10 ಕುರಿ ಮರಿ ಸಾವು- 25 ಕುರಿ, ಮೇಕೆಗಳಿಗೆ ಗಾಯ

ಅಕ್ಕಿರಾಂಪುರ ಕುರಿ ಸಂತೆಯಲ್ಲಿ ಲಾರಿ ಪಲ್ಟಿ

277

Get real time updates directly on you device, subscribe now.

ಕೊರಟಗೆರೆ: ಅಕ್ಕಿರಾಂಪುರ ಕುರಿ- ಮೇಕೆ ಸಂತೆಗೆ ಬಂದಿದ್ದ ಲಾರಿಯೊಂದು ಅವೈಜ್ಞಾನಿಕ ರಸ್ತೆ ತಿರುವುನಲ್ಲಿ ಪಲ್ಟಿ ಹೊಡೆದಿರುವ ಪರಿಣಾಮ 10 ಕುರಿ ಸ್ಥಳದಲ್ಲಿಯೇ ಮೃತಪಟ್ಟರೇ 25 ಕ್ಕೂ ಹೆಚ್ಚು ಕುರಿಗಳ ಕೈ ಕಾಲು ಮುರಿದು ಹತ್ತಾರು ಜನ ರೈತರು ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಲು ಚೆಲ್ಲಾಪಿಲ್ಲಿ ಆಗಿ ಕುರಿಗಳನ್ನು ಬಿಟ್ಟು ಓಡಿರುವ ಘಟನೆ ಶನಿವಾರ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಕೇಂದ್ರ ಸ್ಥಾನದ ಕುರಿ ಮೇಕೆ ಸಂತೆಗೆ ಮೈಸೂರಿನಿಂದ ಕುರಿಗಳ ಖರೀದಿಗೆ ಬಂದಿದ್ದ ಲಾರಿಯೊಂದು ಕೆಸರು ಗದ್ದೆಯ ಮಣ್ಣಿನ ರಸ್ತೆಯಲ್ಲಿ ಜಾರಿ ನೋಡ ನೋಡುತ್ತಿದ್ದಂತೆ ಪಲ್ಟಿ ಹೊಡೆದ ಪರಿಣಾಮ ರೈತಾಪಿ ವರ್ಗ ಭಯದಿಂದ ಚೆಲ್ಲಾಪಿಲ್ಲಿಯಾಗಿ ತಾವು ತಂದಿದ್ದ ಕುರಿಗಳನ್ನು ಬಿಟ್ಟು ಭಯದಿಂದ ಓಡಿದ ಘಟನೆ ನಡೆದಿದೆ.
ಮೈಸೂರು ಮೂಲದ ಲಾರಿ ಚಾಲಕ ಬಾಬಣ್ಣ ಮಾತನಾಡಿ, ಅಕ್ಕಿರಾಂಪುರ ಕುರಿ ಮೇಕೆ ಸಂತೆ ಕೆಸರು ಗದ್ದೆಯಾಗಿದೆ. ಮೂಲ ಸೌಲಭ್ಯದ ಜೊತೆ ರಸ್ತೆಯು ಸರಿಯಿಲ್ಲ. ಸಂತೆಯಿಂದ ರಸ್ತೆ ದಾಟುವ ವೇಳೆ ಲಾರಿ ಪಲ್ಟಿ ಹೊಡೆದಿದೆ. ಲಾರಿಯಲ್ಲಿದ್ದ 10 ಕುರಿ ಮೃತಪಟ್ಟರೆ 25 ಕ್ಕೂ ಹೆಚ್ಚು ಕುರಿಗಳಿಗೆ ಗಾಯಗಳಾಗಿವೆ. ನಮ್ಮ ಬಳಿ ಸುಂಕ ವಸೂಲಿ ಮಾಡ್ತಾರೆ, ಆದರೆ ಸಮರ್ಪಕ ರಸ್ತೆ ಮಾಡಿಸಿಲ್ಲ ಎಂದು ಆರೋಪಿಸಿದರು.
ಅಕ್ಕಿರಾಂಪುರದ ಸೈಯದ್‌ ಹುಸೇನ್ ಪಾಷ ಮಾತನಾಡಿ ಕೇಬಲ್‌ ಲೈನ್‌ ಅವೈಜ್ಞಾನಿಕ ದುರಸ್ಥಿ ಕಾಮಗಾರಿಯಿಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅಕ್ಕಿರಾಂಪುರ ಕುರಿ ಮೇಕೆ ಸಂತೆ ಕೆಸರು ಗದ್ದೆಯಾಗಿ ಕುಡಿಯುವ ನೀರು, ಶೌಚಾಲಯ, ರಸ್ತೆ ಮತ್ತು ಬೆಳಕು ಮರೀಚಿಕೆ ಆಗಿದೆ. ಹಣ ವಸೂಲಿಗೆ ಮಾತ್ರ ಬರುವ ಅಧಿಕಾರಿ ವರ್ಗಅಭಿವೃದ್ಧಿ ಎಂದರೆ ದೂರಕ್ಕೆ ಹೋಗ್ತಾರೆ ಎಂದು ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಕ್ಕಿರಾಂಪುರ ಸಂತೆ ಕಾವಲುಗಾರ ಎಲ್‌.ಎನ್‌.ರೆಡ್ಡಿ ಮಾತನಾಡಿ ನಾವು ಕುರಿ ಮೇಕೆ ಒಂದಕ್ಕೆ 5 ರೂ. ವಸೂಲಿ ಮಾಡ್ತೀವಿ, ವಾಹನ ಚಾಲಕರ ಬಳಿ ಮಾತ್ರ ಹಣ ಪಡೆಯುತ್ತೇವೆ, ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಹೇಳಿದಂತೆ ವಸೂಲಿ ಮಾಡುತ್ತೇವೆ. ನಾವು ವಸೂಲಿ ಮಾಡಿದ ಹಣವನ್ನು ಕಾರ್ಯದರ್ಶಿಗೆ ಕೋಡ್ತೇವೆ. ಮಿಕ್ಕಿದ್ದೆಲ್ಲ ನೀವು ಅವರಿಗೆ ಕೇಳ್ಬೇಕು, ನನಗೆ ಏನು ಗೊತ್ತಿಲ್ಲ, ಅವರು ಹೇಳಿದಂತೆ ನಾವು ಕೇಳುತ್ತೇವೆ ಎಂದು ಹೇಳಿದರು.
ಅಕ್ಕಿರಾಂಪುರ ಕುರಿಮೇಕೆ ಸಂತೆಯಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ಚರಂಡಿ ಮತ್ತು ಬೆಳಕು ಮರೀಚಿಕೆ ಆಗಿದೆ. ಆದರೆ ಸುಂಕ ಮಾತ್ರಒಬ್ಬರ ಹತ್ತಿರನೂ ಬಿಡದಂತೆ ವಸೂಲಿ ಮಾಡ್ತಾರೆ. ಪ್ರಶ್ನೆ ಮಾಡಿದರೆ ರೈತಾಪಿ ವರ್ಗ ಮತ್ತು ವಾಹನ ಚಾಲಕರಿಗೆ ಗೇಟಿನಿಂದ ಹೊರಗಡೆ ನಿಲ್ಲಿಸುವ ಸನ್ನಿವೇಶವು ಜರುಗಿದೆ. ವಾಹನ ಸೇರಿದಂತೆ ರೈತರ ಬಳಿಯು ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಾರೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!