ಕಾರು ಕದಿಯುತ್ತಿದ್ದ ಖತರ್ನಾಕ್‌ ಕಳ್ಳನ ಬಂಧನ

306

Get real time updates directly on you device, subscribe now.

ತುಮಕೂರು: ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳನ್ನು ತನ್ನ ವಿಶೇಷ ಟೆಕ್ನಿಕ್‌ ಬಳಸಿ ಆರು ನಿಮಿಷದಲ್ಲಿಯೇ ಕಾರುಗಳನ್ನು ಎಗರಿಸುತ್ತಿದ್ದ ಖತರ್ನಾಕ್‌ ಅಂತರಾಜ್ಯ ಕಳ್ಳನನ್ನು ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಾಪುರ್‌, ಬಂಧಿತ ವ್ಯಕ್ತಿ ತಮಿಳುನಾಡು ಮೂಲದ ಮಧುರೈನ ಪರಮೇಶ್ವರನ್‌ ಎಂಬಾತ ಇಂಜಿನಿಯರಿಂಗ್‌ ಪದವೀಧರನಾಗಿದ್ದು, ಆನ್‌ಲೈನ್‌ ಮೂಲಕ ಖರೀದಿಸಿದ್ದ ಉಪಕರಣಗಳನ್ನು ಬಳಸಿ ಹಿಂಬದಿಯ ಗಾಜು ತೆರೆದು ಕಾರು ಪ್ರವೇಶಿಸಿ ಸೆಂಟರ್‌ ಕಂಟ್ರೋಲಿಂಗ್‌ ಗೆ ಸೆನ್ಸಾರ್‌ ವಿಫಲಗೊಳಿಸಿ ಕೆಲವೇ ನಿಮಿಷಗಳಲ್ಲಿ ಕಾರನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ಮಾಹಿತಿ ನೀಡಿದರು.
ಕಾರು ಕಳವು ಮಾಡಿ ಹೋಗುವಾಗ ಚೆಕ್‌ಪೋಸ್ಟ್ ಅಥವಾ ಟೋಲ್ ಗಳಲ್ಲಿ ತಪಾಸಣೆ ಅಥವಾ ಅನುಮಾನ ಬಾರದಿರಲಿ ಎನ್ನುವ ಕಾರಣಕ್ಕೆ ಕುಟುಂಬ ಸಮೇತ ಪ್ರಯಾಣ ಬೆಳೆಸುತ್ತಿದ್ದೇವೆ ಎಂದು ನಂಬಿಸಲು ಕಾರಿನಲ್ಲಿ ಕಾಲ್‌ ಗರ್ಲ್ಸ್ ಕರೆದುಕೊಂಡು ಬಂದು ತಮಿಳುನಾಡು ಪ್ರವೇಶಿಸುತ್ತಿದ್ದಂತೆ ಅವರನ್ನು ಟೋಲ್‌ ಬಳಿ ಇಳಿಸಿ ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟೋಲ್‌ಗಳಲ್ಲಿ ಮತ್ತು ಚೆಕ್‌ಪೋಸ್ಟ್ ಗಳಲ್ಲಿ ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಬಾರದು ಎಂಬ ಕಾರಣಕ್ಕೆ ತಮಿಳುನಾಡಿನ ಪತ್ರಿಕೆಯೊಂದರ ನಕಲಿ ಐಡಿ ಕಾರ್ಡನ್ನು ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದ ಆರೋಪಿ ಪರಮೇಶ್ವರನ್‌, ಗಂಟೆಗೆ 120 ರಿಂದ 180 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುವಲ್ಲಿ ಎಕ್ಸ್ ಪರ್ಟ್‌ ಆಗಿದ್ದು, 1200 ಕಿ.ಮೀ ದೂರವನ್ನು ಕೇವಲ 8 ಗಂಟೆಗಳಲ್ಲಿ ತಲುಪುತ್ತಿದ್ದು, ತುಮಕೂರಿನ ಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಗುರುಪ್ರಸಾದ್‌ ನೇತೃತ್ವದಲ್ಲಿ ರಚನೆಯಾದ ತಂಡ ನಿರಂತರ ಪ್ರಯತ್ನ ನಡೆಸಿ ಈತನನ್ನು ಬಂಧಿಸಿದೆ. ಈತನಿಂದ ತುಮಕೂರು ನಗರದ 3 ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ 9 ಪ್ರಕರಣ ಪತ್ತೆ ಹಚ್ಚಿ ಕಾರುಗಳನ್ನು ಒಳಪಡಿಸಿಕೊಂಡಿದೆ, ಈತ 2011 ರಿಂದಲೂ ಗೋವಾ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಒಟ್ಟು 26 ಪ್ರಕರಣಗಳಲ್ಲಿ ಕಾರು ಎಗರಿಸಿದ್ದಾನೆ.

Get real time updates directly on you device, subscribe now.

Comments are closed.

error: Content is protected !!