾಧಿಕಾರಿಗಳು ಮುಂದಿನ ದಿನದಲ್ಲಿ ಈ ರೀತಿ ವರ್ತಿಸದಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಧರಣಿಕೊನೆಗೊಳಿಸಿದರು.
ಪುರಸಭೆ ಸದಸ್ಯ ಕುಮಾರ್ ಪ್ರಮುಖರಾದ, ಶ್ರೀನಿವಾಸ್, ಚಂದ್ರಶೇಖರ್, ವೆಂಕಟೇಶ್, ವರದರಾಜು, ಶಿವಣ್ಣ, ಶರತ್, ರಾಜೇಶ್, ಅನೂಪ್, ಸಲ್ಮಾನ್‌ಖಾನ್, ಅವಿನಾಶ, ರಮೇಶ, ರಾಜು, ಲಕ್ಕಣ್ಣ, ಸುರೇಶ, ಪ್ರಶಾಂತ್, ದೇವರಾಜ, ಪ್ರಕಾಶ ಇತರರು ಇದ್ದರು.
ಪುರಸಭೆ ಉದ್ಯಾನವನ ನಿರ್ವಹಣೆಗೆ ಆಗ್ರಹಿಸಿ ಪುರಸಭೆ ಸದಸ್ಯರಿಂದಲೇ ಧರಣಿ
Get real time updates directly on you device, subscribe now.
Next Post
Comments are closed.