ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ಮುದ್ದಾಪುರ ಗೊಲ್ಲರಹಟ್ಟಿ ಗ್ರಾಮದ ನಾಗರಾಜು ಅವರ ಕೊಟ್ಟಿಗೆ ಮನೆಯ ಪಕ್ಕದಲ್ಲಿ ಕಾಲುದಾರಿಯಲ್ಲಿ ಚೇಳೂರು ಹೋಬಳಿಯ ಹುಚ್ಚರಂಗಪ್ಪನ ಹಟ್ಟಿಯ ಉಗ್ರಪ್ಪ (60) ನಡೆದುಕೊಂಡು ಹೋಗುವಾಗ ಅವರ ಮೇಲೆ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ.
ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಕುಸಿತಗೊಂಡಿದ್ದು ಅದರ ಕೆಳಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ಥಳಕ್ಕೆ ತಹಶೀಲ್ದಾರ್ ಪಿ.ಆರತಿ, ವೃತ್ತ ಪೊಲೀಸ್ ನಿರೀಕ್ಷಿಕ ಕೆ.ನದಾಫ್, ಪಿಎಸ್‌ಐ ವಿಜಯ ಕುಮಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮನೆಗೋಡೆ ಕುಸಿದು ವೃದ್ಧ ಸಾವು
Get real time updates directly on you device, subscribe now.
Prev Post
Next Post
Comments are closed.