ಕ್ರಷರ್‌ ಲಾರಿ ತಡೆದು ಸಾರಿಗೆ ಇಲಾಖೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಅವೈಜ್ಞಾನಿಕ ವಾಹನ ಚಾಲನೆ ವಿರುದ್ಧ ಆಕ್ರೋಶ

646

Get real time updates directly on you device, subscribe now.

ಕೊರಟಗೆರೆ: ಕಲ್ಲುಗಣಿ ಗಾರಿಕೆ ಮತ್ತು ಜಲ್ಲಿ ಕ್ರಷರ್‌ನ ಅವೈಜ್ಞಾನಿಕ ವಾಹನ ಚಾಲನೆಯಿಂದ ರೈತಾಪಿವರ್ಗ ಹಾಗೂ ಸಾರ್ವಜನಿಕರಿಗೆ ರಸ್ತೆಯಲ್ಲಿ ಚಲಿಸಲು ಭಯ ಪಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿ ಸ್ಥಳೀಯ ರೈತರು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಶಾರದ ಮಠದ ಸಮೀಪದ ತೋವಿನಕೆರೆ ರಸ್ತೆಯಲ್ಲಿ 40ಕ್ಕೂ ಅಧಿಕ ಜಲ್ಲಿ ತುಂಬಿದ ಲಾರಿಗಳನ್ನು ತಡೆದುಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ ಮತ್ತು ಪಿಡ್ಲ್ಯೂಡಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜುಂಜುರಾಮನಹಳ್ಳಿ ಸ್ಥಳೀಯ ವಾಸಿ ವೀರಣ್ಣಗೌಡ ಮಾತನಾಡಿ ಬಿಕ್ಕೆಗುಟ್ಟೆ ಕಲ್ಲುಗಣಿಗಾರಿಕೆ ಪ್ರದೇಶದಿಂದ ತೋವಿನಕೆರೆ ಮಾರ್ಗವಾಗಿ ಪ್ರತಿನಿತ್ಯ ನೂರಾರು ಲಾರಿಗಳು ಚಲಿಸುತ್ತಿವೆ. ಬಾರದ ಮೀತಿ ಹೆಚ್ಚಾಗಿ ರಸ್ತೆ ಮತ್ತು ಸೇತುವೆ ಬಿರುಕುಬಿಟ್ಟಿವೆ. ಜಲ್ಲಿಲಾರಿ ಮತ್ತು ಚಾಲಕರಿಗೆ ಚಾಲನಾ ಪರವಾನಗಿ ಇಲ್ಲದೇ ವಾಹನ ಚಲಾಯಿಸುತ್ತಾರೆ. ಕಂದಾಯ ಮತ್ತು ಸಾರಿಗೆ ಇಲಾಖೆ ಮೌನ ಹಲವು ಅನುಮಾನ ಮೂಡುತ್ತಿವೆ ಎಂದು ಆರೋಪ ಮಾಡಿದರು.
ಕುರಂಕೋಟೆ ಸ್ಥಳೀಯ ವಾಸಿಯಾದ ಮನೋಹರ್‌ ಮಾತನಾಡಿ, ಬಿಕ್ಕೆಗುಟ್ಟೆ ಕಲ್ಲುಗಾರಿಕೆ ಬ್ಲಾಸ್ಟಿಂಗ್‌ ಶಬ್ದಕ್ಕೆ ಬಡವರ ಮನೆಗಳೆಲ್ಲ ಬಿರುಕುಬಿಟ್ಟಿವೆ. ಜಲ್ಲಿ ವಾಹನದ ಮೇಲೆ ಟಾರ್ಪಲ್‌ ಮತ್ತು ನೀರು ಹಾಕದಿರುವ ಪರಿಣಾಮ ಹಿಂಬದಿ ವಾಹನಕ್ಕೆ ಸಂಕಷ್ಟ ಎದುರಾಗಿದೆ. ಬಲಿಷ್ಠ ರಾಜಕಾರಣಿ ಮತ್ತು ಸರಕಾರದ ಶಕ್ತಿ ಬಳಸಿಕೊಂಡು ಅಧಿಕಾರಿಗಳ ಮೂಲಕ ಜನಸಾಮಾನ್ಯರ ಮೇಲೆ ದಬ್ಬಾಳಿಕೆಯ ಪ್ರಯತ್ನ ನಡೆಯುತ್ತಿದೆ. ರೈತರ ಕೃಷಿ ಭೂಮಿ ಮತ್ತು ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧುಗಿರಿ ಸಾರಿಗೆ ಇಲಾಖೆಯ ಎಆರ್‌ಟಿಓ ಸುಧಾ ಮಾತನಾಡಿ, ಓವರ್‌ಲೋಡ್‌ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದ 6 ಲಾರಿಗಳಿಗೆ ಪೈನ್‌ ಹಾಕಲಾಗಿದೆ. ಲಾರಿಗಳ ದಾಖಲೆ ಮತ್ತು ಚಾಲನಾ ಪರವಾನಗಿ ಇಲ್ಲದವರ ಮೇಲೆ ಪ್ರಕರಣ ದಾಖಲು ಮಾಡುತ್ತೆವೆ. ಮಧುಗಿರಿ ಕಚೇರಿ ಆವರಣದಲ್ಲಿ ಜಾಗದ ಸಮಸ್ಯೆಇರುವುದರಿಂದ ದಂಡ ಹಾಕಿ ಬಿಡಲಾಗಿದೆ. ಖಾಲಿ ವಾಹನಗಳ ದಾಖಲೆ ಪರಿಶೀಲನೆ ನಡೆಸಿ ಬಿಡುತ್ತೇವೆ ಎಂದು ಮಾಹಿತಿ ನೀಡಿದರು.
ಸ್ಥಳೀಯರು ಪ್ರತಿಭಟನೆ ನಡೆಸಿದಾಗ ನೇಪ ಮಾತ್ರಕ್ಕೆ ಸ್ಥಳಕ್ಕೆ ಬರುತ್ತೀರಾ, ರಾಜಕಾರಣಿಗಳ ಪರವಾಗಿ ಕೆಲಸ ಮಾಡ್ತೀರಾ, ಜನಸಾಮಾನ್ಯರು ತಪ್ಪು ಮಾಡಿದರೆ ನೀವು ಬೀಡ್ತಿರಾ, ನೀವು ಹೇಗೆ ಲಾರಿಗಳನ್ನು ಪರಿಶೀಲನೆ ನಡೆಸದೆ ಬಿಡುತ್ತೀರಾ, ಸಾರಿಗೆ ಇಲಾಖೆ ನಿಯಮವೇನು, ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯನಾ ಎಂದು ಶಾರದಮಠದ ತೋವಿನಕೆರೆ ರಸ್ತೆಯಲ್ಲಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಾರಿಗೆ ಇಲಾಖೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಶಿವಕುಮಾರ್‌, ಮಂಜುನಾಥ, ದೊಡ್ಡಯ್ಯ, ಸಿದ್ದರಾಜು, ನಟರಾಜು, ರಂಗರಾಜು, ಹನುಮಂತರಾಯಪ್ಪ, ಗಿರೀಶ್‌, ರಾಮಯ್ಯ, ಅನಂತರಾಜು, ಮೋಹನಕುಮಾರ್‌, ಕಾಂತರಾಜು, ಹರೀಶ್‌, ಉಮೇಶ್‌, ರಂಗಣ್ಣ, ರಾಮಯ್ಯ, ರಾಜೇಶ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!